T-20Iನಲ್ಲಿ ಶುರು ಕ್ಯಾಪ್ಟನ್ಸಿ ರೇಸ್ – ಪಾಂಡ್ಯ Vs ಸಂಜು Vs ಅಕ್ಷರ್!
ಅಭಿಷೇಕ್ ಗೆ ಒಲಿಯುತ್ತಾ ಅದೃಷ್ಟ?

T-20Iನಲ್ಲಿ ಶುರು ಕ್ಯಾಪ್ಟನ್ಸಿ ರೇಸ್ – ಪಾಂಡ್ಯ Vs ಸಂಜು Vs ಅಕ್ಷರ್!ಅಭಿಷೇಕ್ ಗೆ ಒಲಿಯುತ್ತಾ ಅದೃಷ್ಟ?

ಟೀಂ ಇಂಡಿಯಾದಲ್ಲಿ ಆಡುವಾಗ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಬಂದ್ರಷ್ಟೇ ಸರ್ವೈವ್ ಆಗೋಕೆ ಸಾಧ್ಯ. ಇಲ್ದಿದ್ರೆ ಗೇಟ್​ಪಾಸ್ ಪಕ್ಕಾ. ಹೀಗಿದ್ರೂ ಟಿ-20ಐ ತಂಡದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್​ಗೆ ಅತಿದೊಡ್ಡ ಅವಕಾಶ ಸಿಕ್ಕಿದೆ. ಫಾರ್ಮ್​ನಲ್ಲಿ ಇಲ್ದಿದ್ರೂ ಟಿ-20 ವಿಶ್ವಕಪ್​ಗೆ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದಾರೆ. ಒಂದ್ ವೇಳೆ ಅಲ್ಲೂ ಫ್ಲ್ಯಾಪ್ ಶೋ ತೋರಿಸಿದ್ರೆ ಚುಟುಕು ಮಾದರಿಗೆ ಹೊಸ ನಾಯಕ ಬರೋದು ಪಕ್ಕಾ.

ಇದನ್ನೂ ಓದಿ : RCBಗೆ ಬಿಸಿತುಪ್ಪವಾದ ಯಶ್ ದಯಾಳ್ – ಬೇಲ್ ಅರ್ಜಿ ವಜಾ.. ಅರೆಸ್ಟ್ ಆಗ್ತಾರಾ?

2025ರಲ್ಲಿ ಟೀಂ ಇಂಡಿಯಾದ ಕಂಪ್ಲೀಟ್ ಜರ್ನಿಯಲ್ಲಿ ಟಿ-20 ಫಾರ್ಮೆಟ್​ನಲ್ಲಿ ಭಾರತ ಅನ್​ಬೀಟನ್ ಟೀಂ ಆಗಿದೆ. ಮ್ಯಾಚ್​ ಸೋತ್ರೂ ಒಂದೇ ಒಂದು ಸಿರೀಸ್ ಸೋತಿಲ್ಲ. ಗೆಲುವಿನ ಪರ್ಸೆಂಟೇಜ್ 85ಪ್ಲಸ್ ಇದೆ. ಹೀಗಿದ್ರೂ ತಂಡದಲ್ಲಿ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮತ್ತು ವೈಸ್ ಕ್ಯಾಪ್ಟನ್ ಆಗಿದ್ದ ಶುಭ್​ಮನ್ ಗಿಲ್ ಅವ್ರ ಕಳಪೆ ಫಾರ್ಮ್ ಅತಿದೊಡ್ಡ ಸಮಸ್ಯೆಯಾಗಿತ್ತು. ಹೀಗಾಗಿ ರಿಸ್ಕ್ ಬೇಡ ಅಂತಾ 2026ರ ಟಿ-20 ವಿಶ್ವಕಪ್ ತಂಡದಿಂದ ಶುಭ್​ಮನ್ ಗಿಲ್​ಗೆ ಗೇಟ್​ಪಾಸ್ ಕೊಟ್ಟಿದ್ದಾರೆ. ಬಟ್ ಲಾಸ್ಟ್ ಮೂಮೆಂಟ್​ನಲ್ಲಿ ಕ್ಯಾಪ್ಟನ್ಸಿ ಬದಲಾವಣೆ ಗೊಂದಲ ಬೇಡ ಅಂತಾ ಸೂರ್ಯಕುಮಾರ್​ರನ್ನ ನಾಯನನ್ನಾಗಿ ಮುಂದುವರಿಸಿದ್ದಾರೆ.  ಆದ್ರೆ ಟಿ-20 ವಿಶ್ವಕಪ್ ಬಳಿಕ ತಂಡದಲ್ಲಿ ಏನ್ ಬದಲಾವಣೆ ಬೇಕಿದ್ರೂ ಆಗ್ಬೋದು.

ಹಾರ್ದಿಕ್ ಪಾಂಡ್ಯ ದಿ ಬೆಸ್ಟ್ ಚಾಯ್ಸ್

ಟೀಂ ಇಂಡಿಯಾ ಟಿ-20ಐ ತಂಡ ಅಂತಾ ಬಂದಾಗ ಹಾರ್ದಿಕ್ ಪಾಂಡ್ಯ ದಿ ಬೆಸ್ಟ್ ಚಾಯ್ಸ್ ಆಗ್ತಾರೆ. ಸಾಕಷ್ಟು ಎಕ್ಸ್​ಪೀರಿಯನ್ಸ್ ಇದೆ. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡರಲ್ಲೂ ಇಂಪ್ಯಾಕ್ಟ್ ಮಾಡ್ತಾರೆ. ಌಂಡ್ ಕ್ಯಾಪ್ಟನ್ ಆಗಿಯೂ ಸಾಕಷ್ಟು ಅನುಭವ ಇದೆ. ಸೂರ್ಯಕುಮಾರ್ ನಾಯಕತ್ವ ವಹಿಸಿಕೊಳ್ಳುವ ಮೊದಲು ಗುಜರಾತ್ ಟೈಟಾನ್ಸ್ ಅನ್ನು ಐಪಿಎಲ್ ಪ್ರಶಸ್ತಿಗೆ ಕೊಂಡೊಯ್ದ ಅನುಭವ ಪಾಂಡ್ಯಗಿದೆ. ಹಾಗೇ ಭಾರತವನ್ನು 16 ಪಂದ್ಯಗಳಲ್ಲಿ ಮುನ್ನಡೆಸಿದ್ದು 10 ಗೆಲುವು ಸಾಧಿಸಿದ್ದಾರೆ. ಮೈದಾನದಲ್ಲಿ ಪ್ರತಿಯೊಂದು ಹಂತದಲ್ಲೂ ಪ್ರಭಾವ ಬೀರುವ ಪಾಂಡ್ಯ ಅವರ ಸಾಮರ್ಥ್ಯ ಎಲ್ಲರಿಗಿಂತ ಜಾಸ್ತಿನೇ ಇದೆ. ನಿಜ ಹೇಳ್ಬೇಕಂದ್ರೆ 2024ರಲ್ಲಿ ರೋಹಿತ್ ಹೊರ ಬಂದ್ಮೇಲೆ ಪಾಂಡ್ಯನೇ ಕ್ಯಾಪ್ಟನ್ಸಿ ರೇಸ್​ನಲ್ಲಿ ಫಸ್ಟ್ ಇದ್ದದ್ದು. ಆದ್ರೆ ಇಂಜುರಿ ಕಾರಣಕ್ಕೆ ಕೈಬಿಡಲಾಗಿತ್ತು. ಬಟ್ ಈಗ ಸೂಪರ್ ಫಾರ್ಮ್​ನಲ್ಲಿದ್ದು ಪಾಂಡ್ಯಗೆ ನಾಯಕತ್ವ ನೀಡಬಹುದು.

ಸ್ಫೋಟಕ ಓಪನರ್ ಸಂಜು ಸ್ಯಾಮ್ಸನ್ ಗೂ ಇದೆ ಅರ್ಹತೆ!

ಸಂಜು ಸ್ಯಾಮ್ಸನ್. ಪ್ರತಿಭಾನ್ವಿತ ಬ್ಯಾಟರ್ ಆಗಿದ್ರೂ ಟೀಂ ಇಂಡಿಯಾ ಅಂತಾ ಬಂದಾಗ ಸಾಕಷ್ಟು ಏರಿಳಿತಗಳನ್ನ ಕಂಡಿದ್ದಾರೆ. ತಂಡದಲ್ಲಿದ್ರೂ ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆಯೋದೇ ದೊಡ್ಡ ಸವಾಲಾಗಿದೆ. ಆದ್ರೆ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್‌ನೊಂದಿಗಿನ ಅವರ ನಾಯಕತ್ವ ನೆರವಾಗುತ್ತೆ. ಯಶಸ್ವಿಯಾಗಿ ತಂಡವನ್ನ ಲೀಡ್ ಮಾಡುವ ಸಾಮರ್ಥ್ಯ ಅವ್ರಲ್ಲಿದೆ. ಌಂಡ್ ಈಗ ಶುಭ್​ಮನ್ ಗಿಲ್ ಟಿ-20ಐ ತಂಡದಿಂದಲೇ ಹೊರ ಬಿದ್ದಿರೋದ್ರಿಂದ ಟಿ-20 ಟೀಮ್​ನಲ್ಲಿ ಅಭಿಷೇಕ್ ಶರ್ಮಾ ಜೊತೆ ಸಂಜು ಇನ್ನಿಂಗ್ಸ್ ಆರಂಭಿಸ್ತಾರೆ. ನ್ಯೂಜಿಲೆಂಡ್ ಸಿರೀಸ್ ಹಾಗೇ ವಿಶ್ವಕಪ್​ನಲ್ಲಿ ಕ್ಲಿಕ್ ಆದ್ರೆ ಸಂಜುಗೆ ನಾಯಕತ್ವದ ಅದೃಷ್ಟ ಒಲಿದ್ರೂ ಒಲಿಯಬಹುದು.

ರೇಸ್ ನಲ್ಲಿದ್ದಾರೆ ಆಲ್ ರೌಂಡರ್ ಅಕ್ಷರ್ ಪಟೇಲ್!

ಇನ್ನು ಕ್ಯಾಪ್ಟನ್ಸಿ ಚಾಯ್ಸ್​ನಲ್ಲಿ ಭಾರತ ತಂಡದ ಸ್ಟಾರ್ ಆಲ್​ರೌಂಡರ್ ಅಕ್ಷರ್ ಪಟೇಲ್ ಕೂಡ ಇದ್ದಾರೆ.  2024 ರ ಟಿ 20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪಟೇಲ್ ಅಲ್ಲಿಂದ ಈಚೆಗೆ ಸಾಕಷ್ಟು ಸಲ ಮ್ಯಾಚ್ ವಿನ್ನಿಂಗ್ ಪರ್ಫಾಮೆಬನ್ಸ್ ನೀಡಿದ್ದಾರೆ. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಮೇನ್ ವೆಪಲ್ ಆಗಿದ್ದಾರೆ.ಇದೇ ಕಾರಣಕ್ಕಾಗಿ 2026 ರ ಟಿ-20 ವಿಶ್ವಕಪ್ ತಂಡದಲ್ಲಿ  ಉಪನಾಯಕನಾಗಿ ಮರುನೇಮಕ ಮಾಡಲಾಗಿದೆ. ಇನ್ನು ಲಾಸ್ಟ್ ಸೀಸನ್​ ಐಪಿಎಲ್​ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ಅಕ್ಷರ್ ಕೂಲ್ ಕ್ಯಾಪ್ಟನ್ ಆಗಬಹುದು. ಸದ್ಯ ತಮ್ಮ ಕರಿಯರ್​ನ ಪೀಕ್​ನಲ್ಲಿರೋ ಪಟೇಲ್ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಸರಣಿಯಲ್ಲಿ ಶೈನ್ ಆದ್ರೆ ವಿಶ್ವಕಪ್ ಬಳಿಕ ಏನ್ ಬೇಕಾದ್ರೂ ಆಗ್ಬೋದು.

ಯಂಗ್ ಗನ್ ಅಭಿಷೇಕ್ ಗೆ ಒಲಿಯುತ್ತಾ ಕ್ಯಾಪ್ಟನ್ಸಿ?

ಭಾರತ ಟಿ-20ಐ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಹೆಸರೂ ಕೂಡ ರೇಸ್​ಗೆ ಬಂದಿದೆ. ಅವ್ರಿಗೆ ಟೀಂ ಇಂಡಿಯಾದಲ್ಲಿ ತುಂಬಾ ಎಕ್ಸ್​ಪೀರಿಯನ್​ಸ್ ಇಲ್ಲದೇ ಇರ್ಬೋದು. ಬಟ್ ಸೀನಿಯರ್​ಗಳೂ ನಾಚುವಂತೆ ಪರ್ಫಾಮ್ ಮಾಡ್ತಿದ್ದಾರೆ. ಹೀಗಾಗಿ ಅಭಿಷೇಕ್​ಗೆ ಕ್ಯಾಪ್ಟನ್ಸಿ ನೀಡಿದ್ರೆ ಭಾರತ T20 ಬ್ಯಾಟಿಂಗ್‌ನಲ್ಲಿ  ನಿರ್ಭೀತ, ಸ್ಫೋಟಕ ಮತ್ತು ಇನ್ನಷ್ಟು ಎಫೆಕ್ಟಿವ್ ಪರ್ಫಾಮೆನ್ಸ್ ಕೊಡ್ಬೋದು ಅನ್ನೋ ಲೆಕ್ಕಾಚಾರವೂ ಇದೆ.  ಹಾಗೇ ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ತಂಡವನ್ನ ಮುನ್ನಡೆಸಿದ ಅನುಭವ ಇದೆ. ಸೀನಿಯರ್ಸ್​ನ ಗಮನದಲ್ಲಿ ಇಟ್ಟುಕೊಂಡ್ರೂ ವಿಶ್ವಕಪ್ ನಂತರ ಅಭಿಷೇಕ್​ರನ್ನ ಉಪನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆಗಳೂ ಇವೆ.

ಭಾರತದ ಬೌಲಿಂಗ್ ಬ್ರಹ್ಮಾಸ್ತ್ರ ಬುಮ್ರಾಗೂ ಇದೆ ಚಾನ್ಸ್!

ಜಸ್ಪ್ರೀತ್ ಬುಮ್ರಾ. ವರ್ಲ್ಡ್ ಕ್ಲಾಸ್ ಬೌಲರ್. ಬುಮ್ರಾ ಅವರನ್ನು ಭಾರತೀಯ ಬೌಲಿಂಗ್ ಅಟ್ಯಾಕ್​ನ ಬ್ರೇನ್ ಅಂತಾನೇ ಕರೆಯಲಾಗುತ್ತದೆ. ಯಾಕಂದ್ರೆ ತಂಡದಲ್ಲಿ ಬುಮ್ರಾ ಫಸ್ಟ್ ಚಾಯ್ಸ್ ಹಾಗೇ ಡ್ರೆಸ್ಸಿಂಗ್ ರೂಮ್​ನಲ್ಲೂ ಅತೀ ಹೆಚ್ಚು ಗೌರವಿಸಲ್ಪಡೋ ಆಟಗಾರ. ಹೀಗಿದ್ರೂ ಬುಮ್ರಾಗೆ ಪದೇಪದೆ ಇಂಜುರಿಯೇ ದೊಡ್ಡ ಹೊಡೆತ ನೀಡ್ತಿದೆ. ಕ್ಯಾಪ್ಟನ್ಸಿ ಸ್ಕಿಲ್ಸ್ ಇದ್ರೂ ಪಡೆಸೋಕೆ ಆಗ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಅವ್ರನ್ನ ಟೆಸ್ಟ್, ಏಕದಿನದಲ್ಲಿ ಕಡಿಮೆ ಅವಕಾಶ ನೀಡಿ ಟಿ-20ಐ ತಂಡಕ್ಕೆ ಸೀಮಿತ ಮಾಡಿ ಕ್ಯಾಪ್ಟನ್ಸಿ ನೀಡಿದ್ರೂ ನೀಡಬಹುದು. ಸದ್ಯಕ್ಕಂತೂ ಟಿ-20ಐ ತಂಡದಲ್ಲಿ ಈ ಐವರ ಹೆಸರೂ ಚರ್ಚೆಯಲ್ಲಿದೆ. ಈ ಹಿಂದೆ ಶುಭ್​ಮನ್ ಗಿಲ್​ರನ್ನ ಆಲ್ ಫಾರ್ಮೆಟ್ ಕ್ಯಾಪ್ಟ್ಟನ್ ಮಾಡಲೆಂದೇ ಕರ್ಕೊಂಡು ಬಂದ್ರೂ ಗಿಲ್ ಆಡ್ಲಿಲ್ಲ. ಹೀಗಾಗಿ ತಂಡದಿಂದ ಗೇಟ್​ಪಾಸ್ ಕೊಟ್ಟಾಯ್ತು. ಮುಂದಿನ ದಿನಗಳಲ್ಲಿ ಕರ್ಕೊಂಡ್ ಬಂದ್ರೂ ಆಟಗಾರನಾಗಿ ಮತ್ತೆ ಗಿಲ್ ಪ್ರೂವ್ ಮಾಡ್ಬೇಕು.

Shantha Kumari