ಪಾರಿವಾಳದ ಕಾಲಲ್ಲಿ ಕ್ಯಾಮರಾ, ಮೈಕ್ರೋಚಿಪ್! – ಗೂಢಚರ್ಯೆ ನಡೆಯುತ್ತಿದ್ಯಾ?

ಪಾರಿವಾಳದ ಕಾಲಲ್ಲಿ ಕ್ಯಾಮರಾ, ಮೈಕ್ರೋಚಿಪ್! – ಗೂಢಚರ್ಯೆ ನಡೆಯುತ್ತಿದ್ಯಾ?

ರಾಜಮನೆತನಗಳ ಆಳ್ವಿಕೆ ಕಾಲದಲ್ಲಿ ಪತ್ರಗಳನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ತಲುಪಿಸಲು ಪಾರಿವಾಳಗಳನ್ನು ಬಳಸಲಾಗುತ್ತಿದ್ದು. ಇದೀಗ ಇದೇ ಪಾರಿವಾಳವನ್ನು ಗೂಢಚರ್ಯೆಗೆ ಬಳಸಲಾಗುತ್ತಿದೆ ಅನ್ನೋ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಒರಿಸ್ಸಾದ ಜಗತ್ ಸಿಂಗ್ ಪುರ ಜಿಲ್ಲೆಯಲ್ಲಿ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ತಮ್ಮ ಟ್ರಾಲರ್ ನಲ್ಲಿ ಪಾರಿವಾಳವೊಂದು ಕುಳಿತಿತ್ತು. ಅದರ ಕಾಲಿನಲ್ಲಿ ಏನೋ ವಸ್ತು ಸಿಲುಕಿಕೊಂಡಿರುವುದನ್ನು ಪರೀಕ್ಷಿಸಿದ್ದಾರೆ. ಈ ವೇಳೆ ಪಾರಿವಾಳದ ಕಾಲಿನಲ್ಲಿ ಕ್ಯಾಮರಾ ಮತ್ತು ಮೈಕ್ರೋ ಚಿಪ್ ನಂತೆ ಹೋಲುವ ಸಾಧನ ಕಂಡು ಬಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬರ್ತ್ ಡೇ ಕೇಕ್ ನಲ್ಲಿ 2,000 ಚೇಂಜ್ ತನ್ನಿ ಎಂದು ಬರೆದ ಬೇಕರಿ ಸಿಬ್ಬಂದಿ – ಆಮೇಲೆ ಏನಾಯ್ತು ಗೊತ್ತಾ?  

ಮೀನುಗಾರರು ಈ ಪಾರಿವಾಳವನ್ನು ಹಿಡಿದು ಬುಧವಾರ ಒರಿಸ್ಸಾದ ಮರೀನ್  ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನು ಪರೀಕ್ಷಿಸಿದ ಪೊಲೀಸರು ಈ ಪಕ್ಷಿಯನ್ನು ಬೇಹುಗಾರಿಕೆಗೆ ಬಳಸಲಾಗುತ್ತಿದೆ ಅಂತಾ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಜಗತ್ ಸಿಂಗ್ ಪುರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪಿಆರ್ ಮಾತನಾಡಿದ್ದು, ಮೀನುಗಾರರಿಗೆ  ಸಿಕ್ಕ ಪಾರಿವಾಳವನ್ನು ಈಗಾಗಲೇ ಪಶು ವೈದ್ಯರು ಪರೀಕ್ಷಿಸಿದ್ದಾರೆ. ಪಕ್ಷಿಯ ಕಾಲಿನಲ್ಲಿರುವುದು ಕ್ಯಾಮರಾ ಮತ್ತು ಮೈಕ್ರೋಚಿಪ್ ನಂತೆ ತೋರುತ್ತಿವೆ. ಇದನ್ನು ಪರೀಕ್ಷಿಸಲು ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ  ಸಹಾಯ ಪಡೆಯುತ್ತೇವೆ ಎಂದು ಹೇಳಿದ್ದಾರೆ.

ಪಾರಿವಾಳದ ರೆಕ್ಕೆಯಲ್ಲಿ ಯಾವುದೋ ಭಾಷೆಯಲ್ಲಿದೆ ಬರೆಯಲಾಗಿದೆ. ಇದು ಪೊಲೀಸರಿಗೆ ಅರ್ಥವಾಗುತ್ತಿಲ್ಲ. ಇದರಲ್ಲಿ ಏನು ಬರೆಯಲಾಗಿದೆ ಎಂದು ಕಂಡು ಹಿಡಿಯಲು  ತಜ್ಞರ ಸಹಾಯ ಪಡೆಯಲಾಗುವುದು ಎಂದು ಎಸ್ ಪಿ ಹೇಳಿದ್ದಾರೆ.

suddiyaana