ಮೂರು ಮದುವೆಯಾದರೂ ಪತ್ನಿಯ ಮೇಲೆ ಅನುಮಾನ – ಹೆಂಡತಿಯ ಖಾಸಗಿ ಅಂಗವನ್ನೇ ಬೆಂಕಿಯಿಂದ ಸುಟ್ಟ ಪಾಪಿ ಪತಿರಾಯ

ಮೂರು ಮದುವೆಯಾದರೂ ಪತ್ನಿಯ ಮೇಲೆ ಅನುಮಾನ – ಹೆಂಡತಿಯ ಖಾಸಗಿ ಅಂಗವನ್ನೇ ಬೆಂಕಿಯಿಂದ ಸುಟ್ಟ ಪಾಪಿ ಪತಿರಾಯ

ತಾನೇ ಕಳ್ಳನಾದ ಮೇಲೆ ಪರರನ್ನು ನಂಬುವುದು ಸಾಧ್ಯವೇ. ಇಲ್ಲೊಬ್ಬನ ಕಥೆಯೂ ಹಾಗೇ. ತಾನು ಮೂರು ಮದುವೆಯಾಗಿದ್ದಾನೆ. ಅವಳಲ್ಲ, ಇವಳಲ್ಲ, ಮತ್ತೊಬ್ಬಳು ಎಂದು ಮೂರು ಮದುವೆಯಾಗಿದ್ದ. ಆದರೆ, ಪತ್ನಿ ಮೇಲೆ ಯಾವಾಗಲೂ ಅನುಮಾನ. ಇದೇ ಅನುಮಾನದಲ್ಲಿ ಪಾಪಿ ಪತಿರಾಯ ಪತ್ನಿಯ ಖಾಸಗಿ ಅಂಗವನ್ನೇ ಸುಟ್ಟಿದ್ದಾನೆ.

ಇದನ್ನೂ ಓದಿ:  ಕಳ್ಳತನ ಮಾಡುವಾಗ 22 ವರ್ಷ.. ಅರೆಸ್ಟ್ ಆದಾಗ 80 ವರ್ಷ ವಯಸ್ಸು – ಎಮ್ಮೆ ಕಳ್ಳತನದ ಆರೋಪಿ 58 ವರ್ಷಗಳ ಬಳಿಕ ಬಂಧನ

ಬಿಹಾರದ ಕತಿಹಾರ್‌ನ ಬರ್ಸೋಯಿ ನಗರ ಪಂಚಾಯತ್ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರಘುನಾಥಪುರ ನಿವಾಸಿ ರಾಮಬಾಬು ಪಾಸ್ವಾನ್ ಎಂಬಾತನಿಗೆ ಮದುವೆಯಾಗುವುದೇ ಖಯಾಲಿಯಾಗಿತ್ತು. ಈಗಾಗಲೇ ಒಂದಲ್ಲ ಎರಡಲ್ಲ ಮೂರು ಮದುವೆಯಾಗಿದ್ದಾನೆ. ಇಷ್ಟಾದರೂ ಕೂಡಾ ಪತ್ನಿ ಮೇಲೆ ಅದೇನೋ ಅನುಮಾನ. ಇದೇ ಅನುಮಾನದ ಮೇಲೆ ಪತ್ನಿ ಡೋಲೋದೇವಿ ಎಂಬವರ ಜೊತೆ ರಾಮಬಾಬು ಜಗಳವಾಡಿದ್ದಾನೆ. ನಂತರ ಮರದ ತುಂಡಿಗೆ ಬಟ್ಟೆ ಕಟ್ಟಿ ಬೆಂಕಿ ಹಚ್ಚಿ ಪತ್ನಿಯ ಖಾಸಗಿ ಅಂಗಗಳನ್ನು ಸುಟ್ಟು ಹಾಕಿದ್ದಾನೆ. ಪತ್ನಿ ನೋವು ತಾಳಲಾರದೇ ಕಿರುಚಾಡಿದ್ದಾಳೆ. ಆಗ ಅಕ್ಕ ಪಕ್ಕದ ಮಂದಿ ಓಡಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ತಕ್ಷಣವೇ ಉಪವಿಭಾಗೀಯ ಆಸ್ಪತ್ರೆಗೆ ಬರ್ಸೋಯ್‌ಗೆ ಕರೆದುಕೊಂಡು ಹೋಗಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಈ ವಿಕೃತ ಕೃತ್ಯದ ಬಗ್ಗೆ ರಾಮಬಾಬು ಪಾಸ್ವಾನ್ ಸಹೋದರ ಮಾತನಾಡಿದ್ದು, ರಾಮಬಾಬು ಯಾವಾಗಲೂ ಮದ್ಯದ ಅಮಲಿನಲ್ಲಿಯೇ ಇರುತ್ತಾನೆ. ಸೋಮವಾರ ಬೆಳಗ್ಗೆಯಿಂದ ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಇದ್ದಕ್ಕಿದ್ದಂತೆ ಪತಿ ಪತ್ನಿಯ ಖಾಸಗಿ ಅಂಗಗಳನ್ನು ಸುಟ್ಟು ಹಾಕಿದ್ದಾನೆ. ಮನೆಯೊಳಗಿಂದ ಕಿರುಚಾಟದ ಶಬ್ದ ಬಂದಾಗ, ನಾವು ಎಲ್ಲಾ ಕುಟುಂಬ ಸದಸ್ಯರು ತಕ್ಷಣ ಅಲ್ಲಿಗೆ ತಲುಪಿ ಉಪವಿಭಾಗೀಯ ಆಸ್ಪತ್ರೆಗೆ ಬರ್ಸೋಯಿ ಚಿಕಿತ್ಸೆಗಾಗಿ ದಾಖಲಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Sulekha