IND Vs BAN.. ಸೂರ್ಯ ಆಡಲ್ವಾ? – ಟಿ-20 ಸ್ಪೆಷಲಿಸ್ಟ್ ಟೆಸ್ಟ್ ನಲ್ಲಿ ಫೇಲ್
SKY ದುಲೀಫ್ ಟ್ರೋಫಿ ಆಡ್ತಿಲ್ಲ ಯಾಕೆ?
ಶ್ರೀಲಂಕಾ ಪ್ರವಾಸದ ನಂತರ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಮೂಲಕ ಟೀಮ್ ಇಂಡಿಯಾ ಆಟಗಾರರು ಮತ್ತೆ ಅಖಾಡಕ್ಕೆ ಇಳಿಯಲಿದ್ದಾರೆ. ಈ ಸರಣಿಗೂ ಮುನ್ನ ಸೆಪ್ಟೆಂಬರ್ 5 ರಿಂದ ದುಲೀಪ್ ಟ್ರೋಫಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಅನುಭವಿ ಮತ್ತು ಯುವ ಆಟಗಾರರು ಆಡಲಿದ್ದು ಭಾರೀ ಕುತೂಹಲ ಮೂಡಿಸಿದೆ. ಬಟ್ ಇದೇ ಟೂರ್ನಿ ಮೂಲಕ ಟೀಂ ಇಂಡಿಯಾದ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದುಕೊಳ್ಳೋ ನಿರೀಕ್ಷೆಯಲ್ಲಿದ್ದ ಸ್ಟಾರ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಗೆ ಬಿಗ್ ಶಾಕ್ ಎದುರಾಗಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಇಂದೇ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ!
ಸೂರ್ಯಕುಮಾರ್ ಯಾದವ್ ವಿಶ್ವ ಕ್ರಿಕೆಟ್‌ನ ಮೋಸ್ಟ್ ಡೇಂಜರಸ್ ಬ್ಯಾಟ್ಸ್ಮನ್. ಎಂತಹ ಬೌಲರ್ಗಳೇ ಆಗಿದ್ರೂ ಅವರನ್ನು ಈಸಿಯಾಗಿ ದಂಡಿಸುವ ತಾಕತ್ತಿರೋ ಹಿಟ್ ಬ್ಯಾಟರ್. ಚ್ಯುಯಿಂಗ್ ಗಮ್ ಜಗಿಯುತ್ತಾ ಅಷ್ಟೇ ಈಸಿಯಾಗಿ ಬ್ಯಾಟ್ ಬೀಸುವ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಸೂರ್ಯ ಬ್ಯಾಟಿಂಗ್ ನೋಡೋದೇ ಚೆಂದ. ಇಂಥ ನಿರ್ಭೀತಿ ಬ್ಯಾಟ್ಸ್ಮನ್ ಬಗ್ಗೆ ಶಾಕಿಂಗ್ ನ್ಯೂಸ್ವೊಂದು ಹೊರ ಬಿದ್ದಿದೆ. ಗಂಭೀರ ಗಾಯದ ಸಮಸ್ಯೆಯಿಂದ ಬಳಲ್ತಿರೋ ಸೂರ್ಯ ದುಲೀಪ್ ಟ್ರೋಫಿಯ ಮೊದಲ ಸುತ್ತಿನಲ್ಲಿ ಆಡುವುದಿಲ್ಲ. ಸೂರ್ಯ ಬರೀ ದುಲೀಪ್ ಟ್ರೋಫಿಯ ಫಸ್ಟ್ ರೌಂಡ್ನಿಂದ ಮಾತ್ರ ಹೊರ ಬೀಳ್ತಿಲ್ಲ. ಭಾರತದ ಪರ ಟೆಸ್ಟ್ ತಂಡದಲ್ಲಿ ಆಡ್ಬೇಕು ಅನ್ಕೊಂಡಿದ್ದ ಆಸೆಗೂ ಪೆಟ್ಟು ಬಿದ್ದಿದೆ.
ಸೂರ್ಯನಿಗೆ ಶಾಕ್!
ಭಾರತೀಯ ಕ್ರಿಕೆಟ್‌ನ 2024-25ರ ದೇಶೀಯ ಟೂರ್ನಿಯು ಸೆಪ್ಟೆಂಬರ್ 5 ರಂದು ದುಲೀಪ್ ಟ್ರೋಫಿಯೊಂದಿಗೆ ಪ್ರಾರಂಭವಾಗಲಿದೆ. ಟೀಮ್ ಇಂಡಿಯಾದ ಹಲವು ಸ್ಟಾರ್ ಆಟಗಾರರು ದುಲೀಪ್ ಟ್ರೋಫಿಯ ಮೊದಲ ಸುತ್ತಿನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಟೂರ್ನಿಯಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯೋದು ಹಲವರ ಟಾರ್ಗೆಟ್. ಇದರಲ್ಲಿ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಹೆಸರೂ ಸೇರಿದೆ. ಆದರೆ, ದುಲೀಪ್ ಟ್ರೋಫಿಗೂ ಮುನ್ನ ಸೂರ್ಯಕುಮಾರ್ ಯಾದವ್ ಅದೃಷ್ಟ ಕೈಕೊಟ್ಟಿದೆ. ಟೆಸ್ಟ್ ತಂಡಕ್ಕೆ ಪುನರಾಗಮನ ಮಾಡುವ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ಗಾಯದ ಸಮಸ್ಯೆಯಿಂದಾಗಿ ಸೂರ್ಯಕುಮಾರ್ ಯಾದವ್ ದುಲೀಪ್ ಟ್ರೋಫಿಯ ಪ್ರಾಥಮಿಕ ಸುತ್ತಿನಿಂದ ಹೊರಗುಳಿದಿದ್ದಾರೆ. ಕಳೆದ ವಾರ ಕೊಯಮತ್ತೂರಿನಲ್ಲಿ ನಡೆದ ಬುಚ್ಚಿ ಬಾಬು ಪಂದ್ಯಾವಳಿಯಲ್ಲಿ ಮುಂಬೈಗಾಗಿ ಪೂರ್ವ-ಋತುವಿನ ಪಂದ್ಯದ ವೇಳೆ ಅವರು ಕೈಗೆ ಗಾಯ ಮಾಡಿಕೊಂಡಿದ್ರು. ಹೀಗಾಗಿ ಕೊನೆ ದಿನ ಬ್ಯಾಟಿಂಗ್ ಮಾಡಿರಲಿಲ್ಲ. ಮುಂಬೈ ಮತ್ತು ಟಿಎನ್‌ಸಿಎ ಇಲೆವೆನ್ ನಡುವೆ ನಡೆದ ಪಂದ್ಯದ ಮೂರನೇ ದಿನ ಫೀಲ್ಡಿಂಗ್ ಮಾಡುವಾಗ ಸೂರ್ಯಕುಮಾರ್ ಕೈಗೆ ಗಾಯ ಮಾಡಿಕೊಂಡರು. ಇದಾದ ನಂತರ ಅವರು ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್ ಮಾಡಲಿಲ್ಲ. ಗಾಯದಿಂದ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಸೂರ್ಯಕುಮಾರ್ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಮತ್ತು ಅವರು ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಿಯಮಿತ ತಪಾಸಣೆಗಾಗಿ ತೆರಳಿದ್ದಾರೆ. ಸೂರ್ಯಕುಮಾರ್ ಇತ್ತೀಚೆಗಷ್ಟೆ ಭಾರತ ಟೆಸ್ಟ್ ತಂಡಕ್ಕೆ ಮರಳುವ ಆಸೆಯನ್ನ ಹೇಳಿಕೊಂಡಿದ್ದರು. ನನಗೆ ಟೆಸ್ಟ್ ಕ್ರಿಕೆಟ್ನಲ್ಲಿ ಆಡಬೇಕು ಎಂಬ ದೊಡ್ಡ ಆಸೆಯಿದೆ ಎಂದಿದ್ದರು. ಇದೇ ಕಾರಣಕ್ಕೆ ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ರು. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ಗೆ ಆಯ್ಕೆ ಆಗುವ ಕನಸು ಕಂಡಿದ್ದ ಸೂರ್ಯನಿಗೆ ಗಾಯದ ಸಮಸ್ಯೆ ಆಘಾತ ನೀಡಿದೆ. ದುಲೀಪ್ ಟ್ರೋಫಿಯು ಮುಂದಿನ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ಲೇಯರ್ಸ್ ಆಯ್ಕೆ ಆಗಲು ಇದು ಅತ್ಯಂತ ಮುಖ್ಯವಾದ ಟೂರ್ನಿಯಾಗಿದೆ. ಸದ್ಯ ಗಾಯಗೊಂಡಿರುವ ಸೂರ್ಯಕುಮಾರ್ಗೆ ಇದು ಎಫೆಕ್ಟ್ ಆಗಬಹುದು.
ಗೌತಮ್ ಗಂಭೀರ್ ಟೀಂ ಇಂಡಿಯಾ ಮುಖ್ಯಕೋಚ್ ಆದ ಬಳಿಕ ಸೂರ್ಯಕುಮಾರ್ ಯಾದವ್ಗೆ ಟಿ-20 ಫಾರ್ಮೆಟ್ ನಾಯಕತ್ವ ನೀಡಲಾಗಿದೆ. ಟಿ-20ಯಲ್ಲಿ ಅಷ್ಟೆಲ್ಲಾ ಹೊಡಿಬಡಿ ಆಟವಾಡುವ ಸೂರ್ಯ ಇದುವರೆಗೆ ಟೆಸ್ಟ್ನಲ್ಲಿ ಕೇವಲ 1 ಪಂದ್ಯ ಆಡುವ ಅವಕಾಶ ಸಿಕ್ಕಿದೆಯಷ್ಟೆ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಈ ಪಂದ್ಯವನ್ನು ಆಡಿದ್ದರು. ಆದ್ರೆ ಆ ಪಂದ್ಯದಲ್ಲಿ ಕೇವಲ 8 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದಾದ ಬಳಿಕ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಹೀಗಾಗಿ ಮತ್ತೆ ಟೀಮ್ಗೆ ಕಮ್ಬ್ಯಾಕ್ ಮಾಡೋ ಚಿಂತನೆಯಲ್ಲಿದ್ರೂ ಕೂಡ ಗಾಯದ ಸಮಸ್ಯೆ ಶಾಕ್ ನೀಡಿದೆ.