ಯೂಟ್ಯೂಬ್ ನ ಹೊಸ ಸಿಇಒ ಆಗಿ ಭಾರತೀಯ ಮೂಲದ ನೀಲ್ ಮೋಹನ್ ನೇಮಕ

ಯೂಟ್ಯೂಬ್ ನ ಹೊಸ ಸಿಇಒ ಆಗಿ ಭಾರತೀಯ ಮೂಲದ ನೀಲ್ ಮೋಹನ್ ನೇಮಕ

ನವದೆಹಲಿ: ಜಗತ್ತಿನ ಪ್ರಮುಖ ವಿಡಿಯೋ ಶೇರಿಂಗ್‌ ಸಾಮಾಜಿಕ ಜಾಲತಾಣದವಾದ ಯೂಟ್ಯೂಬ್‌ನ ಹೊಸ ಸಿಇಒ ಆಗಿ ಭಾರತ ಮೂಲದ ನೀಲ್ ಮೋಹನ್ ನೇಮಕಗೊಂಡಿದ್ದಾರೆ.

ಇದನ್ನೂ ಓದಿ:  ಮಾರ್ಕ್ ಜುಕರ್‌ಬರ್ಗ್ ಗಿದ್ಯಾ ಜೀವ ಬೆದರಿಕೆ? – 82 ಕೋಟಿ ರೂಪಾಯಿ  ಭದ್ರತೆಗೆ ಇಟ್ಟಿದ್ದೇಕೆ?

ಕಳೆದ 9 ವರ್ಷಗಳಿಂದ ಯೂಟ್ಯೂಬ್ ನ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸುಸಾನ್‌ ವೂಚಿಟ್ಸ್‌ಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆ ಅವರೊಂದಿಗೆ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ನೀಲ್‌ ಮೋಹನ್ ಆಯ್ಕೆಯಾಗಿದ್ದಾರೆ.

ಸಿಇಒ ಸ್ಥಾನ ತೊರೆದಿರುವ ಸುಸಾನ್‌ ಮಾತನಾಡಿದ್ದು, ಇನ್ನು ಮುಂದೆ ಕುಟುಂಬ, ಆರೋಗ್ಯ ಮತ್ತು ಖಾಸಗಿ ಯೋಜನೆಗಳತ್ತ ಗಮನ ಹರಿಸುವುದಾಗಿ ಹೇಳಿಕೊಂಡಿದ್ದಾರೆ.

ಹೊಸ ಸಿಇಒ ನೀಲ್ ಮೋಹನ್ ಅವರು ಯೂಟ್ಯೂಬ್‌ನ ಹಿರಿಯ ಉಪಾಧ್ಯಕ್ಷರ ಪಾತ್ರವನ್ನು ಸಹ ನಿರ್ವಹಿಸಲಿದ್ದಾರೆ. ನೀಲ್ ಮೋಹನ್ ಪ್ರಸ್ತುತ ಯೂಟ್ಯೂಬ್‌ನ ಮುಖ್ಯ ಉತ್ಪನ್ನ ಅಧಿಕಾರಿಯಾಗಿದ್ದು, ಅವರು ನವೆಂಬರ್ 2015 ರಲ್ಲಿ ಯುಟ್ಯೂಬ್ ನೊಂದಿಗೆ ಕೆಲಸ ಆರಂಭಿಸಿದ್ದರು.

suddiyaana