ಜರ್ಮನಿಯಲ್ಲಿ ಸೂರ್ಯ ಆಪರೇಷನ್ – T20 ಕ್ಯಾಪ್ಟನ್ಸಿ ಕೈ ತಪ್ಪಿ ಹೋಗುತ್ತಾ?
ಬ್ಯಾಟ್ ಹಿಡಿಯಲು SKYಗೆ ಕಷ್ಟನಾ?

ಜರ್ಮನಿಯಲ್ಲಿ ಸೂರ್ಯ ಆಪರೇಷನ್ –  T20 ಕ್ಯಾಪ್ಟನ್ಸಿ ಕೈ ತಪ್ಪಿ ಹೋಗುತ್ತಾ?ಬ್ಯಾಟ್ ಹಿಡಿಯಲು SKYಗೆ ಕಷ್ಟನಾ?

ಯಾದವ್‌ ಹರ್ನಿಯಾ ಆಪರೇಷನ್ ಸಕ್ಸಸ್   

ಸೂರ್ಯಕುಮಾರ್ ಯಾದವ್ ಹರ್ನಿಯಾ ಶಸ್ತ್ರಚಿಕಿತ್ಸೆಗಾಗಿ ಲಂಡನ್‌ಗೆ ಹೋಗಿದ್ದಾರೆ. ಈಗ ಸೂರ್ಯಕುಮಾರ್ ಅವರ ಹರ್ನಿಯಾ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ.  ಸೂರ್ಯಕುಮಾರ್ ಕ್ರೀಡಾ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ಸುಮಾರು ಇದರಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಒಂದೆಡೆ, ಟೀಮ್ ಇಂಡಿಯಾ 5 ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿದೆ. ಮತ್ತೊಂದೆಡೆ, ಭಾರತೀಯ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಈ ದಿನಗಳಲ್ಲಿ ಇಂಗ್ಲೆಂಡ್‌ನಲ್ಲಿದ್ದಾರೆ.  ಅವರು ಕ್ರೀಡಾ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ವೈದ್ಯರಿಗೆ , ಸಿಬ್ಬಂದಿಗೆ ಧನ್ಯವಾದ ತಿಳಿಸಿದ ಯಾದವ್

ಸೂರ್ಯಕುಮಾರ್ ಯಾದವ್‌ ಅವರೇ ಸ್ವತಃ ಈ ಮಾಹಿತಿಯನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ, ಸೂರ್ಯಕುಮಾರ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ಹಾಯ್‌. ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾದೆ. ಇದನ್ನು ಯಶಸ್ವಿಗೊಳಿಸಿದ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬಂದಿಗೆ ಧನ್ಯವಾದಗಳು. ಸಾಧ್ಯವಾದಷ್ಟು ಬೇಗ ತಂಡವನ್ನು ಕೂಡಿಕೊಳ್ಳುವ ವಿಶ್ವಾಸ ನನ್ನದು ಎಂದು ಹೇಳಿಕೊಂಡಿದ್ದಾರೆ. ವಾಸ್ತವವಾಗಿ, ಕ್ರೀಡಾ ಹರ್ನಿಯಾ ನಂತರ, ಆಟಗಾರನಿಗೆ ಕೆಳ ಬೆನ್ನು ಮತ್ತು ಹೊಟ್ಟೆಯಲ್ಲಿ ನೋವು ಇರುತ್ತಂತೆ.. ಕಂಟಿನ್ಯೂ ಆಗಿ ಆಡ್ತಾ ಹೋದಾಗ  ಕ್ರೀಡಾಪಟುಗಳು ಈ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಾರೆ. ಓಡುವಾಗ ಕಾಲಿನಿಂದ ತಿರುಗುವುದು ಅಥವಾ ಒದೆಯುವಂತಹ ಹಠಾತ್ ಕ್ರಿಯೆಗಳಿಂದ ಕ್ರೀಡಾ ಹರ್ನಿಯಾ ಸಮಸ್ಯೆ ಉಂಟಾಗುತ್ತದೆ ಸೂರ್ಯಕುಮಾರ್ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

ಬಾಂಗ್ಲಾ ಪ್ರವಾಸಕ್ಕೆ ಕೈ ಕೊಡ್ತಾರಾ ಸೂರ್ಯ  

ಟಿ20 ತಂಡಕ್ಕೆ ಸೂರ್ಯ ಮುಖ್ಯ ಸೂರ್ಯಕುಮಾರ್ ಯಾದವ್ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರ.  ನಾಯಕನಾಗಿ ಚೆನ್ನಾಗಿ ತಂಡವನ್ನ ಮುನ್ನಡಿಸಿದ್ದು, ಟಿ20 ಕ್ರಿಕೆಟ್‌ನಲ್ಲಿ ಹಲವು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.  ಸದ್ಯ ಈಗ ಭಾರತ ಮತ್ತು ಇಂಗ್ಲೆಂಡ್ ನಡುವೆ 5-ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದೆ. ಇದರ ನಂತರ ತಂಡವು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಬಾಂಗ್ಲಾದೇಶದಲ್ಲಿ ಏಕದಿನ ಮತ್ತು ಟಿ20 ಸರಣಿಗಳು ನಡೆಯಲಿವೆ.ಆದ್ರೆ ಸೂರ್ಯಕುಮಾರ್ ಯಾದವ್ ಈ ಪ್ರವಾಸಕ್ಕೆ ಹೋಗುವ ಸಾಧ್ಯತೆ ಕಡಿಮೆ. ಕ್ರೀಡಾ ಹರ್ನಿಯಾ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳಲು 6 ರಿಂದ 12 ವಾರಗಳು ಬೇಕಾಗುತ್ತದೆ. ಆದ್ದರಿಂದ ಅವರು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ಟಿ20 ದೊಡ್ಡ ಟೂರ್ನಿ ನಡೆಯಲಿದೆ. ಟಿ20 ವಿಶ್ವಕಪ್ 2026 ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಒಟ್ಟು 20 ತಂಡಗಳು ಇದರಲ್ಲಿ ಆಡಲಿವೆ. ಸೂರ್ಯಕುಮಾರ್ ಯಾದವ್ ಈ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಸೂರ್ಯ ಕುಮಾರ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು,  ಸಾಧ್ಯವಾದಷ್ಟು ಬೇಗ ಟೀಮ್‌ ಇಂಡಿಯಾಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

Kishor KV