U-19 ಏಷ್ಯಾಕಪ್ನಲ್ಲಿ ವೈಭವ್ ಅಬ್ಬರ – ಮಲೇಷ್ಯಾ ವಿರುದ್ಧ ಸಿಡಿಲಬ್ಬರದ ಅರ್ಧಶತಕ

ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ವೈಭವ್ ಸೂರ್ಯವಂಶಿಯ ಸಿಡಿಲಬ್ಬರ ಮುಂದುವರೆದಿದೆ. ಯುಎಇ ವಿರುದ್ಧ ಸ್ಫೋಟಕ ಸೆಂಚುರಿ ಸಿಡಿಸಿದ್ದ ವೈಭವ್ ಇದೀಗ ಮಲೇಷ್ಯಾ ವಿರುದ್ಧ ಸಿಡಿಲಬ್ಬರದ ಅರ್ಧಶತಕ ಬಾರಿಸಿದ್ದಾರೆ. ದುಬೈನ ಸೆವೆನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟಾಸ್ ಗೆದ್ದ ಮಲೇಷ್ಯಾ ತಂಡ ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಬಿರುಸಿನ ಆರಂಭ ಒದಗಿಸಿದರು.
ಇದನ್ನೂ ಓದಿ: ವಿಷವಾಗುತ್ತಿದೆ ಉಸಿರಾಡೋ ಗಾಳಿ! – ರಾಷ್ಟ್ರ ರಾಜಧಾನಿಯಲ್ಲಿ ಶಾಲೆಗಳು ಬಂದ್!
ಮಲೇಷ್ಯಾ ವಿರುದ್ಧ ಮೊದಲ ಓವರ್ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡಿದ ವೈಭವ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರ ನಡುವೆ ಯುವ ದಾಂಡಿಗನ ಬ್ಯಾಟ್ನಿಂದ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳು ಮೂಡಿಬಂದಿದ್ದವು. ಆದರೆ ಅರ್ಧಶತಕದ ಬೆನ್ನಲ್ಲೇ ಬಿರುಸಿನ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿ ಔಟಾದರು.
ಇದಕ್ಕೂ ಮುನ್ನ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು ಈ ಪಂದ್ಯದಲ್ಲಿ 95 ಎಸೆತಗಳನ್ನು ಎದುರಿಸಿದ್ದ ಯುವ ಎಡಗೈ ದಾಂಡಿಗ 14 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 171 ರನ್ ಬಾರಿಸಿದ್ದರು. ಈ ಮೂಲಕ ಅಂಡರ್-19 ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು.ಆದರೆ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 5 ರನ್ಗಳಿಸಿ ನಿರಾಸೆ ಮೂಡಿಸಿದ್ದರು. ಇದೀಗ ಮಲೇಷ್ಯಾ ವಿರುದ್ಧ ಸ್ಫೋಟಕ ಹಾಫ್ ಸೆಂಚುರಿ ಸಿಡಿಸುವ ಮೂಲಕ ವೈಭವ್ ಮತ್ತೆ ಟ್ರ್ಯಾಕ್ಗೆ ಮರಳಿದ್ದಾರೆ. ಈ ಮೂಲಕ 3 ಇನಿಂಗ್ಸ್ಗಳಿಂದ ಒಟ್ಟು 226 ರನ್ ಕಲೆಹಾಕಿದ್ದಾರೆ.

ನೋಡಿರಿ

