T-20 World Cup ARMY ರೆಡಿ – ರಾಹುಲ್ OUT.. ಪಾಂಡ್ಯ IN – ಸ್ಟಾರ್ ಪ್ಲೇಯರ್ಸ್ ನೇ ಕೈ ಬಿಟ್ಟಿದ್ದೇಕೆ?

T-20 World Cup ARMY ರೆಡಿ – ರಾಹುಲ್ OUT.. ಪಾಂಡ್ಯ IN – ಸ್ಟಾರ್ ಪ್ಲೇಯರ್ಸ್ ನೇ ಕೈ ಬಿಟ್ಟಿದ್ದೇಕೆ?

ಐಪಿಎಲ್ ಹಬ್ಬ ಮುಗಿದ ಕೆಲವೇ ದಿನಗಳಲ್ಲಿ ಟಿ-20 ವಿಶ್ವಕಪ್ ಸಮರ ಶುರುವಾಗಲಿದೆ. ಜೂನ್ 1 ರಿಂದ 29 ರವರೆಗೆ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ. ವರ್ಲ್ಡ್ ಕಪ್ ಕದನಕ್ಕೆ ಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದಲ್ಲಿ 15 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಿದೆ. ಅಳೆದು ತೂಗಿ ಬಲಿಷ್ಠ ಸೇನೆಯನ್ನ ಪ್ರಕಟ ಮಾಡಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ತಂಡದ ನಾಯಕರಾದರೇ ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಲಿಸ್ಟ್ನಲ್ಲಿ ಬಿಸಿಸಿಐ ಹಲವು ಸ್ಟಾರ್ ಕ್ರಿಕೆಟರ್ಸ್ಗೆ ಕೊಕ್ ನೀಡಿದೆ. ಏಕದಿನ ವಿಶ್ವಕಪ್ ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದ ಕನ್ನಡಿಗ ಕೆ. ಎಲ್ ರಾಹುಲ್ ಟಿ-20 ವಿಶ್ವಕಪ್ ನಿಂದಲೇ ಹೊರ ಬಿದ್ದಿದ್ದಾರೆ.

ಇದನ್ನೂ ಓದಿ: ಟಿ – 20 ವಿಶ್ವಕಪ್‌ಗೆ ಭಾರತದ ತಂಡ ಪ್ರಕಟ – ಯಾರಿಗೆಲ್ಲ ಸಿಕ್ತು ಚಾನ್ಸ್‌?

ಟೀಮ್ ಇಂಡಿಯಾದ ಓಪನರ್ಸ್ ಆಗಿ ಕ್ಯಾಪ್ಟನ್ ರೋಹಿತ್ ಶರ್ಮಾ, ಯಶ್ವಸಿ ಜೈಸ್ವಾಲ್ಗೆ ಮಣೆ ಹಾಕಲಾಗಿದೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. 4ನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ, ಆರ್. ಜಡೇಜಾ, ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್, ಚಹಾಲ್ ಹಾಗೂ ವೇಗಿ ವಿಭಾಗದಲ್ಲಿ ಅರ್ಷ್ದೀಪ್ ಸಿಂಗ್, ಜಸ್ಪ್ರೀತ್ ಬೂಮ್ರಾ ಮತ್ತು ಸಿರಾಜ್ಗೆ ಅವಕಾಶ ನೀಡಲಾಗಿದೆ. ಇವರೊಂದಿಗೆ ರಿಂಕು ಸಿಂಗ್, ಶುಭ್ಮನ್ ಗಿಲ್, ಖಲೀಲ್ ಅಹ್ಮದ್ ಮತ್ತು ಆವೇಶ್ ಖಾನ್ ಇದ್ದಾರೆ. ಟೀಮ್ ಇಂಡಿಯಾದ ಉಪನಾಯಕರಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ.

ಮತ್ತೊಂದೆಡೆ ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಹಾಗೂ ಅವೇಶ್ ಖಾನ್ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಅಂದರೆ 15 ಸದಸ್ಯರ ತಂಡದಿಂದ ಯಾರಾದರು ಹೊರಬಿದ್ದರೆ ಈ ನಾಲ್ವರು ಆಟಗಾರರಿಂದ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ.

ಅಸಲಿಗೆ ಬಿಸಿಸಿಐ ಪ್ರಕಟ ಮಾಡಿರುವ ಪಟ್ಟಿಯಲ್ಲಿ ಕೆಲ ಆಟಗಾರರ ಆಯ್ಕೆ ಮತ್ತು ಕೈ ಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ಅದ್ರಲ್ಲಿ ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಒಬ್ಬರು. ಎಲ್ಎಸ್ಜಿ ತಂಡವನ್ನ ಲೀಡ್ ಮಾಡ್ತಿರುವ ರಾಹುಲ್ ಉತ್ತಮ ವಿಕೆಟ್ ಕೀಪರ್ ಕೂಡ ಹೌದು. ಆದ್ರೆ ಕೆ.ಎಲ್ ರಾಹುಲ್ ಬದಲಿಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಟೀಮ್ ಇಂಡಿಯಾದ ಮೊದಲ ಆಯ್ಕೆ ಸಂಜು ಸ್ಯಾಮ್ಸನ್ ಆಗಿದ್ದಾರೆ. ಜತೆಗೆ ಬರೋಬ್ಬರಿ 2 ವರ್ಷಗಳ ಬಳಿಕ ರಿಷಭ್ ಪಂತ್ ಕೂಡ ಕಮ್ಬ್ಯಾಕ್ ಮಾಡಿದ್ದಾರೆ. ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಸ್ಥಾನ ಖಾಲಿ ಇತ್ತು. ಆ ಸ್ಥಾನದ ಮೇಲೆ ಹಲವಾರು ಪ್ಲೇಯರ್ಸ್ ಕಣ್ಣಿಟ್ಟಿದ್ದರು. ಅದರಲ್ಲಿ ಕೆಎಲ್ ರಾಹುಲ್ ಸಹ ಒಬ್ಬರು ಇದ್ದರು. ವಿಕೆಟ್ ಕೀಪರ್ ಸ್ಥಾನಕ್ಕೆ ಪಂತ್, ಜುರೆಲ್, ಜಿತೇಶ್, ಇಶಾನ್, ಸಂಜು ಹೀಗೆ ಸಾಲು ಸಾಲು ಆಟಗಾರರು ರೇಸ್ನಲ್ಲಿದ್ದರು. ಕೊನೆಗೂ ರಾಹುಲ್ಗೆ ಕೊಕ್ ನೀಡಲಾಗಿದೆ.

ಹಾಗೇ ಈ ಬಾರಿಯ ಐಪಿಎಲ್ನಲ್ಲಿ ವೇಗದ ಬೌಲಿಂಗ್ನೊಂದಿಗೆ ಮಿಂಚಿದ್ದ ಮಯಾಂಕ್ ಯಾದವ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಬದಲಾಗಿ ವೇಗಿಗಳಾಗಿ ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾಗೆ ಸ್ಥಾನ ನೀಡಲಾಗಿದೆ. ಆದ್ರೆ ಪಾಂಡ್ಯಗೆ ಚಾನ್ಸ್ ಸಿಕ್ಕಿರೋದೇ ಇಲ್ಲಿ ಕೆಲವರ ಸಿಟ್ಟಿಗೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿ ಪಾಂಡ್ಯ ಹೇಳಿಕೊಳ್ಳುವಂಥ ಪ್ರದರ್ಶನವೇನೂ ನೀಡ್ತಿಲ್ಲ. ಆದ್ರೂ ಪಾಂಡ್ಯರನ್ನ ವೈಸ್ ಕ್ಯಾಪ್ಟನ್ ಆಗಿ ಸೆಲೆಕ್ಟ್ ಮಾಡಲಾಗಿದೆ. ಪಾಂಡ್ಯಗೆ ತಂಡದಲ್ಲಿ ಸ್ಥಾನ ಕೊಟ್ಟಿರೋದರ ಬಗ್ಗೆ ವಿರೋಧ ವ್ಯಕ್ತವಾಗ್ತಿದೆ. ಏಕದಿನ ವಿಶ್ವಕಪ್ ಸಮಯದಲ್ಲಿ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ರು. ನಂತರ ಈಗ ಐಪಿಎಲ್ ಆಡುತ್ತಿದ್ದಾರೆ. ಬೌಲಿಂಗ್ನಲ್ಲಿ ಅಥವಾ ಬ್ಯಾಟಿಂಗ್ನಲ್ಲಿ ಕಮಾಲ್ ಮಾಡ್ತಿಲ್ಲ. ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಅವರನ್ನು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಮಾಡಿದಾಗಿನಿಂದಲೂ ಪಾಂಡ್ಯಗೆ ವಿರೋಧ ಹೆಚ್ಚಿದೆ. ವಿರೋಧವಿದ್ರೂ ಯಾಕೆ ಅವರಿಗೆ ಚಾನ್ಸ್ ಕೊಟ್ಟಿದ್ದೀರಾ ಅಂತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬಿಸಿಸಿಐನ ಪ್ರಶ್ನೆ ಮಾಡಿದ್ದಾರೆ. ಆಟವಷ್ಟೇ ಅಲ್ಲ ಸರಿಯಾದ ಫಿಟ್ನೆಸ್ ಕೂಡ ಇಲ್ಲ ಅಂತ ಕಿಡಿಕಾರುತ್ತಿದ್ದಾರೆ. ಮತ್ತೊಂದೆಡೆ ಆರ್ಆರ್ ಪರ ಕಮಾಲ್ ಮಾಡ್ತಿರೋ ಯಜುವೇಂದ್ರ ಚಹಾಲ್ಗೆ ಅವಕಾಶ ಕೊಟ್ಟಿರೋದು ಸಾಕಷ್ಟು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಚಹಾಲ್ ಕಳೆದ ಕೆಲ ವರ್ಷಗಳಿಂದ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಏಕದಿನ ವಿಶ್ವಕಪ್ ತಂಡದಲ್ಲೂ ಚಾನ್ಸ್ ಸಿಕ್ಕಿರಲಿಲ್ಲ. ಆರ್ಸಿಬಿ ತಂಡದಿಂದ ಆರ್ಆರ್ಗೆ ಹೋಗಿದ್ದ ಚಹಾಲ್ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರು. ಚಹಾಲ್ 2016 ರಲ್ಲಿ ಪಾದಾರ್ಪಣೆ ಮಾಡಿದ್ದು, ನಂತರ ಅದ್ಭುತ ಪ್ರದರ್ಶನಗಳನ್ನ ತೋರಿಸಿದ್ದರು. ಬಹಳ ವೇಗವಾಗಿ ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾದರು. ಅವರ ಸ್ಪಿನ್ ಬೌಲಿಂಗ್ನೊಂದಿಗೆ ಸತತವಾಗಿ ವಿಕೆಟ್ಗಳನ್ನು ಪಡೆಯುವ ಮತ್ತು ಆಟವನ್ನು ನಿಯಂತ್ರಿಸುವ ಅವರ ಸಾಮರ್ಥ್ಯವು ಅಭಿಮಾನಿಗಳು ಮತ್ತು ತಜ್ಞರಿಂದ ಪ್ರಶಂಸೆಗೆ ಪಾತ್ರವಾಗಿತ್ತು. ಇನ್ನು ಈ ಬಾರಿಯ ಐಪಿಎಲ್ನಲ್ಲಿ ಸಿಎಸ್ಕೆ ಪರ ಭರ್ಜರಿ ಪ್ರದರ್ಶನ ನೀಡಿರುವ ಶಿವಂ ದುಬೆಗೂ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸಿದೆ. ಇನ್ನು ಟೀಂ ಇಂಡಿಯಾದ ಪ್ರಿನ್ಸ್ ಎನಿಸಿಕೊಂಡಿದ್ದ ಶುಭ್ಮನ್ ಗಿಲ್ಗೂ ಬಿಸಿಸಿಐ ಬಿಗ್ ಶಾಕ್ ನೀಡಿದೆ. ಭಾರತ ತಂಡದ ಮುಂದಿನ ಅಧಿ ಪತಿ ಅಂದುಕೊಂಡಿದ್ದ ಗಿಲ್ಗೆ ನಿಜಕ್ಕೂ ಇದು ಶಾಕಿಂಗ್ ವಿಚಾರವೇ ಸರಿ. ಯಾಕಂದ್ರೆ ಬಿಸಿಸಿಐ ಗಿಲ್ನ ರಿಸರ್ವ್ ತಂಡದಲ್ಲಿರಿಸಿದೆ. ಅಂದರೆ ಯಾರಿಗಾದರೂ ಇಂಜುರಿ ಆದರೆ ರಿಪ್ಲೆಸ್ ಮಾಡಲಾಗುತ್ತೆ. 15 ಸದಸ್ಯರ ತಂಡದೊಂದಿಗೆ ನಾಲ್ವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಈ 19 ಆಟಗಾರರಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ಗೆ ಸ್ಥಾನ ಕಲ್ಪಿಸಲಾಗಿಲ್ಲ. ಕೊನೆಗೂ ಟಿ-20 ವಿಶ್ವಕಪ್ಗೆ ಸ್ಕ್ಯಾಡ್ ರೆಡಿಯಾಗಿದೆ. ಆದ್ರೆ ಕೆಲವರ ಆಯ್ಕೆ ಸಿಟ್ಟು ತರಿಸಿದ್ರೆ ಇನ್ನೂ ಕೆಲ ಸ್ಟಾರ್ ಆಟಗಾರರನ್ನ ಕೈ ಬಿಟ್ಟಿರೋದು  ಚರ್ಚೆಗೆ ಗ್ರಾಸವಾಗಿದೆ.

ಟೀಂ ಇಂಡಿಯಾ SQUAD

  • ರೋಹಿತ್ ಶರ್ಮಾ
  • ಯಶಸ್ವಿ ಜೈಸ್ವಾಲ್
  • ವಿರಾಟ್ ಕೊಹ್ಲಿ
  • ಸೂರ್ಯಕುಮಾರ್ ಯಾದವ್
  • ರಿಷಭ್ ಪಂತ್
  • ಸಂಜು ಸ್ಯಾಮ್ಸನ್
  • ಹಾರ್ದಿಕ್ ಪಾಂಡ್ಯ
  • ಶಿವಂ ದುಬೆ
  • ರವೀಂದ್ರ ಜಡೇಜಾ
  • ಅಕ್ಷರ್ ಪಟೇಲ್
  • ಕುಲ್ದೀಪ್ ಯಾದವ್
  • ಯಜುವೇಂದ್ರ ಚಹಾಲ್
  • ಅರ್ಷ್ದೀಪ್ ಸಿಂಗ್
  • ಜಸ್ ಪ್ರೀತ್ ಬೂಮ್ರಾ
  • ಮೊಹಮ್ಮದ್ ಸಿರಾಜ್  

 

ರಿಸರ್ವ್ ಪ್ಲೇಯರ್ಸ್!

  • ಶುಭ್ ಮನ್ ಗಿಲ್
  • ರಿಂಕು ಸಿಂಗ್
  • ಖಲೀಲ್ ಅಹ್ಮದ್
  • ಆವೇಶ್ ಖಾನ್

Sulekha

Leave a Reply

Your email address will not be published. Required fields are marked *