PAK ವಿರುದ್ಧ ಸೂರ್ಯ ಠುಸ್ ಪಟಾಕಿ – 5 ಪಂದ್ಯ.. 64 ರನ್.. ಅಟ್ಟರ್ ಫ್ಲ್ಯಾಪ್!
ಏಷ್ಯಾಕಪ್ ನಲ್ಲಿ ಸೇಡು ತೀರಿಸಿಕೊಳ್ತಾರಾ?

ಏಷ್ಯಾಕಪ್ ಟೂರ್ನಿಯಲ್ಲಿ ಯುಎಇ ವಿರುದ್ಧ ಭರ್ಜರಿ ಗೆಲುವು ಸಾಧಿಸಿರೋ ಟೀಂ ಇಂಡಿಯಾ ಸೆಪ್ಟೆಂಬರ್ 14ರಂದು ಪಾಕಿಸ್ತಾನ ವಿರುದ್ಧ ಫೈಟ್ ನಡೆಸಲಿದೆ. ಪಾಕ್ ವಿರುದ್ಧದ ಪಂದ್ಯ ಅಂದ್ರೆ ಭಾರತದ ಆಟಗಾರರು ಕಂಪ್ಲೀಟ್ ಡಾಮಿನೇಷನ್ ಮೋಡ್ನಲ್ಲೇ ಇರ್ತಾರೆ. ಬಟ್ ಟಿ-20ಐ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ಗೆ ಮಾತ್ರ ಇದುವರೆಗೆ ಶೈನ್ ಆಗೋಕೆ ಸಾಧ್ಯವಾಗಿಲ್ಲ.
ಇದನ್ನೂ ಓದಿ : ತಿರುಪತಿಗೆ ಭೇಟಿ ನೀಡಿದ ಕೇಂದ್ರ ಸಚಿವೆ – ಭಕ್ತರಿಗೆ ಊಟ ಬಡಿಸಿದ ನಿರ್ಮಲಾ ಸೀತಾರಾಮನ್!
ಪಾಕ್ ವಿರುದ್ಧದ ಪಂದ್ಯಗಳಲ್ಲಿ ಸೂರ್ಯನಿಗೆ ಸಿಕ್ಕಿಲ್ಲ ಸಕ್ಸಸ್!
ಪಾಕಿಸ್ತಾನದ ವಿರುದ್ಧ ಮ್ಯಾಚ್ ಆಡ್ಬೇಕು, ಗೆಲ್ಬೇಕು, ವಿಶೇಷ ದಾಖಲೆಗಳನ್ನ ಸೃಷ್ಟಿಸಬೇಕು ಅನ್ನೋದು ಎಷ್ಟೋ ಭಾರತೀಯ ಕ್ರಿಕೆಟಿಗರ ಕನಸು. ಅದ್ರಲ್ಲೂ ತಂಡವನ್ನ ಲೀಡ್ ಮಾಡೋ ಕ್ಯಾಪ್ಟನ್ಗಳಿಗೆ ಪಂದ್ಯ ಗೆಲ್ಲೋದೇ ಒಂದು ಪ್ರತಿಷ್ಠೆ. ಇದೀಗ ಇದೇ ಸಿಚುಯೇಷನ್ನಲ್ಲಿ ಸೂರ್ಯಕುಮಾರ್ ಯಾದವ್ ಇದ್ದಾರೆ. ರೋಹಿತ್ ಶರ್ಮಾ ನಿವೃತ್ತಿಯಾದ ನಂತರ ಕಳೆದ ವರ್ಷ ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಿದ ರೀತಿ ನಿಜಕ್ಕೂ ಅದ್ಭುತ. ಯುವ ತಂಡದೊಂದಿಗೆ ತಂಡವನ್ನು ಸಮರ್ಥವಾಗಿ ಮುನ್ನಡೆಸೋದ್ರ ಜೊತೆಗೆ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡುತ್ತಲೇ ಬಂದಿದ್ದಾರೆ. ಹೀಗಿದ್ರೂ ಪಾಕಿಸ್ತಾನ ವಿರುದ್ಧದ ಪಂದ್ಯ ಅಂದ್ರೆ ಕಂಪ್ಲೀಟ್ ರಿವರ್ಸ್ ಗೇರ್ನಲ್ಲಿದೆ. ಟೋಟಲ್ ಮ್ಯಾಚ್ ಹಾಗೇ ಪಾಕ್ ವಿರುದ್ಧದ ಪರ್ಫಾಮೆನ್ಸ್ನ ಕಂಪೇರ್ ಮಾಡಿ ಹೇಳ್ತೇನೆ ನೋಡಿ.
ಸೂರ್ಯ ಟಿ-20ಐ ಪ್ರದರ್ಶನ!
ಮಾನದಂಡ ಒಟ್ಟಾರೆ ಪಾಕಿಸ್ತಾನ ವಿರುದ್ಧ
ಪಂದ್ಯಗಳು 84 5
ಓಡುತ್ತದೆ 2605 64
ಸರಾಸರಿ 38.30 12.80
ಸ್ಟ್ರೈಕ್ ರೇಟ್ 167.07 118.51
ಅರ್ಧಶತಕ 21 0
100 ಗಳು 4 0
ಈ ಮೇಲಿನ ಅಂಕಿ ಅಂಶಗಳನ್ನ ನೋಡಿದ್ರೇನೇ ಹೇಳಿಬಿಡಬೋದು ಸೂರ್ಯ ಪಾಕ್ ವಿರುದ್ಧ ಇನ್ನೂ ಪರಾಕ್ರಮ ತೋರಿಸಿಲ್ಲ ಅಂತಾ. ಸೂರ್ಯಕುಮಾರ್ ಮೂರು ಬಾರಿ ವಿಶ್ವಕಪ್‌ಗಳಲ್ಲಿ, ಉಳಿದ ಎರಡು ಏಷ್ಯಾ ಕಪ್‌ಗಳಲ್ಲಿ ಪಾಕ್ ತಂಡದ ವಿರುದ್ಧ ಬ್ಯಾಟ್ ಬೀಸಿದ್ದಾರೆ. ಆ ಐದು ಪಂದ್ಯಗಳಲ್ಲಿ ಮೂರು ದುಬೈನಲ್ಲಿ, ಉಳಿದ ಎರಡು ಪಂದ್ಯಗಳು ಕ್ರಮವಾಗಿ ಮೆಲ್ಬೋರ್ನ್ ಮತ್ತು ನ್ಯೂಯಾರ್ಕ್‌ನಲ್ಲಿ ನಡೆದಿದ್ವು.
ಸದ್ದು ಮಾಡದ ಸೂರ್ಯ!
ಪಂದ್ಯಾವಳಿ ರನ್ಸ್ ಬಾಲ್ ಸ್ಟ್ರೈಕ್ ರೇಟ್ ಔಟ್ ವಿಧಾನ ಬೌಲರ್ ಸ್ಥಳ
ಟಿ20 ವಿಶ್ವಕಪ್ (2021) 11 8 137.50 ಕ್ಯಾಚ್ ಹಸನ್ ಅಲಿ ದುಬೈ
ಏಷ್ಯಾ ಕಪ್ (2022) 18 18 100.00 ಬೌಲ್ಡ್ ನಸೀಮ್ ಷಾ ದುಬೈ
ಏಷ್ಯಾ ಕಪ್ (2022) 13 10 130.00 ಕ್ಯಾಚ್ ಮೊಹಮ್ಮದ್ ನವಾಜ್ ದುಬೈ
ಟಿ20 ವಿಶ್ವಕಪ್ (2022) 15 10 150.00 ಕ್ಯಾಚ್ ಹ್ಯಾರಿಸ್ ರೌಫ್ ಮೆಲ್ಬೋರ್ನ್
ಟಿ20 ವಿಶ್ವಕಪ್(2024) 7 8 87.50 ಕ್ಯಾಚ್ ಹ್ಯಾರಿಸ್ ರೌಫ್ ನ್ಯೂಯಾರ್ಕ್
ಈ ಐದು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ನಾಲ್ಕು ಸಲ ಕ್ಯಾಚ್ ಔಟ್ ಆಗಿದ್ದಾರೆ. ಒಂದು ಸಲ ಬೌಲ್ಡ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಟಿ-20 ವಿಶ್ವಕಪ್‌ನಲ್ಲಿ ಹಿಂದಿನ ಎರಡೂ ಸಂದರ್ಭದಲ್ಲೂ ಹ್ಯಾರಿಸ್ ರೌಫ್ ಬೌಲಿಂಗ್ನಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಈ ಬಾರಿಯ ಏಷ್ಯಾಕಪ್ ಟೂರ್ನಿಗೂ ಹ್ಯಾರಿಸ್ ರೌಫ್ ಪಾಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬಟ್ ಇಷ್ಟು ದಿನ ಸೂರ್ಯಕುಮಾರ್ ಪ್ಲೇಯರ್ ಆಗಿ ಕಣಕ್ಕಿಳೀತಿದ್ರು. ಬಟ್ ಈ ಸಲ ಕ್ಯಾಪ್ಟನ್ ಆಗಿದ್ದಾರೆ. ಹೀಗಾಗಿ ಹಿಂದಿನದ್ದೇ ಒಂದು ಲೆಕ್ಕ ಮುಂದಿನದ್ದು ಇನ್ನೊಂದು ಲೆಕ್ಕ ಎನ್ನುವಂತೆ ಬ್ಯಾಟ್ ಬೀಸಬೇಕು.

ನೋಡಿರಿ

