ಎರಡು ವರ್ಷಗಳ ನಂತರ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ – ತಂಡಕ್ಕೆ ಆಸರೆಯಾದ ಇಶಾನ್‌ಗೆ ಸೂರ್ಯನ ಭಾವನಾತ್ಮಕ ಅಪ್ಪುಗೆ
ನಾಯಕ ಅಂದರೆ ಹೀಗಿರಬೇಕು ಎಂದು ಸೂರ್ಯನ ಹೊಗಳಿದ ಫ್ಯಾನ್ಸ್

ಎರಡು ವರ್ಷಗಳ ನಂತರ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ – ತಂಡಕ್ಕೆ ಆಸರೆಯಾದ ಇಶಾನ್‌ಗೆ ಸೂರ್ಯನ ಭಾವನಾತ್ಮಕ ಅಪ್ಪುಗೆನಾಯಕ ಅಂದರೆ ಹೀಗಿರಬೇಕು ಎಂದು ಸೂರ್ಯನ ಹೊಗಳಿದ ಫ್ಯಾನ್ಸ್

ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಜೊತೆಗೆ ಇಶಾನ್ ಕಿಶನ್ ಆಟಕ್ಕೆ ಫ್ಯಾನ್ಸ್ ಜೈ ಹೋ ಅಂತಿದ್ದಾರೆ. ಜೊತೆಗೆ ಎರಡು ವರ್ಷಗಳ ನಂತರ ಬ್ಯಾಟ್ ಬೀಸಿದ ಇಶಾನ್ ಕಿಶನ್ ಆಟಕ್ಕೆ ಇಡೀ ತಂಡವೇ ಶಹಬ್ಬಾಸ್ ಹೇಳಿದೆ. ಇನ್ನು ಮೈದಾನದಲ್ಲೇ ಸೂರ್ಯಕುಮಾರ್ ಇಶಾನ್ ಕಿಶನ್ ಅವರನ್ನ ತಬ್ಬಿಕೊಂಡಿರುವ ದೃಶ್ಯ ನೋಡಿ ಫ್ಯಾನ್ಸ್ ನಾಯಕನೆಂದರೆ ಹೀಗಿರಬೇಕು ಅಂತಾ ಹೇಳುತ್ತಿದ್ದಾರೆ.

ಇದನ್ನೂ ಓದಿ:RCBಗೆ ಡೆಡ್ ಲೈನ್ ಕೊಟ್ಟ BCCI – ಚಿನ್ನಸ್ವಾಮಿ ಪಂದ್ಯಗಳಿಗೂ ಕಂಡೀಷನ್ಸ್!

ಕಿವೀಸ್ ಕಿವಿ ಹಿಂಡಿರುವ ಆಟಗಾರರೆಂದರೆ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಜೋಡಿ. ನ್ಯೂಜಿಲೆಂಡ್ ಕೊಟ್ಟ 208 ರನ್‌ಗಳ ಗುರಿ ಬೆನ್ನಟ್ಟಿದ್ದ ಟೀಮ್ ಇಂಡಿಯಾಕ್ಕೆ ಆರಂಭದಲ್ಲಿ ಶಾಕ್ ಎದುರಾಗಿತ್ತು. ಅಭಿಶೇಕ್ ಶರ್ಮಾ ಗೋಲ್ಡನ್ ಡಕ್ ಔಟ್ ಆದರೆ, ಸಂಜು ಸ್ಯಾಮ್ಸನ್ ಕೂಡಾ ಕೇವಲ 6 ರನ್‌ಗೆ ಔಟಾದರು. ಆಗಲೇ ಶುರುವಾಗಿದ್ದು ಭಾರತದ ಬೆಂಕಿ ಬಿರುಗಾಳಿ ಬ್ಯಾಟಿಂಗ್. ನ್ಯೂಜಿಲೆಂಡ್‌ನ ಬೌಲರ್‌ಗಳಿಗೆ ಅದೆಂಥಾ ಪಾಠ ಕಲಿಸಿದರು ಅಂದರೆ, ನಮ್ಮ ಟೀಮ್ ಇಂಡಿಯಾ ಫ್ಯಾನ್ಸ್ ಸಿಕ್ಕಾಪಟ್ಟೆ ಎಂಜಾಯ್ ಮಾಡಿದರು. 2 ವರ್ಷಗಳ ನಂತರ ಇಶಾನ್ ಕಿಶನ್‌ಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶ ಬಳಸಿಕೊಂಡ ಅವರು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಅಲ್ಲದೇ, ಭಾರತ-ನ್ಯೂಜಿಲೆಂಡ್ ಸರಣಿಯ ಎರಡನೇ ಪಂದ್ಯ ಇಶಾನ್ ಕಿಶನ್ ಅವರಿಗೆ ವಿಶೇಷವಾಗಿತ್ತು. ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತವನ್ನು ಬಲಿಷ್ಠ ಸ್ಥಿತಿಗೆ ತಂದರು. ಅವರು ಕೇವಲ 32 ಎಸೆತಗಳಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಒಳಗೊಂಡಂತೆ 76 ರನ್ ಗಳಿಸಿದರು. ಇಶಾನ್ ಈ ಆಟಕ್ಕೆ ಟೀಮ್  ಇಂಡಿಯಾಕ್ಕೆ ಬೇಕಿತ್ತು. ಸೂರ್ಯಕುಮಾರ್ ಫಾರ್ಮ್‌ಗೆ ಮರಳುತ್ತಿದ್ದರು. ತಿಲಕ್ ವರ್ಮಾ ಕೂಡ ಇರಲಿಲ್ಲ. ಆದ್ದರಿಂದ, ತಂಡದ ಇನ್ನಿಂಗ್ಸ್ ಅನ್ನು ಯಾರು ಉಳಿಸುತ್ತಾರೆ ಎಂಬ ಪ್ರಶ್ನೆ ಇದ್ದಾಗ, ಇಶಾನ್ ಕಿಶನ್ ಮುಂದೆ ಬಂದು ಆಸರೆಯಾದರು. ಇಶಾನ್ ಕಿಶನ್ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರವೂ ಅವರು ಬ್ಯಾಟ್ ಬಿರುಗಾಳಿ ಎಬ್ಬಿಸಿತ್ತು. ಇಶಾನ್ ಕಿಶನ್ ಅವರ ಸ್ಟ್ರೈಕ್ ಸೂರ್ಯಕುಮಾರ್ ಯಾದವ್ ಅವರಿಗೆ ಸಮಯ ತೆಗೆದುಕೊಂಡು ತಮ್ಮ ಇನ್ನಿಂಗ್ಸ್ ಅನ್ನು ಕಾರ್ಯಗತಗೊಳಿಸಲು ಅವಕಾಶ ಮಾಡಿಕೊಟ್ಟಿತು. ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ 48 ಎಸೆತಗಳಲ್ಲಿ 122 ರನ್‌ಗಳ ಜೊತೆಯಾಟ ಆಡಿದರು. ಇಶಾನ್ ಕಿಶನ್ ತಮ್ಮ ಇನ್ನಿಂಗ್ಸ್‌ನಲ್ಲಿ 10ನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದರು. ಚೆಂಡು ಗಾಳಿಯಲ್ಲಿ ಎತ್ತರಕ್ಕೆ ಹೋಗುವಾಗ ಕ್ಯಾಚ್ ಔಟಾದರು. ಇಶಾನ್ ಕಿಶನ್ ಔಟ್ ಆದ ನಂತರ, ಸೂರ್ಯಕುಮಾರ್ ಯಾದವ್ ಅವರ ಬಳಿಗೆ ಹೋಗಿ ಅವರನ್ನು ಅಭಿನಂದಿಸಿದರು. ಮೈದಾನದಲ್ಲಿ ಇಶಾನ್ ಕಿಶನ್ ಅವರಿಗೆ ಸೂರ್ಯ ಭಾವನಾತ್ಮಕ ಅಪ್ಪುಗೆಯನ್ನು ನೀಡಿದರು. ನಾಯಕನಾಗಿ ಸೂರ್ಯಕುಮಾರ್ ಅವರ ಈ ಒಂದು ಎಲ್ಲರ ಹೃದಯ ಗೆದ್ದಿತ್ತು. ಸೂರ್ಯಕುಮಾರ್ ಯಾದವ್ ನಾಯಕ ಮತ್ತು ಆಟಗಾರನಾಗಿ ಇಶಾನ್ ಕಿಶನ್ ಅವರ ಆಟವನ್ನು ಹೊಗಳಿದಂತೆಯೇ, ಎಲ್ಲರೂ ಸೂರ್ಯ ಅವರನ್ನು ಹೊಗಳುತ್ತಿದ್ದಾರೆ. ಸೂರ್ಯನ ಜೊತೆಗೆ, ಎಲ್ಲಾ ಆಟಗಾರರು ಅವರನ್ನು ಅಭಿನಂದಿಸಿದರು. ಅಲ್ಲದೇ, ಇಶಾನ್ ಕಿಶನ್ ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಭಾರತ ತಂಡದ ಇತರ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿದರು.

Sulekha