ಮರೆಯಾದ ‘ಸೂರ್ಯಪುತ್ರ’ – ಊರಿನ ಮಗನಿಗೆ ಕಣ್ಣೀರ ವಿದಾಯ..!

ಮರೆಯಾದ ‘ಸೂರ್ಯಪುತ್ರ’ – ಊರಿನ ಮಗನಿಗೆ ಕಣ್ಣೀರ ವಿದಾಯ..!

ಬುಧವಾರ ಬೆಳಗ್ಗೆಯಿಂದ ರಾಜ್ಯದ ಜನತೆ ಮತದಾನ ಮಾಡುವ ಉತ್ಸಾಹದಲ್ಲಿದ್ದರು. ಆದರೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಾರನಬೀಡ ಗ್ರಾಮದಲ್ಲಿ ಮಾತ್ರ ಪ್ರತಿಯೊಬ್ಬರ ಕಣ್ಣಲ್ಲೂ ಕಂಬನಿ ಹರಿಯುತಿತ್ತು. ಊರವರ ಪ್ರೀತಿಯ ಕಣ್ಮಣಿ, ಎಲ್ಲರ ಅಚ್ಚುಮೆಚ್ಚಿನ ಹೋರಿ ಸೂರ್ಯಪುತ್ರ ಎಲ್ಲರನ್ನೂ ಅಗಲಿದ್ದ. ಗ್ರಾಮದಲ್ಲಿ ಸೂರ್ಯಪುತ್ರ ರಾಜನಂತೆ ಮೆರೆಯುತ್ತಿದ್ದನು. ಗ್ರಾಮಸ್ಥರೆಲ್ಲರಿಗೂ ಸೂರ್ಯಪುತ್ರ ಅಂದರೆ ಪ್ರಾಣ. ಸೂರ್ಯಪುತ್ರನ ಹಠಾತ್ ಸಾವಿನಿಂದ ಗ್ರಾಮಸ್ಥರು ಕಂಗಾಲಾಗಿದ್ದರು. ಯಾರೂ ಕೂಡಾ ಮತದಾನ ಮಾಡಲು ಹೋಗದೇ ಕಣ್ಣೀರಿನಲ್ಲಿ ಮುಳುಗಿದ್ದರು.

ಇದನ್ನೂ ಓದಿ:  ಮತದಾನಕ್ಕೆ ಬಂದಿದ್ದ ಮಹಿಳೆ, ವೃದ್ಧ ಸಾವು – ಪ್ರತ್ಯೇಕ ಮತ ಕೇಂದ್ರದಲ್ಲಿ ಘಟನೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಮಾರನಬೀಡ ಗ್ರಾಮದ ರೈತರೊಬ್ಬರ ಮನೆಯ ಪ್ರೀತಿಯಿಂದ ಸಾಕಿದ್ದ ಹೋರಿಯೇ ಈ ಸೂರ್ಯಪುತ್ರ. ಇಡೀ ಗ್ರಾಮಕ್ಕೆ ಹೆಮ್ಮಯಂತಿದ್ದ ನೆಚ್ಚಿನ ಹೋರಿ ಹಠಾತ್ ನಿಧನಕ್ಕೆ ನೊಂದ ಗ್ರಾಮಸ್ಥರು, ಹೋರಿಯನ್ನು ಕೊನೆಯದಾಗಿ ನೋಡಲು ಮುಗಿಬೀಳುತ್ತಿದ್ದಾರೆ. ನೂರಾರು ಅಭಿಮಾನಿಗಳು ಹಾಗೂ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಅಪ್ಪಟ ಅಭಿಮಾನಿಗಳ ಆಕ್ರಂದನವಂತೂ ಮುಗಿಲು ಮುಟ್ಟಿದೆ. ಹೋರಿಯನ್ನು ಅಪ್ಪಿಕೊಂಡು ಕಣ್ಣೀರು ಸುರಿಸುತ್ತಿದ್ದಾರೆ. ಹೋರಿ ಬೆದರಿರುವ ಸ್ಪರ್ಧೆಗಳಲ್ಲಿ ಭಾಗಿಯಾಗಿ ಬಹುಮಾನ ಪಡೆದಿದ್ದ ಸೂರ್ಯಪುತ್ರ, ಗ್ರಾಮಕ್ಕೆ ಹಿರಿಮೆಯನ್ನು ತಂದಿತ್ತು. ಹೀಗಾಗಿ ಸೂರ್ಯಪುತ್ರನ ಶವವನ್ನು ಅಂತಿಮದರ್ಶನಕ್ಕಾಗಿ ಇಡಲಾಯಿತು. ಗ್ರಾಮದಲ್ಲಿ ಇಂಥಾ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಗೊತ್ತಾದ ಮೇಲೆ ಹಿರಿಯರೊಬ್ಬರು ಬಂದು ಗ್ರಾಮಸ್ಥರ ಬಳಿ ಬಂದು ಮಾತನಾಡಿದರು. ನಂತರ ಗ್ರಾಮಸ್ಥರು ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಿದರು.

suddiyaana