ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ – ವೈದ್ಯರಿಂದ ಶಾಕಿಂಗ್ ಮಾಹಿತಿ..!

ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ – ವೈದ್ಯರಿಂದ ಶಾಕಿಂಗ್ ಮಾಹಿತಿ..!

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್​ ಅವರಿಗೆ ಹೃದಯಾಘಾತವಾಗಿದ್ದು, ಅಭಿಮಾನಿಗಳು ಆತಂಕಗೊಂಡಿದ್ದಾರೆ. ನೆಚ್ಚಿನ ನಟಿಯ ಆರೋಗ್ಯ ಸ್ಥಿತಿ ಹೇಗಿದೆಯೋ ಎಂದು ಗಾಬರಿಯಾಗಿದ್ದಾರೆ.

ಹಾರ್ಟ್ ಅಟ್ಯಾಕ್ ಬಗ್ಗೆ ಖುದ್ದು ಸುಶ್ಮಿತಾ ಸೇನ್ ಮಾಹಿತಿ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಿಮ್ಮ ಹೃದಯವನ್ನು ಸಂತೋಷದಿಂದ ಮತ್ತು ಧೈರ್ಯದಿಂದ ಇಟ್ಟುಕೊಳ್ಳಿ, ಮತ್ತು ನಿಮಗೆ ಹೆಚ್ಚು ಅಗತ್ಯವಿರುವಾಗ ಅದು ನಿಮ್ಮೊಂದಿಗೆ ನಿಲ್ಲುತ್ತದೆ. ಇದು ನನ್ನ ತಂದೆ ನನಗೆ ಹೇಳಿಕೊಟ್ಟ ಪಾಠ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ :  ಅಮಿತಾಭ್, ಧರ್ಮೇಂದ್ರ, ಅಂಬಾನಿ ಮನೆಯಲ್ಲಿ ಬಾಂಬ್!

ಹಾಗೇ ನಾನು 2 ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದೆ. ಆಂಜಿಯೋಪ್ಲ್ಯಾಸ್ಟಿ ಮಾಡಿದ್ದು, ಸ್ಟೆಂಟ್ ಅಳವಡಿಸಲಾಗಿದೆ. ಅದ್ರಲ್ಲೂ ಮುಖ್ಯವಾಗಿ ಹೃದ್ರೋಗ ತಜ್ಞರು ನನಗೆ ದೊಡ್ಡ ಹೃದಯವಿದೆ ಎಂದಿದ್ದಾರೆ. ನಾನು ಚೆನ್ನಾಗಿಯೇ ಇದ್ದು ನನ್ನ ಜೀವನ ನಡೆಸಲು ಸಿದ್ಧವಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಹೃದಯಾಘಾತದ ಸಂದರ್ಭದಲ್ಲಿ ಸಾಕಷ್ಟು ಜನ ಸಹಾಯ ಮಾಡಿದ್ದೀರಿ ಹಾಗೇ ನನಗಾಗಿ ಪ್ರಾರ್ಥಿಸಿದ್ದೀರಿ. ಹೀಗಾಗಿ ಧನ್ಯವಾದ ಹೇಳಲು ತಿಳಿಸುತ್ತೇನೆ ಎಂದಿದ್ದಾರೆ.

suddiyaana