ಹಗಲು ದರೋಡೆಗಿಳಿದ ಸ್ವಿಗ್ಗಿ, ಝೊಮ್ಯಾಟೋ – ಆ್ಯಪ್ ಗಳಿಗೆ ಟಕ್ಕರ್ ಕೊಡಲು ಮುಂದಾದ ಹೋಟೆಲ್ ಮಾಲೀಕರು
ಬೆಂಗಳೂರು: ಇತ್ತೀಚೆಗೆ ಸ್ವಿಗ್ಗಿ, ಝೊಮ್ಯಾಟೋದಂತಹ ಫುಡ್ ಆ್ಯಪ್‍ಗಳು ಲೂಟಿಗಿಳಿದಿದೆ. ಹೀಗಾಗಿ ಬೆಂಗಳೂರು ಹೋಟೆಲ್ ಮಾಲೀಕರು ಈ ಆ್ಯಪ್ ಗಳ ವಿರುದ್ಧ ಸಮರ ಶುರು ಮಾಡಿದ್ದು, ಒಪನ್ ನೆಟ್‍ವರ್ಕ್ ಡಿಜಿಟಲ್ ಕಾಮರ್ಸ್ ಆ್ಯಪ್ ಜೊತೆ ಟೈಅಪ್ ಆಗೋಕೆ ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ: ಒಬ್ಬನೇ ವ್ಯಕ್ತಿಯಿಂದ 8,428 ಪ್ಲೇಟ್ ಇಡ್ಲಿ ಆರ್ಡರ್! – ಆತ ಪಾವತಿಸಿದ ಹಣವೆಷ್ಟು ಗೊತ್ತಾ?
ಸ್ವಿಗ್ಗಿ- ಝೊಮ್ಯಾಟೋ ಹೋಟೆಲ್ ಮೆನ್ಯು ಕಾರ್ಡ್‍ಗಿಂತ ಶೇ.40ರಷ್ಟು ಹೆಚ್ಚು ಹಣ ವಸೂಲಿ ಮಾಡುತ್ತಿವೆ. ಹೋಟೆಲ್ ಮೆನ್ಯು ಕಾರ್ಡ್‍ಗಿಂತ ಶೇ.40ರಷ್ಟು ಹೆಚ್ಚು ಹಣ ವಸೂಲಿ ಮಾಡುತ್ತಿದ್ದು, ಫುಡ್ ಡೆಲಿವರಿ ನೆಪದಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿವೆ. ಈ ಹಣ ಅತ್ತ ಮಾಲೀಕರಿಗೂ ಹಣ ಸೇರಲ್ಲ. ಇತ್ತ ಗ್ರಾಹಕರಿಗೂ ಹೊರೆಯಾಗುತ್ತಿದೆ. ಹೀಗಾಗಿ ಹೆಚ್ಚಿನ ಹಣ ಪಡೆಯದಂತೆ ಆ್ಯಪ್‍ಗಳಿಗೆ ಹಲವು ಬಾರಿ ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ. ಆದರೆ ಸ್ವಿಗ್ಗಿ- ಝೊಮ್ಯಾಟೋ, ನಾವು ನಷ್ಟದಲ್ಲಿ ಇದ್ದೇವೆ ಅಂತ ಕಾರಣ ನೀಡುತ್ತಿವೆ.
ಈ ಹಿನ್ನೆಲೆಯಲ್ಲಿ ಒಎನ್‍ಡಿಸಿ ಆ್ಯಪ್ ಪ್ರತಿನಿಧಿಗಳ ಜೊತೆ ಹೋಟೆಲ್ ಅಸೋಸಿಯೇಷನ್ ಸಭೆಯನ್ನು ಮಾಡಿದೆ. ಈ ಆ್ಯಪ್‍ನಿಂದ ಗ್ರಾಹಕರು ಹಾಗೂ ಮಾಲೀಕರ ಹಣ ಸುಮಾರು 20% ರಷ್ಟು ಉಳಿತಾಯ ಆಗುವ ನಿರೀಕ್ಷೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ.
ಹೀಗಾಗಿ ಸ್ವಿಗ್ಗಿ – ಝೊಮ್ಯಾಟೋ ಆ್ಯಪ್‍ಗಳಿಗೆ ಹೋಟೆಲ್ ಮಾಲೀಕರು ಟಕ್ಕರ್ ನೀಡಲು ಸಿದ್ಧರಾಗಿದ್ದು, ಕೇಂದ್ರ ಸರ್ಕಾರದ ಹೊಸ ಆ್ಯಪ್ ಮೊರೆ ಹೋಗಿದ್ದಾರೆ. ಓಪನ್ ನೆಟ್‍ವರ್ಕ್ ಡಿಜಿಟಲ್ ಕಾಮರ್ಸ್ ಆ್ಯಪ್‍ನಿಂದ ಗ್ರಾಹಕರು ಹಾಗೂ ಮಾಲೀಕರ ಹಣ ಉಳಿತಾಯ ನಿರೀಕ್ಷೆಯಿದೆ. ಸ್ವಿಗ್ಗಿ ಹಾಗೂ ಝೊಮ್ಯಾಟೋಗಿಂತ 20% ರಷ್ಟು ಉಳಿತಾಯ ನಿರೀಕ್ಷೆಯಿದೆ ಎಂದು ONDC ಆ್ಯಪ್ ಪ್ರತಿನಿಧಿ, ಹೊಟೇಲ್ ಮಾಲೀಕರ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ.