ಮುಂಬೈ ಕ್ಯಾಪ್ಟನ್ಸಿ ಒಪ್ಪದ ರೋಹಿತ್ ಶರ್ಮಾ – ಪಾಂಡ್ಯನಿಲ್ಲದ ಮೊದಲ ಪಂದ್ಯಕ್ಕೆ ಸೂರ್ಯಕುಮಾರ್ ನಾಯಕ

ಮುಂಬೈ ಕ್ಯಾಪ್ಟನ್ಸಿ ಒಪ್ಪದ ರೋಹಿತ್ ಶರ್ಮಾ – ಪಾಂಡ್ಯನಿಲ್ಲದ ಮೊದಲ ಪಂದ್ಯಕ್ಕೆ ಸೂರ್ಯಕುಮಾರ್ ನಾಯಕ

ಐಪಿಎಲ್​​ನಲ್ಲಿ ಐದು ಬಾರಿ ಟ್ರೋಫಿ ಗೆದ್ದಿರೋ ಮುಂಬೈ ಇಂಡಿಯನ್ಸ್ ಟೀಮ್​ನಲ್ಲಿ ಘಟಾನುಘಟಿ ಆಟಗಾರರೇ ಇದ್ದಾರೆ. ಅದ್ರಲ್ಲೂ ಟೀಂ ಇಂಡಿಯಾದ ಕ್ಯಾಪ್ಟನ್ಸ್ ಮತ್ತು ವೈಸ್ ಕ್ಯಾಪ್ಟನ್ಸ್ ದಂಡೇ ಇದೆ. ಕಳೆದ ವರ್ಷ ರೋಹಿತ್ ಶರ್ಮಾರ ಕ್ಯಾಪ್ಟನ್ಸಿಯನ್ನ ಹಾರ್ದಿಕ್ ಪಾಂಡ್ಯಗೇ ನೀಡ್ಲಾಗಿತ್ತು. ಈ ಬದಲಾವಣೆ ಬಳಿಕ ತಂಡದಲ್ಲಿ ಒಗ್ಗಟ್ಟೇ ಮರೆಯಾಗಿತ್ತು. ರೋಹಿತ್ ಶರ್ಮಾ ಒಲ್ಲದ ಮನಸ್ಸಲ್ಲೇ ಆಟಗಾರನಾಗಿ ಕಣಕ್ಕಿಳಿದಿದ್ರು. ಅಂದಿನ ಆ ನೋವು ಹಿಟ್​ಮ್ಯಾನ್​ರನ್ನ ಇನ್ನೂ ಕಾಡ್ತಿದೆ. ಇದೇ ಕಾರಣಕ್ಕೆ ಈಗ ಕ್ಯಾಪ್ಟನ್ಸಿಯನ್ನೇ ಒಲ್ಲೆ ಎಂದಿದ್ದಾರೆ.

ಇದನ್ನೂ ಓದಿ : ₹869 ಕೋಟಿಗೆ ಸಿಕ್ಕಿದ್ದೇ ₹52 ಕೋಟಿ – ಪಾಕಿಸ್ತಾನಕ್ಕೆ ಶೇ.85% ನಷ್ಟ

ಮಾರ್ಚ್ 22ರಂದು ಅಂದ್ರೆ ಇದೇ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಫೈಟ್ ಮೂಲಕ ಐಪಿಎಲ್ 18ನೇ ಲೀಗ್ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ನಡೆದ ಮರುದಿನವೇ ಅಂದ್ರೆ ಭಾನುವಾರ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೈದಾನಕ್ಕಿಳಿಯಲಿವೆ. ಈ ಪಂದ್ಯಕ್ಕೆ ಮುಂಬೈ ತಂಡವನ್ನ ಸೂರ್ಯ ಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಯಾಕಂದ್ರೆ ಮೊದಲ ಪಂದ್ಯದಿಂದ ನಾಯಕ ಹಾರ್ದಿಕ್ ಪಾಂಡ್ಯಗೆ ನಿಷೇಧ ಹೇರಲಾಗಿದೆ. ಕಳೆದ ಸೀಸನ್​​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಿಗದಿತ ಸಮಯದೊಳಗೆ 20 ಓವರ್​ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂ. ದಂಡ ಹಾಗೂ ಒಂದು ಪಂದ್ಯದ ನಿಷೇಧ ಹೇರಲಾಗಿದೆ. ಅದ್ರಂತೆ ತಮ್ಮ ಮೊದಲ ಪಂದ್ಯದಿಂದ ನಾಯಕ ಹಾರ್ದಿಕ್ ಪಾಂಡ್ಯ ಹೊರಗುಳಿಯಬೇಕಾಗುತ್ತದೆ. ಪರಿಣಾಮ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ ಎಂದು ಪಾಂಡ್ಯ ತಿಳಿಸಿದ್ದಾರೆ. ಇನ್ನುಳಿದ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಅವರೇ ನಾಯಕರಾಗಿ ಮುಂದುವರೆಯಲಿದ್ದಾರೆ.

ಅಷ್ಟಕ್ಕೂ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಚೆನ್ನೈ ವಿರುದ್ಧದ ಪಂದ್ಯಕ್ಕೆ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ ಮಾಡೋದು ಫ್ರಾಂಚೈಸಿಯ ಪ್ಲ್ಯಾನ್ ಆಗಿತ್ತು. ಆದ್ರೆ ಇದಕ್ಕೆ ಹಿಟ್​ಮ್ಯಾನ್ ರೋಹಿತ್ ಶರ್ಮಾ ಒಪ್ಪಿಕೊಂಡಿಲ್ಲ. 2011ರಲ್ಲಿ ಮುಂಬೈ ಇಂಡಿಯನ್ಸ್ ಸೇರಿದ್ದ ರೋಹಿತ್ 2013ರಲ್ಲಿ ಕ್ಯಾಪ್ಟನ್ಸಿ ವಹಿಸಿಕೊಂಡಿದ್ರು. ನಾಯಕನಾಗಿ ತಮ್ಮ ಮೊದಲ ಸೀಸನ್​ನಲ್ಲೇ ಮುಂಬೈ ತಂಡಕ್ಕೆ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟಿದ್ರು. ಆ ಬಳಿಕ 11 ವರ್ಷಗಳ ಕಾಲ ಅಂದ್ರೆ 2024ರವರೆಗೆ ತಂಡವನ್ನ ಲೀಡ್ ಮಾಡಿದ್ರು. 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ರು.  ಮುಂಬೈ ತಂಡದ ಅತಿ ಹೆಚ್ಚು ಸ್ಕೋರರ್ ಮತ್ತು ಐಪಿಎಲ್‌ನಲ್ಲಿ 6000 ಕ್ಕೂ ಹೆಚ್ಚು ರನ್ ಗಳಿಸಿದ ಕೇವಲ ನಾಲ್ಕು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ರು. ಅದೆಲ್ಲಕ್ಕಿಂತ ಹೆಚ್ಚಾಗಿ ಟೀಂ ಇಂಡಿಯಾ ಕ್ಯಾಪ್ಟನ್. ಹೀಗಿದ್ರೂ ರೋಹಿತ್​ರನ್ನ ಕೆಳಗಿಸಿಳಿ ಪಾಂಡ್ಯಗೆ ನಾಯಕತ್ವ ಕಟ್ಟಿದ್ದು ರೋಹಿತ್​ಗೆ ದೊಡ್ಡ ನೋವುಂಟು ಮಾಡಿತ್ತು. ಹೀಗಿದ್ರೂ ಮುಂಬೈ ತಂಡದಲ್ಲೇ ಉಳಿದಿದ್ದಾರೆ. ಆದ್ರೆ ಹಾರ್ದಿಕ್ ಪಾಂಡ್ಯ ಇಲ್ಲದ ಒಂದು ಪಂದ್ಯದ ನಾಯಕತ್ವ ವಹಿಸಿಕೊಳ್ಳೋಕೆ ಆಗಲ್ಲ ಎಂದು ಸ್ಪಷ್ಟವಾ್ಗಿ ಹೇಳಿದ್ದಾರೆ. ಮತ್ತೊಂದೆಡೆ ಜಸ್ಪ್ರೀತ್ ಬುಮ್ರಾ ಕೂಡ ಇಂಜುರಿ ಕಾರಣಕ್ಕೆ ಆರಂಭಿಕ ಪಂದ್ಯಗಳಲ್ಲಿ ಕಣಕ್ಕಿಳಿಯೋದು ಡೌಟಿದೆ. ಪರಿಣಾಯ ಮುಂಬೈನ ಮೊದಲ ಪಂದ್ಯಕ್ಕೆ ಸೂರ್ಯ ಕುಮಾರ್ ಯಾದವ್ ರನ್ನ ನಾಯಕನಾಗಿ ನೇಮಿಸಲಾಗಿದೆ.

ಐಪಿಎಲ್​ನಲ್ಲಿ ಒಂದು ಫ್ರಾಂಚೈಸಿಗೆ ಐದೈದು ಟ್ರೋಫಿ ಗೆಲ್ಲಿಸಿಕೊಳ್ಳೋದು ಸಾಮಾನ್ಯದ ಸಂಗತಿಯಲ್ಲ. ಬಟ್ ಈ ಕೆಲಸವನ್ನ ರೋಹಿತ್ ಮಾಡಿದ್ರು. ಹೀಗಿದ್ರೂ ಮುಂಬೈ ಫ್ರಾಂಚೈಸಿ ಕೇರ್​ಲೆಸ್ ಮಾಡಿತ್ತು. ಆ ನಿರ್ಲಕ್ಷ್ಯದ ಪರಿಣಾಮ ಈಗ ಅನುಭವಿಸ್ತಿದೆ. ಮುಂಬೈ ಕ್ಯಾಪ್ಟನ್ಸಿಯಿಂದ ಕೆಳಗಿಳಿದ ಮೇಲೆ ರೋಹಿತ್ ಶರ್ಮಾ ಟೀಂ ಇಂಡಿಯಾಗೆ ಬ್ಯಾಕ್ ಟು ಬ್ಯಾಕ್ ಎರಡು ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಐಸಿಸಿ ಟ್ರೋಫಿಗಳನ್ನೇ ಗೆದ್ದಿರೋ ನಾಯಕ ಐಪಿಎಲ್ ನಾಯಕತ್ವವೇ ಬೇಡ ಎಂದು ತಾವೇ ತಿರಸ್ಕರಿಸಿದ್ದಾರೆ.

Shantha Kumari

Leave a Reply

Your email address will not be published. Required fields are marked *