20 ಬಾಲ್ ಮೇಲೆ ಆಡಲ್ಲ ಸೂರ್ಯವಂಶಿ – ಶ್ರೇಯಸ್ ಮಾತು ಕೇಳಲ್ವಾ ವೈಭವ್?
ನಿಂತು ಆಡದಿದ್ರೆ ಟೀಮ್‌ಗೆ ನಷ್ಟ

ನಾನ್ ಹೊಡೆದಿದ್ದು ಎಲ್ಲಾ ಸಿಕ್ಸ್ ಹೋಗಬೇಕು,ಇಲ್ಲಾ ಫೋರ್ ಹೋಗಬೇಕು.. ಇದು ವೈಭವ್ ಸೂರ್ಯವಂಶಿಯ ಮನೋಭಾವ. ವೈಭವ್ ಆಟ ನೋಡುವುದ್ದಕ್ಕೆ ಖುಷಿ ಆದ್ರೆ ಈತನ ಈ ಹುಡುಗನಿಗೆ ತಾಳ್ಮೆ ಕಮ್ಮಿ ಅನ್ಸುತ್ತೆ. ಹೊಡಿಬಡಿ ಆಟ ಇರಬೇಕು ಹಾಗಂತ ನಿಧಾರ ಆಟ ಕೂಡ ಬೇಕು. ಎಲ್ಲಾ ಮ್ಯಾಚ್ ಹೊಡಿಬಡಿ ಆಟ ಬೇಕಾಗಿಲ್ಲ. ಹೀಗಾಗಿ ಎಲ್ಲರಿಗೂ ಚಿಂತೆ ಆಗಿರುವುದು ವೈಭವ್ ಹೊಡಿಬಡಿ ಆಟದ ಬಗ್ಗೆ.
ಬ್ಯಾಟ್ ಹಿಡಿದ ಕ್ರಿಸ್‌ಗಿಳಿಯುವ ವೈಭವ್ ಹೆಚ್ಚು ಅಂದ್ರೆ 20ರಿಂದ 25 ಬಾಲ್ ಆಡಿ ಪೆವಿಲಿಯನ್ ಸೇರ್ತಾರೆ. ಟಿ20ನಲ್ಲಿ ಭಾರತದ ಪರ 20 ಬಾಲ್ ಮೇಲೆ ಆಡಿಲ್ಲ. ಹೆಚ್ಚು ಕಾಲ ಕ್ರಿಸ್‌ನಲ್ಲಿ ನಿಲ್ಲೋದೇ ಇಲ್ಲ. ನಾನ್ ನಿಮ್ಗೆ ಈಗ ವೈಭವ್ ಆಡಿರೋ 4 ಪಂದ್ಯದ ಬಗ್ಗೆ ಹೇಳ್ತಿನಿ ನೋಡಿ..ನಿಮ್ಗೆ ಗೊತ್ತಾಗುತ್ತೆ..
20 ಬಾಲ್ ಮೇಲೆ ಆಡಲ್ಲ ವೈಭವ್
ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ 10 ಬಾಲ್‌ಗೆ 13 ರನ್
ಇಂಗ್ಲೆಂಡ್ ವಿರುದ್ಧ ಎರಡನೇ ಪಂದ್ಯದಲ್ಲಿ 5 ಬಾಲ್‌ಗೆ 10 ರನ್
ಇಂಗ್ಲೆಂಡ್ ವಿರುದ್ಧ 3ನೇ ಪಂದ್ಯದಲ್ಲಿ 10 ಬಾಲ್‌ನಲ್ಲಿ 15 ರನ್
ಜಿಂಬಾಂಬೆ ವಿರುದ್ಧ 19 ಬಾಲ್‌ನಲ್ಲಿ 50 ರನ್
ಈ ಅಂಕಿ ಅಂಶ ನೋಡಿದ್ರೆ ಹೆಚ್ಚು ಹೊತ್ತು ಕ್ರಿಸ್‌ನಲ್ಲಿ ನಿಲುವುದ್ದಕ್ಕೆ ವೈಭವ್ ಕೈಯಲ್ಲಿ ಆಗ್ತಿಲ್ಲ. ಸೆಂಚುರಿ ಹೊಡೆದ್ರು ಕೂಡ ಕಡಿಮೆ ಬಾಲ್‌ನಲ್ಲಿ ಹೊಡೀತಾ ಇದ್ದಾರೆ.. ಹೀಗೆ ಮಾಡಿಯೇ ಈಗಾಗಲೇ ಸಾಕಷ್ಟು ಸೆಂಚುರಿ ಮಿಸ್ ಮಾಡಿಕೊಂಡಿದ್ದಾರೆ ಸೂರ್ಯವಂಶಿ.. ಹೀಗೆ ಆಡುವುದರಿಂದ ಟೀಂ ಮೇಲೆ ಹೊಡೆತ ಬೀಳುತ್ತೆ.. ಓಪನರ್ ಆಗಿರುವುದ್ದರಿಂದ ಹೊಡಿಬಡಿ ಆಟ ಆಡದೇ ಒಂದಿಷ್ಟು ಸಮಯ ಕ್ರಿಸ್‌ನಲ್ಲಿ ನಿಲ್ಲಬೇಕಾಗುತ್ತೆ.. ವಿರಾಟ್ ಕೊಹ್ಲಿ ಕೂಡ ಹೊಡಿಬಡಿ ಆಟ ಆಡ್ತಾರೆ. ಆದ್ರೆ ಎಲ್ಲ ಸಲ ಕೂಡ ಸಿಕ್ಸ್ ಫೋರ್ ಹೊಡೆಯುವುದ್ದಕ್ಕೆ ಹೋಗಲ್ಲ.. ಸಾಕಷ್ಟು ಟೈಂ ರನ್ ಬಂದಿಲ್ಲ ಅಂದ್ರೂ ಕೊಹ್ಲಿ ಕ್ರಿಸ್‌ನಲ್ಲಿದ್ದು, ಪಂದ್ಯ ಗೆಲ್ಲೋ ನಿಲ್ಲಿಸೋ ಕಡೆ ಗಮನ ಕೊಡ್ತಾರೆ. ಆದ್ರೆ ವೈಭವ್ ಹಾಗಲ್ಲ ಸಿಕ್ಕ ಬಾಲ್‌ಗಳನ್ನ ಸಿಕ್ಸ್ ಫೋರ್ ಹೊಡೆದು ನಂತ್ರ ಬೇಗ ಔಟ್ ಆಗಿ ಬರ್ತಾರೆ. ಇದು ಬದಲಾಗಬೇಕು.. ವೈಭವ್‌ಗೆ ತಾಳ್ಮೆ ಮುಖ್ಯ.. ಕನಿಷ್ಟ ಪಕ್ಷ 7-8 ಓವರ್ ತನಕ ಆದ್ರೂ ಕ್ರಿಸ್‌ನಲ್ಲಿ ನಿಲ್ಲಬೇಕು.. ನೋಡಿ ಮಾಡಿ ಸಿಕ್ಸ್ ಫೋರ್ ಹೊಡಿಬೇಕಿದೆ. ಆ ನಿಟ್ಟಿನಲ್ಲಿ ವೈಭವ್‌ಗೆ ಕೋಚಿಂಗ್ ಬೇಕಿದೆ.
ವೈಭವ್ ಬಗ್ಗೆ ಶ್ರೇಯಸ್ ಅಯ್ಯರ್ ಕೂಡ ಮಾತನಾಡಿದ್ದಾರೆ. ಯುವ ಕ್ರಿಕೆಟಿಗ ತನ್ನ ತಪ್ಪುಗಳನ್ನು ಸುಧಾರಿಸಿಕೊಂಡು ಮುನ್ನಡೆಯಲಿದ್ದಾರೆ ಎನ್ನುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಇಂಗ್ಲೆಂಡ್ ಎದುರಿನ ಸರಣಿಯ ಬಳಿಕ ವೈಭವ್‌ಗೆ ಒಳ್ಳೆಯ ಬ್ರೇಕ್ ಸಿಕ್ಕಿದೆ. ಈ ಸಂದರ್ಭದಲ್ಲಿ ವೈಭವ್ ತಾನು ಮಾಡಿರುವ ತಪ್ಪಿನ ಕುರಿತಂತೆ ಖಂಡಿತವಾಗಿಯೂ ವಿಶ್ಲೇಷಣೆ ಮಾಡಿರುತ್ತಾರೆ. ವೈಯುಕ್ತಿವಾಗಿ ಹೇಳಬೇಕೆಂದರೆ ನಾನು ಅವನಿಗೆ ಹೆಚ್ಚಿಗೆ ಸಲಹೆ ನೀಡುವ ಅಗತ್ಯವಿಲ್ಲ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಒಟ್ನಲ್ಲಿ ವೈಭವ್‌ಗೆ ಹೇಗ ಆಡಬೇಕು ಅನ್ನೋದು ಗೊತ್ತಿದೆ. ಆದ್ರೆ ವೈಭವ್‌ನ ನಾವು ಹೆಚ್ಚು ಕಾಲ ಕ್ರಿಸ್‌ನಲ್ಲಿ ನಿಂತು ಆಡುವುದ್ದನ್ನ ನೋಡಬೇಕು ಅನ್ನೋದು ಆಸೆ. ವೈಭವ್ ಕೇವಲ ಹೊಡಿಬಡಿ ಆಟದ ಕಡೆ ಹೆಚ್ಚು ಗಮನ ಕೊಟ್ರೆ ಟೀಂ ಇಂಡಿಯಾಕ್ಕೆ ನಷ್ಟ ಆಗುತ್ತೆ. ಗೆಲ್ಲೋ ಮ್ಯಾಚ್ ಸೋಲಬೇಕಾಗುತ್ತೆ. ಈ ತಪ್ಪನ್ನ ವೈಭವ್ ತಿದ್ದಿಕೊಳ್ಳಬೇಕಿದೆ.

ನೋಡಿರಿ

