T-20I ಪವರ್ ಹಿಟ್ಟರ್ ಅಭಿಷೇಕ್ – ವಿಶ್ವಕಪ್ ಗೆಲ್ಲಲು ಯುವಿ ಶಿಷ್ಯನೇ ಶಕ್ತಿ
190+ ಸ್ಟ್ರೈಕ್ ರೇಟ್.. ಹೇಗಿದೆ ಖದರ್?

ಟೀಂ ಇಂಡಿಯಾದ ಟಿ-20ಐ ಮ್ಯಾಚ್ಗಳು ಸ್ಟಾರ್ಟ್ ಆಗುತ್ತೆ ಅಂದ್ರೆ ಅಭಿಮಾನಿಗಳಿಗೆ ಖುಷಿಯೋ ಖುಷಿ. ಯಾಕಂದ್ರೆ ಅಭಿಷೇಕ್ ಶರ್ಮಾ ಅವ್ರ ಬ್ಯಾಟಿಂಗ್ ಖದರ್ ಎಂಜಾಯ್ ಮಾಡ್ಬೋದಲ್ಲ ಅಂತಾ. ಆ ಮಟ್ಟಿಗೆ ಫ್ಯಾನ್ಸ್ ಅಭಿಷೇಕ್ ಆರ್ಭಟಕ್ಕೆ ಫಿದಾ ಆಗಿದ್ದಾರೆ. ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಟಿ-20ಐ ಸಿರೀಸ್ನಲ್ಲೂ ಆಲ್ರೆಡಿ ಪವರ್ಹಿಟ್ಟಿಂಗ್ ಸ್ಟಾರ್ಟ್ ಸಿಕ್ಕಿದೆ. 190ಪ್ಲಸ್ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸ್ತಿರೋ ಅಭಿಷೇಕ್ ಭಾರತ ಟಿ-20ಐ ತಂಡದ ಗೋಲ್ಡನ್ ಬ್ಯಾಟರ್.
ಇದನ್ನೂ ಓದಿ : ಟ್ರಾಫಿಕ್‌ನಲ್ಲಿ ಬೆಂಗಳೂರೇ ವಿಶ್ವಕ್ಕೆ .ನಂ. 2 – 10 ಕಿ.ಮೀ. ಸಂಚಾರಕ್ಕೆ ಬೇಕು 40 ನಿಮಿಷ!
ಭಾರತದ ಪರ ಟಿ-20ಐನಲ್ಲಿ ಸ್ಫೋಟಕ ಓಪನರ್ ಆಗಿರೋ ಅಭಿಷೇಕ್ ಶರ್ಮಾ ಕೆಲ ಪಂದ್ಯಗಳಲ್ಲಿ ಒನ್ ಮ್ಯಾನ್ ಶೋ ಥರ ಆರ್ಭಟಿಸಿ ಗೆಲ್ಲಿಸಿಕೊಟ್ಟಿದ್ದಾರೆ. ಟಿ-20 ವಿಶ್ವಕಪ್ ಹೊಸ್ತಿಲಲ್ಲಿ ಅವ್ರ ಅಗ್ರೆಸ್ಸಿವ್ ಬ್ಯಾಟಿಂಗ್ ತಂಡಕ್ಕೆ ಆನೆ ಬಲ ಇದ್ದಂತೆ. ಪವರ್ ಪ್ಲೇನಲ್ಲೇ ಪವರ್ ಶೋ ತೋರಿಸೋ ಅಭಿಷೇಕ್ 2011 ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿದ ಹುಡುಗ. ಲೆಫ್ಟ್ ಹ್ಯಾಂಡ್ ಬ್ಯಾಟರ್ ಆಗಿರುವ ಅಭಿ ಫೋರ್ಗಿಂತ ಜಾಸ್ತಿ ಸಿಕ್ಸ್ಗಳಲ್ಲೇ ಡೀಲ್ ಮಾಡ್ತಾರೆ. ಅದ್ರಲ್ಲೂ ಅವ್ರ ಸ್ಟ್ರೈಕ್ ರೇಟ್ ನ ಯಾರಿಂದಲೂ ಕ್ಯಾಚ್ ಮಾಡೋದು ಕಷ್ಟವೇ ಎನ್ನುವಂತಾಗಿದೆ.
ಕೊಹ್ಲಿ, ಗೇಲ್, ರೋಹಿತ್ ಗಿಂತಲೂ ಅದ್ಭುತ ಸ್ಟ್ರೈಕ್ ರೇಟ್!
ಅಭಿಷೇಕ್ ಶರ್ಮಾ ಅವ್ರ ಸ್ಟ್ರೈಕ್ ರೇಟ್ ಯಾವ ಮಟ್ಟಿಗಿದೆ ಅಂದ್ರೆ ಒಂದೊಂದು ಪಂದ್ಯ ಮುಗಿದ್ಮೇಲೂ ಒಂದಷ್ಟು ರೆಕಾರ್ಡ್ಸ್ ಕ್ರಿಯೇಟ್ ಆಗ್ತಿದೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ರು. ಇದು ನ್ಯೂಜಿಲೆಂಡ್ ವಿರುದ್ಧ ಭಾರತೀಯ ಬ್ಯಾಟರ್ ಗಳಿಸಿದ ಅತ್ಯಂತ ವೇಗದ ಅರ್ಧಶತಕದ ದಾಖಲೆಯಾಗಿದೆ. ಇದೇ ರೀತಿಯ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ರಿಂದ ಆಗದ ಸಾಧನೆ ಮಾಡಿದ್ದಾರೆ. ಅಂದ್ರೆ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 5,000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಕೇವಲ 2,898 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು, ಈ ದಾಖಲೆ ಆಂಡ್ರೆ ರಸೆಲ್ ಹೆರಲ್ಲಿತ್ತು. ಅವರು 2,942 ಎಸೆತಗಳಲ್ಲಿ 5,000 ರನ್ ಗಳಿಸಿದ್ದರು. ಪ್ರಸ್ತುತ 35 ಅಂತಾರಾಷ್ಟ್ರೀಯ ಪಂದ್ಯಗಳಿಂದ 1200ಕ್ಕೂ ಹೆಚ್ಚು ರನ್ಸ್ ಕಲೆ ಹಾಕಿದ್ದಾರೆ. ಹಾಗೇ ವಿಶ್ವದ ನಂ. 1 ಟಿ20 ಬ್ಯಾಟ್ಸ್‌ಮನ್ ಆಗಿದ್ದಾರೆ. 25 ವರ್ಷ ವಯಸ್ಸಿನ ಅಭಿಷೇಕ್ 2026ರ ತಮ್ಮ ಮೊದಲ ಪಂದ್ಯದಲ್ಲೇ ಎಂಟು ಸಿಕ್ಸರ್‌ಗಳನ್ನು ಸಿಡಿಸಿದ್ರು. ನ್ಯೂಜಿಲೆಂಡ್ ವಿರುದ್ಧದ ಟಿ20ಐ ಇನ್ನಿಂಗ್ಸ್ ಒಂದರಲ್ಲಿ ಈ ಸಾಧನೆ ಮಾಡಿದ ಮೊದಲ ಏಷ್ಯಾದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಟಿ-20ಐ ಮಾದರಿಯಲ್ಲಿ 190ಪ್ಲಸ್ ಸ್ಟ್ರೈಕ್ ರೇಟ್ ಕಾಯ್ದುಕೊಳ್ತಿರೋದು ಅತಿದೊಡ್ಡ ಸಾಧನೆಯಾಗಿದೆ. ಹಾಗೇ 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಹೆಚ್ಚು ಬಾರಿ ಅರ್ಧಶತಕ ಸಿಡಿಸಿರುವ ಆಟಗಾರನಾಗಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟಾಪ್ 1 ಪ್ಲೇಸ್ನಲ್ಲಿದ್ದಾರೆ. ಎಂಟು ಬಾರಿ ಈ ಸಾಧನೆ ಮಾಡಿದ್ದಾರೆ. ಇದು ಸಹ ವಿಶ್ವ ದಾಖಲೆಯಾಗಿದೆ. ಹೀಗೆ ಪಂದ್ಯದಿಂದ ಪಂದ್ಯಕ್ಕೆ ಬೆಟರ್ ಆಗ್ತಾನೇ ಹೋಗ್ತಿರೋ ಅಭಿಷೇಕ್ ಅವ್ರ ಸಕ್ಸಸ್ ಸೀಕ್ರೆಟ್ ಯುವರಾಜ್ ಸಿಂಗ್.
ಯುವಿ ಶಿಷ್ಯ ಅಭಿಷೇಕ್ ಈಗ ಟಿ-20ಐ ಸ್ಪೆಷಲಿಸ್ಟ್ ಬ್ಯಾಟರ್!
ಮಾರ್ಡ್ರೆನ್ ಕ್ರಿಕೆಟ್‌ನಲ್ಲಿ ಬ್ಯಾಟರ್ಗಳಿಗೆ ಹೆಚ್ಚು ರಾಜಮರ್ಯಾದೆ ಸಿಗುತ್ತೆ. ಅದ್ರಲ್ಲೂ ಪವರ್ ಹಿಟ್ಟರ್ಸ್ ಅಂದ್ರೆ ಫ್ಯಾನ್ಸ್ ಬೇಸ್ ಕೂಡ ಜಾಸ್ತಿಯಾಗುತ್ತೆ. ಅಭಿಷೇಕ್ ಕೂಡ ಸ್ಫೋಟಕ ಇನ್ನಿಂಗ್ಸ್ ಮೂಲಕವೇ ಸದ್ದು ಮಾಡ್ತಿದ್ದಾರೆ. ಐಪಿಎಲ್‌ನಲ್ಲಿ ಅಗ್ರೆಸ್ಸಿವ್ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದು 2024ರ ಜುಲೈನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ರು. ತಾವಾಡಿದ 2ನೇ ಪಂದ್ಯದಲ್ಲೇ ಸೆಂಚುರಿ ಸಿಡಿಸಿದ್ರು. ಅದೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ಶತಕ ಪೂರ್ಣಗೊಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ರು. ಅಷ್ಟಕ್ಕೂ ಅಭಿಷೇಕ್ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿದವರು. ಕೋವಿಡ್ ಸಮಯದಲ್ಲಿ ಯುವರಾಜ್‌ರ ಮನೆಯಲ್ಲೇ ತರಬೇತಿ ಪಡೆದಿದ್ದರು. ಶುಭಮನ್ ಗಿಲ್, ಪ್ರಭ್ಸಿಮ್ರನ್ ಸಿಂಗ್, ಅನ್ಮೋಲ್‌ಪ್ರೀತ್ ಕೂಡ ತರಬೇತಿ ಪಡೀತಿದ್ರು. ಈ ಕ್ಯಾಂಪ್ಗಳೇ ಅಭಿಷೇಕ್ ಪ್ರತಿಭೆಯನ್ನ ಹೊರತರಲು ಸಾಧ್ಯವಾಯ್ತು. ಅಭಿಷೇಕ್ ಕೂಡ ತಮ್ಮ ಆಟದ ಹಿಂದೆ ಇರೋದು ಯುವಿ ಅಂತಾ ಸಾಕಷ್ಟು ಬಾರಿ ಹೇಳ್ಕೊಂಡಿದ್ದಾರೆ ಕೂಡ. ಈಗ ಯುವಿ ಹೆಸರಿನಲ್ಲಿ ಸಾಕಷ್ಟು ರೆಕಾರ್ಡ್ಸ್ ಕೂಡ ಅಭಿಷೇಕ್ ಬ್ರೇಕ್ ಮಾಡ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಟಿ-20ಐ ಸರಣಿ ಗೆಲ್ಲಲು ಹಾಗೇ ಭಾರತ ಟಿ-20 ವಿಶ್ವಕಪ್ ಚಾಂಪಿಯನ್ ಶಿಪ್ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಅಭಿಷೇಕ್ ಶರ್ಮಾ ಅವ್ರ ಪರ್ಫಾಮೆನ್ಸ್ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ.

ನೋಡಿರಿ

