ವಿಶ್ವಕಪ್‌ಗೆ ಪ್ಲಾಫ್‌ ಶೋಗಾರರು ಬೇಕಾ? – IPLನಲ್ಲಿ ಫೇಲ್‌.. ವರ್ಲ್ಡ್‌ ಕಪ್‌ ಕತೆಯೇನು?
ಪಾಂಡ್ಯಾ.. ಜೈಸ್ವಾಲ್‌.. ದುಬೆ ಆಡ್ತಾರಾ?

ವಿಶ್ವಕಪ್‌ಗೆ ಪ್ಲಾಫ್‌ ಶೋಗಾರರು ಬೇಕಾ? – IPLನಲ್ಲಿ ಫೇಲ್‌.. ವರ್ಲ್ಡ್‌ ಕಪ್‌ ಕತೆಯೇನು?ಪಾಂಡ್ಯಾ.. ಜೈಸ್ವಾಲ್‌.. ದುಬೆ ಆಡ್ತಾರಾ?

ಐಪಿಎಲ್ ಫೀವರ್ ತಣ್ಣಗಾಗಿದೆ. ಟಿT20 ವಿಶ್ವಕಪ್ ಟೂರ್ನಿಗೆ ಕೌಂಟ್‌ಡೌನ್ ಶುರುವಾಗಿದೆ. ಈಗ ಇರೋ ವಿಚಾರ ಏನಂದ್ರೆ, ಐಪಿಎಲ್‌ನಲ್ಲಿ ಅಟ್ಟರ್ ಪ್ಲಾಪ್ ಆಟಗಾರರು ಟಿ20 ವಿಶ್ವಕಪ್‌ ನಲ್ಲಿ ಅಬ್ಬರಿಸ್ತಾರಾ ಇಲ್ಲ ಮುಗ್ಗರಿಸ್ತಾರಾ ಅನ್ನೋದು. ಈಗಾಗಲೇ ನ್ಯೂಯಾರ್ಕ್​ನಲ್ಲಿ ಬೀಡು ಬಿಟ್ಟಿರುವ ಟೀಮ್ ಇಂಡಿಯಾ, ಅಖಾಡಕ್ಕೆ ಇಳಿಯೋದೊಂದೇ ಬಾಕಿ. 17 ವರ್ಷಗಳ ಬಳಿಕ ವಿಶ್ವ ಸಮರ ಗೆಲ್ಲಲು ಪಣ ತೊಟ್ಟಿದೆ ಟೀಮ್ ಇಂಡಿಯಾ. ಹೀಗಾಗಿಯೇ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲಾಗ್ತಿದೆ. ಏಕದಿನ ವಿಶ್ವಕಪ್​ ಸೋಲಿನ ಕಹಿಗೆ ಟಿ20 ವಿಶ್ವಕಪ್ ಗೆಲುವಿನ ಸಿಹಿ ದಕ್ಕಿಸಿಕೊಳ್ಳೋ ಪ್ರಯತ್ನವೂ ಸಾಗಿದೆ. ಆದ್ರೆ, ಟೀಮ್ ಇಂಡಿಯಾ ಮ್ಯಾನೇಜ್​​ಮೆಂಟ್ ಗೆ ಮಾತ್ರವಲ್ಲ, ಫ್ಯಾನ್ಸ್​ಗೂ ಕೂಡಾ ಅದೊಂದೇ ಟೆನ್ಷನ್ ಕಾಡ್ತಿದೆ.

ಇದನ್ನೂ ಓದಿ: ಪೆನ್‌ ಡ್ರೈವ್‌ ಪ್ರಜ್ವಲ್‌ ಕೊನೆಗೂ ಅರೆಸ್ಟ್‌  – ಜೆಡಿಎಸ್‌ ಗೆ ಹೊಡೆತ ಬೀಳುತ್ತಾ?

ಫ್ಲಾಪ್ ಶೋ ಆಟಗಾರರ ಕಥೆಯೇನು?

ಟಿ20 ವಿಶ್ವಕಪ್​ ತಂಡದಲ್ಲಿ ಟೀಮ್ ಇಂಡಿಯಾ ಬಲಿಷ್ಠ ಟೀಮ್ ಅನ್ನೋದೇನೋ ಸರಿ. ಆದ್ರೆ, ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆದ ಬಹುತೇಕ ಆಟಗಾರರು, ಐಪಿಎಲ್​ನಲ್ಲಿ ಫ್ಲಾಫ್​ ಪರ್ಫಾಮೆನ್ಸ್ ನೀಡಿದ್ದಾರೆ. ಐಪಿಎಲ್‌ನಲ್ಲಿ ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ಬಿಗ್ ಸ್ಟಾರ್​ಗಳೇ ಪರದಾಡಿದ್ದಾರೆ. ಹೀಗಾಗಿ ಐಪಿಎಲ್​ನಲ್ಲಿ ಫೇಲಾದ ಆಟಗಾರರು, ವಿಶ್ವಯುದ್ಧದಲ್ಲಿ ಪಾಸಾಗ್ತಾರಾ. ವಿಶ್ವಯುದ್ಧ ಗೆಲ್ಲಲು ತಮ್ಮೆಲ್ಲಾ ಶ್ರಮ ಹಾಕ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಬಿಗ್ ಹಿಟ್ ಹೊಡೆಯೋದನ್ನೇ ಮರೆತಿದ್ದಾರೆ. ಹಿಟ್ ಮ್ಯಾನ್ ಆಗಿ ರೋಹಿತ್ ಶರ್ಮಾ ಅಬ್ಬರಿಸುವುದನ್ನ ಐಪಿಎಲ್‌ನಲ್ಲಿ ನೋಡಲು ಸಾಧ್ಯವಾಗಿಲ್ಲ. ಆರಂಭಿಕರಾಗಿ ಆರ್ಭಟಿಸುವಲ್ಲಿ ರೋಹಿತ್ ಶರ್ಮಾ ವಿಫಲರಾಗಿದ್ದು, ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸೋದನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಹಿಟ್​ಮ್ಯಾನ್​​ ಜೊತೆ ಇನ್ನಿಂಗ್ಸ್​ ಆರಂಭಿಸಲು ತುದಿಗಾಲಲ್ಲಿ ನಿಂತಿರೋ ಮತ್ತೊಬ್ಬ ಕ್ರಿಕೆಟರ್ ಯಶಸ್ವಿ ಜೈಸ್ವಾಲ್. ಯಶಸ್ವಿ ಜೈಸ್ವಾಲ್​ ಐಪಿಎಲ್‌ನಲ್ಲಿ ಒಂದೆರೆಡು ಬಾರಿ ಸೌಂಡ್ ಮಾಡಿದ್ದು ಬಿಟ್ರೆ ಮತ್ತೆಲ್ಲಾ ಸೈಲೆಂಟ್. ಇನ್ನು ಶಿವಂ ದುಬೆ ಕಥೆಯೂ ಅಷ್ಟೇ. ದುಬೆ ಟೀಮ್ ಇಂಡಿಯಾ ಪಾಲಿಗೆ ದುಬಾರಿಯಾಗದಿದ್ರೆ ಅಷ್ಟೇ ಸಾಕು ಅಂತಿದ್ದಾರೆ ಫ್ಯಾನ್ಸ್.

ಬೌಲಿಂಗ್ ಅಸ್ತ್ರ ಹೇಗಿದೆ?

ಇನ್ನು ಬೌಲರ್ ವಿಚಾರದಲ್ಲಿ ಫ್ಯಾನ್ಸ್ ಗೆ ಚಿಂತೆ ತಪ್ಪಿದ್ದಲ್ಲ. ಟೀಮ್ ಇಂಡಿಯಾ ವೈಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ಕಂಪ್ಲೀಟ್ ಫೆಲ್ಯೂರ್ ಆಗಿದ್ರು. ಆದ್ರೆ, ನ್ಯಾಷನಲ್ ಡ್ಯೂಟಿ ​ಅಂತಾ ಬಂದಾಗ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಪ್ರದರ್ಶನ ತೋರಿಸಿದ್ರೆ ಸಾಕು ಅನ್ನೋದು ಅಭಿಮಾನಿಗಳ ಮನದಾಳದ ಮಾತು. ಮತ್ತೊಂದೆಡೆ ಜಡ್ಡು ಕೂಡಾ ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಾ ಜಾದೂ ಮಾಡಲಿಲ್ಲ. ಟೀಮ್ ಇಂಡಿಯಾ ಬೌಲಿಂಗ್ ಸೆಟಪ್ ಜಡ್ಡು ಮೇಲೂ ಡಿಪೆಂಡ್ ಆಗಿದೆ. ಇನ್ನು ಸಿರಾಜ್ ಬಾಯ್ ಸಿಡಿದ್ರೆ ಒಳ್ಳೇದು. ಜಡ್ಡು ಮ್ಯಾಜಿಕ್, ಸಿರಾಜ್ ಮೋಡಿಯ ಬೌಲಿಂಗ್ ಇದ್ರೆ ಟೀಮ್ ಇಂಡಿಯಾವನ್ನು ಸೋಲಿಸಲು ಸಾಧ್ಯವೇ ಇಲ್ಲ ಬಿಡಿ. ಬೂಮ್ರಾ ಜೊತೆ ಚೆಂಡು ಹಂಚಿಕೊಳ್ಳಲು ಈ ಮೂವರು ಕೂಡಾ ರೆಡಿಯಾಗಬೇಕಿದೆ. ಈ ಎಲ್ಲಾ ಆಟಗಾರರು, ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಕ್ಲಿಕ್ ಆಗಬೇಕಿದೆ. ಜೊತೆಗೆ ದೇಶಕ್ಕಾಗಿ ಆಡುವ ವಿಶ್ವಾಸ ಇನ್ನೂ ಗಟ್ಟಿಯಾಗಬೇಕಿದೆ. ಹಾಗಿದ್ದಲ್ಲಿ ಮಾತ್ರ ಟಿ20 ವಿಶ್ವಯುದ್ಧ ಟೀಮ್ ಇಂಡಿಯಾ ಗೆಲ್ಲೋದು ನಿಶ್ಚಿತ.

 

Shwetha M