‘ಕೇಕ್ ಗೌನ್’ ತೊಟ್ಟು ಹೆಜ್ಜೆ ಹಾಕಿದ ಸುಂದರಿ – ಹೇಗಿತ್ತು ಗಿನ್ನೆಸ್ ದಾಖಲೆ ಬರೆದ ಕ್ಷಣ..!?
ಬರ್ತಡೇ ಇರಲಿ. ನ್ಯೂಇಯರ್ ಆಗಲಿ. ಅಷ್ಟೇ ಯಾಕೆ ಮದುವೆ, ಎಂಗೇಜ್ಮೆಂಟ್ ಇದ್ರೂ ಕೇಕ್ ಇಲ್ಲದೆ ಯಾವ ಸೆಲೆಬ್ರೇಷನ್ ಕೂಡ ಕಂಪ್ಲೀಟ್ ಆಗಲ್ಲ. ಅದ್ರಲ್ಲೂ ಈಗಂತೂ ಥರಹೇವಾಗಿ ಸ್ಟೈಲಲ್ಲಿ ಕೇಕ್ಗಳನ್ನ ರೆಡಿ ಮಾಡಲಾಗುತ್ತೆ. ಕೆಲವೊಮ್ಮೆ ಅವುಗಳ ಶೇಪ್ ನೋಡಿದ್ರೆ ತಿನ್ನೋಕೂ ಮನಸ್ಸು ಬರಲ್ಲ. ಆದ್ರೆ ಈ ಕೇಕ್ ಬಗ್ಗೆ ಕೇಳಿದ್ರೆ ನೀವು ಫಿದಾ ಆಗೋದು ಪಕ್ಕಾ. ಅದೂ ಕೂಡ ಗಿನ್ನೆಸ್ ರೆಕಾರ್ಡ್ ಮಾಡಿರೋ ಕೇಕ್.
ಇದನ್ನೂ ಓದಿ: ವಿವಾಹಿತೆಯನ್ನ ಮದುವೆಯಾಗುವುದಾಗಿ ಹೇಳಿದ ದೈವನರ್ತಕ – ಪಾತ್ರಿ ನುಡಿ ಕೇಳಿ ಜನ ಕೆರಳಿದ್ದೇಕೆ..!?
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಅಧಿಕೃತ ಇನ್ಸ್ಟಾಗ್ರಾಂ ಪೇಜ್ನಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿದೆ. ಅದ್ರಲ್ಲಿ ಯುವತಿಯೊಬ್ಬಳು ಬಿಳಿ ಬಣ್ಣದ ಉದ್ದನೆ ಗೌನ್ ಧರಿಸಿದ್ದಾಳೆ. ವಿಷ್ಯ ಅಂದ್ರೆ ಇದು ಬಟ್ಟೆಯಲ್ಲ ಕೇಕ್. ಇದೇ ವಿಡಿಯೋ ಈಗ ಮಿಲಿಯನ್ಗಿಂತ್ಲೂ ಹೆಚ್ಚು ವೀಕ್ಷಣೆ ಪಡೆದಿದೆ.
ಮದುವೆ ಹಾಗೂ ವಿಶೇಷ ಸಮಾರಂಭಗಳಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ವಿವಿಧ ವಿನ್ಯಾಸ ಹಾಗೂ ರುಚಿಗಳಿಂದ ಕೂಡಿದ ಕೇಕ್ಗಳನ್ನು ನೋಡಿರುತ್ತೀರಿ. ಆದರೆ ಇಲ್ಲೊಂದು ಬಟ್ಟೆ ರೀತಿಯಲ್ಲಿ ಧರಿಸಬಹುದಾದ ಕೇಕ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಸುಮಾರು 131.15 ಕೆಜಿ ತೂಕದ ಈ ಕೇಕ್ನ ವಿಶ್ವದ ಅತಿದೊಡ್ಡ ಧರಿಸಬಹುದಾದ ಕೇಕ್ ಎಂದು ಘೋಷಿಸಲಾಗಿದೆ. ಇದು ಸ್ವಿಡ್ಜರ್ಲೆಂಡ್ನ ಸ್ವಿಸ್ ವರ್ಲ್ಡ್ ವೆಡ್ಡಿಂಗ್ ಈವೆಂಟ್ನಲ್ಲಿ ಅನಾವರಣಗೊಳಿಸಲಾಗಿದೆ. ನತಾಶಾ ಕೊಲಿನ್ ಕಿಮ್ ಫಾಹ್ ಲೀ ಫೋಕಾಸ್ ಎಂಬ ಹೆಸರಿನ ವ್ಯಕ್ತಿ ವಿನ್ಯಾಸಗೊಳಿಸಿದ್ದಾರೆ. ಈ ಕೇಕಿನ ಕೆಳಗಿನ ಭಾಗವನ್ನು ಅಲ್ಯೂಮಿನಿಯಂ ಫ್ರೇಮ್ ಮತ್ತು ಎರಡು ಲೋಹದ ಬೋಲ್ಟ್‌ಗಳನ್ನು ಬಳಸಿ ತಯಾರಿಸಲಾಗಿದೆ. ಮೇಲಿನ ಭಾಗವನ್ನು ಸಕ್ಕರೆ ಪೇಸ್ಟ್ ಮತ್ತು ಫಾಂಡೆಂಟ್ ಮಿಶ್ರಣವನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ.
View this post on Instagram