CSK ಫಸ್ಟ್ ಮ್ಯಾಚ್ ದೇವ್ರಿಗೆ – ಚೆನ್ನೈ ಚೆಂಡಾಡಿದ ಬಾಸ್ ಬೇಬಿ
ಒಂದಂಕಿಗೆ ಸುಸ್ತಾದ ಟಾಪ್ ಆರ್ಡರ್!

ಐಪಿಎಲ್ ನಲ್ಲಿ ಈ ಸೀಸನ್ ನ ಮೊದಲ 2 ಪಂದ್ಯಗಳು ಹೈವೋಲ್ಟೇಜ್ ಮ್ಯಾಚ್ ಗಳು. 200 ಪ್ಲಸ್ ಸ್ಕೋರ್ ಟಾರ್ಗೆಟ್.. ಆದ್ರೆ ಮೂರನೇ ಮ್ಯಾಚ್ ನಲ್ಲಿ ಸಿಎಸ್ಕೆ ಟೀಂ ಫೈಟ್ ಕೂಡ ಕೊಡದೆ ಹೀನಾಯವಾಗಿ ಸೋತಿದೆ. ಕಳೆದ ವರ್ಷ ಬಾಟಮ್ ಆಫ್ ದಿ ಟೇಬಲ್ ಟೂರ್ನಿ ಮುಗಿಸಿದ್ದ ಸಿಎಸ್ಕೆ ಈ ಸಲ ಸ್ಟ್ರಾಂಗ್ ಆಗಿ ಕಂ ಬ್ಯಾಕ್ ಮಾಡ್ತೀವಿ ಅಂದಿದ್ರು. ಆದ್ರೆ ಮೊದಲ ಮ್ಯಾಚಲ್ಲೇ ಸರೆಂಡರ್ ಆಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಭರ್ಜರಿಯಾಗಿ ಗೆದ್ದು ಶುಭಾರಂಭ ಮಾಡಿದೆ.
ಇದನ್ನೂ ಓದಿ : ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ ಬಲ – ಆರ್ ಆರ್ ವಿರುದ್ಧ ಹೀನಾಯವಾಗಿ ಸೋತ CSK
ಬ್ಯಾಟಿಂಗ್ ನಲ್ಲಿ ಕಂಪ್ಲೀಟ್ ಫೇಲ್ಯೂರ್ ಆದ ಚೆನ್ನೈ!
ಟಾಸ್ ಸೋತು ಫಸ್ಟ್ ಬ್ಯಾಟಿಂಗ್ಗೆ ಬಂದ ಚೆನ್ನೈ ಪರ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದ್ರು. ಟಿ20 ವಿಶ್ವಕಪ್‌ನಲ್ಲಿ ಸದ್ದು ಮಾಡಿದ್ದ ಸಂಜು ಸ್ಯಾಮ್ಸನ್, ಚೆನ್ನೈ ಪರ ತಮ್ಮ ಚೊಚ್ಚಲ ಪಂದ್ಯದಲ್ಲಿ ಕೇವಲ 6 ರನ್ ಗಳಿಗೆ ಔಟಾದ್ರು. ರುತುರಾಜ್ ಕೂಡ 6 ರನ್, ಆಯುಷ್ ಮಾತ್ರೆ ಡಕ್ ಔಟ್, ಮ್ಯಾಟ್ ಶಾರ್ಟ್ 2 ರನ್. ಸೋ ಅಲ್ಲಿಗೆ ಟಾಪ್ ಆರ್ಡರ್ ನ ನಾಲ್ಕು ಬ್ಯಾಟರ್ಸ್ ಗಳಿಂದ ಬಂದಿದ್ದು ಕೇವಲ 14 ರನ್. ಸರ್ಫರಾಜ್, ಕಾರ್ತಿಕ್ ಡಬಲ್ ಡಿಜಿಟ್ಗೆ ಬಂದ್ರೂ 20 ರ ಒಳಗೇ ಔಟಾದ್ರು. ಇನ್ನು ದುಬೆ 6 ರನ್. ಜೇಮಿ ಓವರ್ ಟನ್ 43 ರನ್ ಗಳಿಸಿರದಿದ್ರೆ ಸಿಎಸ್ ಕೆ 100ರ ಒಳಗೇ ಆಲೌಟ್ ಆಗ್ತಿತ್ತು. ಅಂತಿಮಾವಿ 127 ರನ್ಗಳಿಗೆ ಇನ್ನೂ ಎರಡು ಬಾಲ್ ಇದ್ದಾಗ್ಲೇ ತನ್ನೆಲ್ಲಾ ವಿಕೆಟ್ ಕಳ್ಕೊಳ್ತು. ಟಾರ್ಗೆಟ್ ನೋಡಿದಾಗ್ಲೇ ರಾಜಸ್ಥಾನ ವಿನ್ ಆಗುತ್ತೆ ಅನ್ನೋದು ಗೊತ್ತಾಯ್ತು.
15 ವರ್ಷ.. 15 ಬಾಲಲ್ಲೇ ಫಿಫ್ಟಿ ಹೊಡೆದ ವೈಭವ್!
ಚೇಸಿಂಗ್ ಆರಂಭಿಸಿದ ರಾಜಸ್ಥಾನ ಪರ ವೈಭವ್ ಸೂರ್ಯವಂಶಿ ಫಸ್ಟ್ ಓವರ್ನಲ್ಲೇ ಜೀವದಾನ ಪಡೀತಾರೆ.. ಕಾರ್ತಿಕ್ ಕ್ಯಾಚ್ ಬಿಡ್ತಾರೆ. ಆದ್ರೆ ಇದಕ್ಕೆಲ್ಲಾ ಕೇರ್ ಮಾಡದ ವೈಭವ್ ಫಿಯರ್ ಲೆಸ್ ಬ್ಯಾಟಿಂಗ್ ಮಾಡಿದ್ರು. ಎಕ್ಸ್ಪೀರಿಯನ್ಸ್ಡ್ ಬೌಲರ್ಸ್ಗೂ ಮರ್ಯಾದೆನೇ ಕೊಡದಂತೆ ಬಿಗ್ ಹಿಟ್ಗಳಲ್ಲೇ ಡೀಲ್ ಮಾಡಿದ್ರು. ಮಾರ್ಚ್ 27ರಂದು 15ನೇ ವರ್ಷಕ್ಕೆ ಕಾಲಿಟ್ಟಿರೋ ವೈಭವ್ ಮಾರ್ಚ್ 30ಕ್ಕೆ ಜಸ್ಟ್ 15 ಬಾಲಲ್ಲೇ ಫಿಫ್ಟಿ ಬಾರಿಸಿದ್ರು. ಆರ್ ಆರ್ ಪರ ಇದು ಫಾಸ್ಟೆಸ್ಟ್ ಫಿಫ್ಟಿ ಆಯ್ತು. ಫ್ಯಾನ್ಸ್ ಅಂತೂ ವೈಭವ್ ಆರ್ಭಟಕ್ಕೆ ಫಿದಾ ಆಗಿದ್ರು. ಜೈಸ್ವಾಲ್ಗೆ ಸ್ಟ್ರೈಕ್ ಹೋದಾಗ್ಲೆಲ್ಲಾ ಸಿಂಗಲ್ ತಗೊಂಡು ವೈಭವ್ಗೆ ಸ್ಟ್ರೈಕ್ ಕೊಡಪ್ಪ ಅಂತಿದ್ರು. ಅಂತಿಮವಾಗಿ ಸಿಡಿಗುಂಡಿನಂತೆ ಸಿಡಿದ ವೈಭವ್ 52 ರನ್ ಗಳಿಸಿ ಔಟಾದ್ರು. ಜುರೇಲ್ 18 ರನ್ ಗಳಿಗೆ ಔಟಾದ್ರೆ ಇನ್ನು ಸ್ಲೋ ಗೇಮ್ ಆಡಿದ ಜೈಸ್ವಾಲ್ 38 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಪರಾಗ್ 14 ರನ್ಸ್ ಬಂತು. ಅಂತಿಮವಾಗಿ 12.1 ಓವರ್ ನಲ್ಲೇ 2 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ರೀಚ್ ಆಗೋ ಮೂಲಕ ಭರ್ಜರಿಯಾಗೇ ಗೆದ್ದು ಶುಭಾರಂಭ ಮಾಡಿದ್ರು. ಬಹುಶಃ ವೈಭವ್ ಇದ್ದಿದ್ರೆ 10ನೇ ಒವರ್ ಒಳಗೇ ಮ್ಯಾಚ್ ಮುಗಿಸ್ತಿದ್ರು. ಆದ್ರೆ ಚೆನ್ನೈ ಮಾತ್ರ ಕಳೆದ ವರ್ಷದಂತೆಯೇ ಈ ವರ್ಷವೂ ಒದ್ದಾಡುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಕಳೇದ ಸೀಸನ್ ಕೂಡ ಬ್ಯಾಟಿಂಗ್ ಕಂಪ್ಲೀಟ್ ಕೈಕೊಟ್ಟಿತ್ತು.

ನೋಡಿರಿ

