ಸಿದ್ದರಾಮಯ್ಯ ಎಡಗೈನಲ್ಲಿ ಊತ.. ವೈದ್ಯರಿಂದ ಚಿಕಿತ್ಸೆ – 15 ದಿನ ವಿಶ್ರಾಂತಿ ಪಡೆಯುವಂತೆ ಸಲಹೆ!
ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಕೌಂಟ್ ಡೌನ್ ಶುರವಾಗಿದೆ. ಅಭ್ಯರ್ಥಿಗಳು ಹಾಗೂ ಪಕ್ಷಗಳ ಹಿರಿಯ ನಾಯಕರ ಎದೆಯಲ್ಲಿ ಡವಡವ ಶುರುವಾಗಿದೆ. ಮತದಾನ ಮುಗಿದ ಬಳಿಕ ಎಲ್ಲರೂ ಕೂಡ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದು ಚುನಾವಣಾ ಫಲಿತಾಂಶವನ್ನ ಕುತೂಹಲದಿಂದ ಎದುರು ನೋಡ್ತಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯರ ಎಡಗೈನಲ್ಲಿ ನೋವು ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆದಿದ್ದಾರೆ.
ಇದನ್ನೂ ಓದಿ : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬುಕ್ಕಿಂಗ್ ಎಲೆಕ್ಷನ್? – ಉಪ್ಪು ಮುಟ್ಟಿ ‘ಕೈ’ ಅಭ್ಯರ್ಥಿ ಪ್ರಮಾಣ..!
ಕಳೆದ ಕೆಲವು ದಿನಗಳಿಂದ ಸಿದ್ದರಾಮಯ್ಯನವರು ಎಡಗೈ ನೋವಿನಿಂದ ಬಳಲುತ್ತಿದ್ದಾರೆ. ಕೈ ಊದಿಕೊಂಡಿದ್ದು, ನೋವು ಕಾಣಿಸಿಕೊಂಡಿದ್ದರಿಂದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ನಿರಂತರ ಪ್ರಚಾರ, ಜನರ ನಡುವೆ ಓಡಾಟ ನಡೆಸಿದ ಹಿನ್ನೆಲೆ ಎಡಗೈಯಲ್ಲಿ ಊತ ಕಾಣಿಸಿಕೊಂಡಿದೆ. ವಿಶ್ರಾಂತಿ ಸಿಗದ ಹಿನ್ನೆಲೆ ಸಿದ್ದರಾಮಯ್ಯ ಬಳಲಿದ್ದಾರೆ. ಚಿಕಿತ್ಸೆ ಬಳಿಕ ಸಿದ್ದರಾಮಯ್ಯ ಅವರ ಕೈ ಊತ ಸ್ವಲ್ಪ ಕಡಿಮೆಯಾಗಿದೆ. ಪೂರ್ಣ ಊತ ಕಡಿಮೆಯಾಗಲು 15 ದಿನ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ವೈದ್ಯ ರವಿಕುಮಾರ್ ಹೇಳಿದ್ದಾರೆ.
Viral Herpes ಇನ್ಫೆಕ್ಷನ್ ನಿಂದ ಕೈ ಊತ ಕಾಣಿಸಿಕೊಂಡಿದೆ. ಒತ್ತಡದಿಂದ ಈ ಇನ್ಫೆಕ್ಷನ್ ಕಾಣಿಸಿಕೊಂಡಿದೆ. ಇದನ್ನ ಹೊರತುಪಡಿಸಿ ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇನ್ನು ಕೈ ನೋವು ಕಾಣಿಸಿಕೊಂಡಿದ್ದರಿಂದ ಮತ ಹಾಕಿದ ಬಳಿಕ ಸಿದ್ದರಾಮಯ್ಯ ಬಲಗೈ ತೋರು ಬೆರಳಿಗೆ ಇಂಕ್ ಹಾಕಿಸಿಕೊಂಡಿದ್ದರು. ಚುನಾವಣೆ ಪ್ರಚಾರದ ವೇಳೆಯೂ ಸಿದ್ದರಾಮಯ್ಯನವರು ಕೈಗೆ ಪಟ್ಟಿ ಹಾಕಿಕೊಂಡು ಭಾಗಿಯಾಗಿದ್ರು.