ಸಿಲಿಕಾನ್‌ ಸಿಟಿಯಲ್ಲಿ ಬೊಲೆರೊ ಭಯ! – ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ವಾಹನ ಓಡಾಟ

ಸಿಲಿಕಾನ್‌ ಸಿಟಿಯಲ್ಲಿ ಬೊಲೆರೊ ಭಯ! – ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ವಾಹನ ಓಡಾಟ

ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರೇ ನೀವು ಜೋಪಾನ. ಬೆಂಗಳೂರಿನಲ್ಲಿ ಬಿಳಿ ಬಣ್ಣದ ಬೊಲೆರೊ ವಾಹನವೊಂದು ಅನುಮಾನಾಸ್ಪದ ರೀತಿಯಲ್ಲಿ ಸಂಚಾರ ಕಂಡುಬಂದಿದೆ. ವಾಹನ ಸಂಚಾರದ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗ್ತಿದೆ. ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದೀಗ ಬೆಂಗಳೂರಿನ ಪೊಲೀಸರು ಕೂಡ ಅಲರ್ಟ್‌ ಆಗಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರೇ.. ಈ ದಿನದಂದು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ!

ಸಿಲಿಕಾನ್ ಸಿಟಿಯಲ್ಲಿ ಅಪರಾಧ ಕೃತ್ಯಗಳಿಗೇನೂ ಕಡಿಮೆ ಇಲ್ಲ. ಕೊಲೆ-ಸುಲಿಗೆ, ಕಿಡ್ನ್ಯಾಪ್​​ನಂತಹ ಘಟನೆಗಳು ನಡೆಯುತ್ತಲೇ ಇವೆ. ಹೆಣ್ಣುಮಕ್ಕಳು ಒಂಟಿಯಾಗಿ ಓಡಾಡುವುದು ಕಷ್ಟವಾಗಿದೆ. ಇಂತಹ ಸಮಯದಲ್ಲಿ ಬಿಳಿ ಬೊಲೆರೋ ನಗರದಲ್ಲಿ ಭಯ ಹುಟ್ಟಿಸಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಬನಶಂಕರಿಯಲ್ಲಿ ಅನುಮಾನಾಸ್ಪದ ಕಾರು ಓಡಾಡುತ್ತಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಪೊಲೀಸರೂ ಪರಿಶೀಲಿಸಿದ್ದಾರೆ. ಬೊಲೆರೊ ಕಾರು ಬೀದಿಯಲ್ಲಿ ನಿಧಾನವಾಗಿ ಚಲಿಸುತ್ತದೆ. ಅದರೊಳಗಿದ್ದವರು ಅಕ್ಕಪಕ್ಕದ ಮನೆಗಳನ್ನು ಗಮನಿಸುತ್ತಿದ್ದಾರೆ ಎಂಬುದು ತಿಳಿಯುತ್ತಿದೆ. ಒಂದು ಮನೆಯ ಗೇಟ್‌ನ ಮುಂದೆ ಆಗಷ್ಟೇ ಶಾಲೆ ಮುಗಿಸಿಕೊಂಡು ಬಂದ ಬಾಲಕಿ ಗೇಟ್ ತೆಗೆದಿದ್ದಾಳೆ. ಅದೇ ರಸ್ತೆಯಲ್ಲಿ ಬಂದ ಬೊಲೆರೊ ಕಾರಿನ ಒಳಗೆ ಕೂತಿದ್ದವರು ಹುಡುಗಿಯನ್ನು ಕಾರು ನಿಲ್ಲಿಸಿ ಕರೆದಿದ್ದಾರಂತೆ. ಆಶೀರ್ವಾದ ಮಾಡ್ತೀವಿ ಬಾ ಎಂದು ಕರೆದಿದ್ದಾರೆ ಎನ್ನಲಾಗ್ತಿದೆ.

ಕಾವಿ, ವಿಭೂತಿ ಹಾಕಿಕೊಂಡು ಕಾರಿನಲ್ಲಿ ಬಂದವರನ್ನು ಕಂಡು ಬಾಲಕಿ ಗಾಬರಿಯಾಗಿದ್ದಾಳೆ. ತಕ್ಷಣ ತಂದೆಯನ್ನು ಕರೆದಿದ್ದಾಳಂತೆ. ತಂದೆ ಮನೆಯಿಂದ ಹೊರಗೆ ಬಂದು ವಿಚಾರಿಸಲು ಹೋಗುತ್ತಿದ್ದಂತೆ ಕಾರಿನಲ್ಲಿ ಬಂದವರು ವೇಗವಾಗಿ ಹೊರಟುಹೋಗಿದ್ದಾರೆ ಎನ್ನಲಾಗ್ತಿದೆ. ಇದು ಸುತ್ತಮುತ್ತಲಿನ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಕಾರಿನಲ್ಲಿದ್ದವರ ಸಂಶಯಾಸ್ಪದ ನಡವಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ.

ಮತ್ತೊಂದ್ಕಡೆವ ಶಾಲಾ ಪರೀಕ್ಷೆಗಳು ಮುಗಿಯುತ್ತಿದ್ದು, ಮಕ್ಕಳು ಬೀದಿಗಳಲ್ಲಿ ಆಟವಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವುದು ಆತಂಕದ ವಿಚಾರವಾಗಿದೆ. ಹೆಣ್ಣು ಮಕ್ಕಳು ಇವರ ಟಾರ್ಗೆಟ್‌ ಎಂಬ ಗಾಳಿಸುದ್ದಿಗೆ ರೆಕ್ಕೆಪುಕ್ಕ ಮೂಡಿದೆ. ಇವರು ಸಂಶಯಿತ ವ್ಯಕ್ತಿಗಳೇ ಅಥವಾ ನಿಜವಾಗಿಯೂ ಸನ್ಯಾಸಿಗಳೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಕಾರು ಕರ್ನಾಟಕದ್ದಲ್ಲ, ಉತ್ತರ ಪ್ರದೇಶದ ನೋಂದಣಿ ನಂಬರ್ ಇರುವ ಬಿಳಿ ಬೊಲೆರೋ ಕಾರು ಅನ್ನೋದು ಗೊತ್ತಾಗಿದೆ. ವಾಹನದ ಬಗ್ಗೆ ಅನುಮಾನ ಬರುವ ರೀತಿಯಲ್ಲಿ ವಿಡಿಯೋ ಇದ್ದು, ವಿಡಿಯೋ ಬಗ್ಗೆ ಬನಶಂಕರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Shwetha M