ಬೆಂಗಳೂರಲ್ಲಿ ಶಂಕಿತ ಉಗ್ರನ ಬಂಧನ – ಐಸಿಸ್ ಜತೆ ನಂಟು ಹೊಂದಿದ್ದವನ ಗುಟ್ಟು ಎಂಥಾದ್ದು..!?

ಬೆಂಗಳೂರಲ್ಲಿ ಶಂಕಿತ ಉಗ್ರನ ಬಂಧನ – ಐಸಿಸ್ ಜತೆ ನಂಟು ಹೊಂದಿದ್ದವನ ಗುಟ್ಟು ಎಂಥಾದ್ದು..!?

ಉಗ್ರಜಾಲದ ಮೂಲಕ ರಾಜಧಾನಿ ಬೆಂಗಳೂರು ಪದೇಪದೆ ಸುದ್ದಿಯಾಗುತ್ತಿದೆ. ಸದ್ಯ ಉಗ್ರಕೃತ್ಯದ ಶಂಕೆ ಮೇರೆಗೆ ಸಾಫ್ಟ್​ವೇರ್ ಇಂಜಿನಿಯರ್​ನನ್ನ ಅಧಿಕಾರಿಗಳು ಬಂಧಿಸಿದ್ದಾರೆ. ಶಂಕಿತ ಉಗ್ರ ಆರೀಫ್‍ನನ್ನು ಧಣಿಸಂದ್ರದಲ್ಲಿ ಐಎಸ್‍ಡಿ ಹಾಗೂ ಎನ್‍ಐಎ ಅಧಿಕಾರಿಗಳು ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ :ಬ್ರಿಟನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳ ಗುಲಾಮಗಿರಿ ! – ಕರಾಳ ಸತ್ಯ ಬಯಲಾಗಿದ್ದೇಗೆ?  

ಬೆಂಗಳೂರಿನ ಶಂಕಿತ ಉಗ್ರ ಮೊಹಮ್ಮದ್ ಆರೀಫ್ ಐಸಿಸ್ ಸಂಪರ್ಕ ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡಯಲಾಗಿದೆ. ಧಣಿಸಂದ್ರದ ಮಂಜುನಾಥ್ ನಗರದಲ್ಲಿ ಆರೀಫ್‌ನನ್ನು ಬಂಧಿಸಲಾಗಿದ್ದು, ಆತನ ಮನೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಆರೀಫ್ ನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಕೆಲಸ ಮಾಡುತ್ತ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಅನ್ನುವ ಮಾಹಿತಿ ಲಭ್ಯವಾಗಿದೆ.

ಸಾಫ್ಟ್‌ವೇರ್ ಇಂಜಿನಯರ್ ಆಗಿದ್ದ ಆರೀಫ್ ಟೆಲಿಗ್ರಾಮ್(Telegram) ಹಾಗೂ ಡಾರ್ಕ್‌ನೆಟ್(Darkweb)  ಮೂಲಕ ಆಲ್ ಖೈದಾ ಗ್ರೂಪ್ ಗಳಲ್ಲಿ ಸಕ್ರಿಯನಾಗಿದ್ದ. ಬೆಂಗಳೂರಿನಲ್ಲಿ ಇರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ  ಧಣಿಸಂದ್ರದಲ್ಲಿ ಐಎಸ್‍ಡಿ ಹಾಗೂ ಎನ್‍ಐಎ ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರ ಅರೀಫ್ ಐಸಿಸ್ ಜೊತೆ ನಿರಂತರ ಸಂಪರ್ಕದಲ್ಲಿ ಇರೋದ್ರ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಬಗ್ಗೆ ಐಎಸ್​ಡಿ ತಂಡ ಎನ್​ಐಎ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದರು. ಐಎಸ್ ಡಿ ಹಾಗೂ ಎನ್ ಐ ಎ ಜಂಟಿಯಾಗಿ ಈತನ ಮೇಲೆ ಕಣ್ಣಿಟ್ಟಿತ್ತು. ಐಸಿಸ್ ಗೆ ಹೋಗಲು ಎಲ್ಲಾ ತಯಾರಿ ಮಾಡಿಕೊಂಡಿದ್ದ ಶಂಕಿತ ಉಗ್ರ ಆರೀಫ್​ನನ್ನ ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ.

ನಗರದಲ್ಲಿ ಟೆಕ್ಕಿಯಾಗಿದ್ದುಕೊಂಡು ಅಲ್‌ಕೈದಾ(Al Qaeda) ಜತೆ ನಿರಂತರ ಸಂಪರ್ಕದಲ್ಲಿದ್ದ ಉಗ್ರ ಆರೀಫ್ ಈ ಹಿಂದೆ ಸಿರಿಯಾಕ್ಕೆ ಇರಾಕ್ ಮೂಲಕ ತೆರಳಲು ಯತ್ನಿಸಿದ್ದ. ಆದರೆ ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ  ಹೋಗಲು ಸಾದ್ಯವಾಗಿರಲಿಲ್ಲ. ಮುಂದಿನ ತಿಂಗಳು ಮಾರ್ಚ್‌ನಲ್ಲಿ ಇರಾಕ್ ಮೂಲಕ ಸಿರಿಯಾ, ಅಫ್ಘಾನ್‌ಗೆ ತೆರಳಲು ಸಿದ್ಧತೆ ನಡೆಸಿದ್ದ. ವಿಮಾನದ ಟಿಕೆಟ್ ಕೂಡ ಬುಕ್ ಮಾಡಿದ್ದ. ಕಳೆದ ಎರಡು ವರ್ಷಗಳಿಂದ ಅಲ್‌ಖೈದಾ ಜತೆಗೆ ಸಂಪರ್ಕದಲ್ಲಿ ಇರುವ ಬಗ್ಗೆ ಮಾಹಿತಿ ಎನ್‌ಐಎ ತಂಡಕ್ಕೆ ಸಿಕ್ಕಿತ್ತು.

ಈ ಹಿಂದೆ  ಟ್ವಿಟರ್​ನಲ್ಲಿ ಉಗ್ರ ಸಂಘಟನೆ ಪರವಾಗಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಪೋಸ್ಟ್ ಮಾಡಿದ್ದ. ಟ್ವೀಟರ್ ಸಂಸ್ಥೆ ಅದನ್ನು ಬ್ಲಾಕ್ ಮಾಡಿತ್ತು. ಬಳಿಕ ಉಗ್ರ ಟ್ವೀಟರ್‌ನಲ್ಲಿ ಸಕ್ರಿಯನಾಗಿರಲಿಲ್ಲ. ಎರಡು ದಿನದಲ್ಲಿ  ಮನೆ ಖಾಲಿ ಮಾಡಲು ನಿರ್ಧರಿಸಿದ್ದ ಆರೀಫ್ ಸೋಮವಾರದೊಳಗೆ ಮನೆ ಬಿಡುವುದಾಗಿ ಮನೆ ಮಾಲೀಕರಿಗೆ ತಿಳಿಸಿದ್ದ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉತ್ತರ ಪ್ರದೇಶಕ್ಕೆ ಬಿಟ್ಟು ಪರಾರಿಯಾಗಲು ರೆಡಿಯಾಗಿದ್ದ. ಈ ಹಿನ್ನಲೆ ಇಂದು ಬೆಳಗ್ಗೆ 4 ಗಂಟೆಗೆ ಶಂಕಿತ ಉಗ್ರ ವಾಸವಿದ್ದ ಮನೆ ಮೇಲೆ ಐಎಸ್ ಡಿ ತಂಡ ಮಿಂಚಿನ ದಾಳಿ ಮಾಡಿದೆ. ಆರೀಫ್​ನನ್ನ ಬಂಧಿಸಿ ಲ್ಯಾಪ್‌ಟಾಪ್ ಎರಡು ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿದೆ.

suddiyaana