ಸಿಹಿ ಗೆಣಸನ್ನು ಬೇಯಿಸಿ ತಿನ್ನಬೇಕಾ? ಹುರಿದು ತಿನ್ನಬೇಕಾ? – ಆರೋಗ್ಯಕ್ಕೆ ಹೆಚ್ಚು ಲಾಭ ಯಾವುದು?

ಸಿಹಿ ಗೆಣಸನ್ನು ಬೇಯಿಸಿ ತಿನ್ನಬೇಕಾ? ಹುರಿದು ತಿನ್ನಬೇಕಾ? – ಆರೋಗ್ಯಕ್ಕೆ ಹೆಚ್ಚು ಲಾಭ ಯಾವುದು?

ಸಿಹಿ ಗೆಣಸಿನಲ್ಲಿ ಹೆಚ್ಚು ಪೌಷ್ಟಿಕಾಂಶವಿದೆ. ಅದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಮ್ಯಾಂಗನೀಸ್‌ನಿಂದ ಪ್ರಮಾಣ ಹೇರಳವಾಗಿದ್ದು ಇದರ ಸೇವನೆಯಿಂದ ದೇಹದ ಆರೋಗ್ಯಕ್ಕೆ ಅನೇಕ ಪ್ರಯೋಜನೆ ಸಿಗಲಿದೆ. ಸಿಹಿ ಗೆಣಸಿನಲ್ಲಿ ಕ್ಯಾನ್ಸರ್ ನಿರ್ಮೂಲನೆಯ ಪೌಷ್ಟಿಕಾಂಶ ಇದೆ ಎಂದು ಅಧ್ಯಯನ ಗಳಲ್ಲಿಯೂ ತಿಳಿಸಲಾಗಿದೆ. ಹೀಗಾಗಿ ಇದನ್ನ ಅನೇಕರು ಸೇವಿಸುತ್ತಾರೆ. ಕೆಲವರು ಸಿಹಿ ಗೆಣಸನ್ನು ಬೇಯಿಸಿ ತಿಂದ್ರೆ, ಇನ್ನು ಕೆಲವರು ಹುರಿದು ತಿನ್ನುತ್ತಾರೆ. ಈ ಎರಡು ವಿಧಾನಗಳಲ್ಲಿ ಯಾವುದು ಸರಿ ಎನ್ನುವುದು ಎಷ್ಟೋ ಜನರಿಗೆ ತಿಳಿದೇ ಇಲ್ಲ.

ಇದನ್ನೂ ಓದಿ: ಬಿಗ್‌ಬಾಸ್‌ ಸೀಸನ್‌ 12ರ ಸ್ಪರ್ಧಿಗಳ ಸಮಾಗಮ! – ದೊಡ್ಮನೆ ಹಬ್ಬದಲ್ಲಿ ಅಶ್ವಿನಿ ಮಸ್ತ್‌ ಡ್ಯಾನ್ಸ್, ಗಿಲ್ಲಿ ಭರ್ಜರಿ ಕಾಮಿಡಿ!

ಗೆಣಸು ವಿಟಮಿನ್ಸ್‌, ಖನಿಜಗಳು ಹಾಗೂ ಫೈಬರ್‌ಗಳಿಂದ ತುಂಬಿದ್ದು ಇದನ್ನು ಸೂಪರ್‌ಫುಡ್ ಎಂದೇ ಪರಿಗಣಿಸಲ್ಪಡುತ್ತದೆ. ಕಿತ್ತಳೆ ಮತ್ತು ನೇರಳೆ ಬಣ್ಣದ ಗೆಣಸನ್ನು ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇವು ಜೀವಕೋಶಗಳನ್ನ ಹಾನಿಯಿಂದ ರಕ್ಷಿಸುತ್ತವೆ.  ಸಿಹಿ ಗೆಣಸನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಚಳಿಗಾಲದಲ್ಲಿ ಗೆಣಸು ತಿಂದರೆ ರೋಗಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ. ದೇಹದಲ್ಲಿ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಿದಾಗ ಯಾವುದೇ ಕಾಯಿಲೆಗಳು ಅಂಟಿಕೊಳ್ಳುವುದಿಲ್ಲ.

ಇದರಲ್ಲಿರುವ ನಾರು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ದೇಹದ ಒಳಗಿರುವ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ಅಧಿಕಗೊಳಿಸುತ್ತದೆ. ಗೆಣಸು ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ.

ಇನ್ಮುಂದೆ ಮನೆಗೆ ಗೆಣಸನ್ನು ತಂದಾಗ ಅದನ್ನು ಇಲ್ಲಿ ಹೇಳಿದ ರೀತಿಯಲ್ಲಿ ಮಾಡಿ ತಿಂದರೆ ಆರೋಗ್ಯಕ್ಕೆ ಹೆಚ್ಚು ಉಪಯೋಗವಾಗಲಿದೆ. ಪೋಷಕಾಂಶಗಳು ನಾಶವಾಗದಂತೆ ಗೆಣಸನ್ನು ಕುದಿಸಿ ತಿನ್ನಬೇಕು.

ಯಾವಾಗಲೇ ಆಗಲೇ ಚೆನ್ನಾಗಿ ಕುದಿಸಿ ತಿನ್ನುವುದರಿಂದ ಸಿಹಿ ಗೆಣಸಿನಲ್ಲಿನ ಸಕ್ಕರೆ ಬಿಡುಗಡೆಯಾಗುತ್ತದೆ. ಇದು ಗ್ಲೈಸೆಮಿಕ್ ಸೂಚ್ಯಂಕವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಹೃದಯದ ಆರೋಗ್ಯಕ್ಕೂ ಒಳ್ಳೆಯದು.

Shwetha M