ಆಸ್ಟ್ರೇಲಿಯಾ ವಿರುದ್ಧದ ಟಿ-20 ಪಂದ್ಯಕ್ಕೆ ಸೂರ್ಯಕುಮಾರ್ ಕ್ಯಾಪ್ಟನ್ – ಮಿಸ್ಟರ್ 360 ಆಯ್ಕೆ ಹಿಂದಿದೆ ಅಚ್ಚರಿಯ ಕಾರಣ
ವಿಶ್ವಕಪ್ ಬಳಿಕ ಈಗ ಟೀಂ ಇಂಡಿಯಾದ ಫೋಕಸ್ ಟಿ-20 ಕ್ರಿಕೆಟ್ನತ್ತ ಶಿಫ್ಟ್ ಆಗಿದೆ. ನವೆಂಬರ್ 23ರಿಂದ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಇದಕ್ಕಾಗಿ ಟೀಂ ಕೂಡ ಅನೌನ್ಸ್ ಆಗಿದೆ. ಟೀಂ ಇಂಡಿಯಾ ಹೊಸ ಕ್ಯಾಪ್ಟನ್ ಕೂಡ ಆಯ್ಕೆಯಾಗಿದ್ದಾರೆ. ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸೀರಿಸ್ನಲ್ಲಿ ತಂಡವನ್ನ ಲೀಡ್ ಮಾಡಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ-20 ಸೀರಿಸ್ಗೆ ಸೂರ್ಯಕುಮಾರ್ ಯಾದವ್ರನ್ನ ಕ್ಯಾಪ್ಟನ್ ಮಾಡಬಹುದು ಅಂತಾ ಯಾರೂ ಕೂಡ ಅಂದುಕೊಂಡಿರಲಿಲ್ಲ. ಯಾಕಂದ್ರೆ ವರ್ಲ್ಡ್ಕಪ್ನಲ್ಲಿ ಸೂರ್ಯಕುಮಾರ್ ಮಿಂಚಿನ ಪ್ರದರ್ಶನವನ್ನಂತೂ ನೀಡಿರಲಿಲ್ಲ. ಫೈನಲ್ ಮ್ಯಾಚ್ನಲ್ಲಿ ಸೂರ್ಯರಿಂದ ಹೆಚ್ಚಿನ ನಿರೀಕ್ಷೆ ಇತ್ತಾದ್ರೂ, ಅಲ್ಲೂ 360 ಡಿಗ್ರಿ ವರ್ಕೌಟ್ ಆಗಿಲ್ಲ. ಆದ್ರೆ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸೀರಿಸ್ಗೆ ಸೂರ್ಯ ಹೆಗಲಿಗೆ ತಂಡದ ಜವಾಬ್ದಾರಿ ನೀಡಲಾಗಿದೆ. ಸೂರ್ಯಕುಮಾರ್ರನ್ನೇ ಕ್ಯಾಪ್ಟನ್ ಮಾಡೋಕೆ ಮುಖ್ಯ ಕಾರಣ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯ. ಪಾಂಡ್ಯಾಗೆ ಇನ್ನು ಆರರಿಂದ ಎಂಟು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಪಾಂಡ್ಯಾಗೆ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸೀರಿಸ್ನಲ್ಲಿ ಆಡೋಕೆ ಸಾಧ್ಯವಾಗ್ತಿಲ್ಲ. ಇಲ್ಲವಾದಲ್ಲಿ ಪಾಂಡ್ಯಾ ಈ ಸೀರಿಸ್ಗೂ ಕ್ಯಾಪ್ಟನ್ ಆಗಿಯೇ ಇರ್ತಿದ್ರು. ನಿಮಗೆ ಗೊತ್ತಿರೋ ಹಾಗೆ, ಈ ಹಿಂದಿನ ಟಿ-20 ಸೀರಿಸ್ಗಳಲ್ಲೂ ಅವರೇ ತಂಡವನ್ನ ಮುನ್ನಡೆಸಿದ್ರು. ಇನ್ನು ಸೂರ್ಯಕುಮಾರ್ ಯಾದವ್ ಅಂತೂ ಟಿ-20 ಸ್ಪೆಷಲಿಸ್ಟ್ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಏಕದಿನ ಕ್ರಿಕೆಟ್ಗೆ, ವರ್ಲ್ಡ್ಕಪ್ ಟೂರ್ನಿಗೂ ಸೂರ್ಯ ಟೀಂಗೆ ಸೆಲೆಕ್ಟ್ ಆಗಿರೋದೆ ಟಿ-20 ಪರ್ಫಾಮೆನ್ಸ್ನ ಆಧಾರದ ಮೇಲೆಯೇ. ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಿದ್ದಾಗ, ಸೂರ್ಯಕುಮಾರ್ ಉಪನಾಯಕ ಆಗಿದ್ರು. ಆದ್ರೆ ಇದೇ ಮೊದಲ ಬಾರಿಗೆ ಸೂರ್ಯಗೆ ಟೀಂ ಲೀಡ್ ಮಾಡುವ ಅವಕಾಶ ಸಿಕ್ಕಿದೆ. ಮುಂದಿನ ವರ್ಷ ಟಿ-20 ವರ್ಲ್ಡ್ಕಪ್ ಬೇರೆ ನಡೀತಿದೆ. ಹೀಗಾಗಿ ಒಂದು ಸಾಲಿಡ್ ಟೀಂನ್ನ ರೆಡಿ ಮಾಡೋಕೆ ಈಗಿನಿಂದಲೇ ತಯಾರಿ ಕೂಡ ಶುರುವಾಗಿದೆ. ಯುವಕರ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಟೀಂ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.
ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್ – ಆಸೀಸ್ ಆಟಗಾರನ ಅತಿರೇಕದ ವರ್ತನೆಗೆ ಆಕ್ರೋಶ
ಸೂರ್ಯಕುಮಾರ್ ಯಾದವ್ಗೆ ಇಂಥದ್ದೊಂದು ಮಹತ್ವದ ಹೊಣೆಯನ್ನ ನೀಡುವ ಅಗತ್ಯ ಕೂಡ ಇತ್ತು. ಮಿಸ್ಟರ್ 360 ಮೋಸ್ಟ್ ಟ್ಯಾಲೆಂಟೆಡ್ ಕ್ರಿಕೆಟರ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಟಿ-20 ಫಾರ್ಮೆಟ್ನಲ್ಲಂತೂ ಸೂರ್ಯಗೆ ತಂಡವನ್ನು ಮುನ್ನಡೆಸುವ ತಾಕತ್ತು ಇದೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಒಳಗಿರೋ ಒಬ್ಬ ಲೀಡರ್ನ್ನ ಹೊರಗೆ ತರೋ ಕೆಲಸ ಮಾಡಲಾಗ್ತಿದೆ. ಸೂರ್ಯಗೆ ಕ್ಯಾಪ್ಟನ್ಸಿ ನೀಡೋಕೆ ಇನ್ನೊಂದು ಮುಖ್ಯ ಕಾರಣ ಕೂಡ ಇರಬಹುದು. ಕೆಲ ಆಟಗಾರರಿಗೆ ಹೆಚ್ಚಿನ ಜವಾಬ್ದಾರಿ ಕೊಟ್ಟಾಗ, ಆ ಪ್ಲೇಯರ್ಸ್ಗಳ ಪರ್ಫಾಮೆನ್ಸ್ನಲ್ಲೂ ಬದಲಾವಣೆಯಾಗುವ ಸಾಧ್ಯತೆ ಇರುತ್ತೆ. ಪಾಸಿಟಿವ್ ಮತ್ತು ನೆಗೆಟಿವ್ ಎರಡು ರೀತಿಯಲ್ಲಿ ಬೇಕಾದ್ರೂ ಕ್ಯಾಪ್ಟನ್ ಆದವನ ಮೇಲೆ ಎಫೆಕ್ಟ್ ಆಗಬಹುದು. ಕ್ಯಾಪ್ಟನ್ಸಿ ಜವಾಬ್ದಾರಿ ಸಿಕ್ಕಾಗ ಕೆಲವರ ಪರ್ಫಾಮೆನ್ಸ್ ಇನ್ನಷ್ಟು ಇಂಪ್ರೂವ್ ಆಗುವ ಸಾಧ್ಯತೆ ಇರುತ್ತೆ. ಇನ್ನೂ ಕೆಲವೊಮ್ಮೆ ಹೆಚ್ಚಿನ ಪ್ರೆಷರ್ನಿಂದಾಗಿ ಕ್ಯಾಪ್ಟನ್ನ ಪರ್ಫಾಮೆನ್ಸ್ ಕೂಡ ಡೌನ್ ಆಗುತ್ತೆ. ಹೀಗಾಗಿ ಸೂರ್ಯಕುಮಾರ್ರಂಥಾ ಪ್ಲೇಯರ್ಗೆ ಕ್ಯಾಪ್ಟನ್ಸಿ ಕೊಟ್ಟು ಇಲ್ಲೊಂದು ವೈಯಕ್ತಿಕ ಪ್ರಯೋಗ ಕೂಡ ನಡೀತಿದೆ. ಯಾಕಂದ್ರೆ ಭವಿಷ್ಯದಲ್ಲಿ ಸೂರ್ಯಕುಮಾರ್ನಂಥವರು ಟೀಂ ಇಂಡಿಯಾದ ಏಕದಿನ ಸ್ಕ್ವಾಡ್ನಲ್ಲಿ ಪರ್ಮನೆಂಟ್ ಪ್ಲೇಸ್ ಪಡೆಯಬೇಕಾದವರು. ರೋಹಿತ್ ಶರ್ಮಾ ಇನ್ನೆಷ್ಟು ಟೈಮ್ ಕ್ಯಾಪ್ಟನ್ ಆಗಿರ್ತಾರೊ ಗೊತ್ತಿಲ್ಲ. ಹೀಗಾಗಿ ಮುಂದಿನ ವರ್ಷಗಳಲ್ಲಿ ಹೊಸ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ಗಳನ್ನ ಸೆಲೆಕ್ಟ್ ಮಾಡಬೇಕಾಗುತ್ತೆ. ಈ ಎಲ್ಲಾ ಕಾರಣಗಳಿಂದ ಟೀಂನಲ್ಲಿರುವ ಒಂದಷ್ಟು ಎಕ್ಸ್ಪೀರಿಯನ್ಸ್ ಪ್ಲೇಯರ್ಗಳಿಗೆ ನಾಯಕತ್ವದಂಥ ಜವಾಬ್ದಾರಿಯನ್ನ ನೀಡಲಾಗ್ತಿದೆ. ಅದ್ರಲ್ಲೂ ಸೂರ್ಯಕುಮಾರ್ ಯಾದವ್ರನ್ನಂತೂ 2024ರ ಟಿ-20 ವರ್ಲ್ಡ್ಕಪ್ ದೃಷ್ಟಿಯಿಂದಲೇ ಕ್ಯಾಪ್ಟನ್ ಮಾಡಲಾಗಿದೆ. ಹಾರ್ದಿಕ್ ಪಾಂಡ್ಯಾ ನಾಯಕನಾದ್ರೆ, ಸೂರ್ಯಕುಮಾರ್ ವೈಸ್ಕ್ಯಾಪ್ಟನ್ ಆಗಿ ವರ್ಲ್ಡ್ಕಪ್ನಲ್ಲಿ ಟೀಂ ಲೀಡ್ ಮಾಡಿದ್ರೂ ಆಶ್ಚರ್ಯ ಇಲ್ಲ.
ಇನ್ನು ಆಸ್ಟ್ರೇಲಿಯಾ ವಿರುದ್ಧದ ಟಿ-20 ಸೀರಿಸ್ನಿಂದ ವರ್ಲ್ಡ್ಕಪ್ನಲ್ಲಿ ಆಡಿದ ಬಹುತೇಕ ಎಲ್ಲಾ ಪ್ಲೇಯರ್ಸ್ಗಳಿಗೂ ರೆಸ್ಟ್ ನೀಡಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್, ಕೆ.ಎಲ್ ರಾಹುಲ್, ರವೀಂದ್ರ ಜಡೇಜಾ, ಜಸ್ಪ್ರಿತ್ ಬುಮ್ರಾ ಇವರೆಲ್ಲರಿಗೂ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ-20 ಸೀರಿಸ್ಗೆ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಒಟ್ಟು 15 ಮಂದಿಯ ತಂಡವನ್ನು ಅನೌನ್ಸ್ ಮಾಡಲಾಗಿದೆ. ರುತುರಾಜ್ ಗಾಯಕ್ವಾಡ್ ಉಪನಾಯಕನಾಗಿ ಇರ್ತಾರೆ. ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಶಿವಮ್ ದುಬೆ, ರವಿ ಬಿಷ್ಣೋಯಿ, ಅರ್ಶ್ದೀಪ್ ಸಿಂಗ್, ಪ್ರಸಿಧ್ ಕೃಷ್ಣ, ಅವೇಶ್ ಖಾನ್, ಮುಕೇಶ್ ಕುಮಾರ್. ಆಸ್ಟ್ರೇಲಿಯಾ ವಿರುದ್ಧ 5 ಮ್ಯಾಚ್ಗಳ ಟಿ-20 ಸೀರಿಸ್ಗಾಗಿ ಈ 15 ಮಂದಿ ಯಂಗ್ಸ್ಟರ್ಸ್ಗಳನ್ನ ಸೆಲೆಕ್ಟ್ ಮಾಡಲಾಗಿದೆ.
ಆದ್ರೆ ಇಲ್ಲೊಂದು ಇಂಟ್ರೆಸ್ಟಿಂಗ್ ಡೆವಲಪ್ಮೆಂಟ್ ಕೂಡ ನಡೆದಿದೆ. ವರ್ಲ್ಡ್ಕಪ್ ಸ್ಕ್ವಾಡ್ನಿಂದ ಡ್ರಾಪ್ ಆಗಿದ್ದ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಆಸ್ಟ್ರೇಲಿಯಾ ವಿರುದ್ಧ ಟಿ-20 ಟೀಮ್ನಿಂದಲೂ ಔಟ್ ಆಗಿದ್ದಾರೆ. ಚಹಾಲ್ಗೆ ಮತ್ತೊಮ್ಮೆ ತಂಡದಲ್ಲಿ ಚಾನ್ಸ್ ಸಿಕ್ಕಿಲ್ಲ. ಯಾವಾಗ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ ಅನ್ನೋದು ಕನ್ಫರ್ಮ್ ಆಯ್ತೋ ಆಗಲೇ ಚಹಾಲ್ ಇಂಗ್ಲೆಂಡ್ಗೆ ತೆರಳಿದ್ರು. ಅಲ್ಲಿ, ಕೆಲ ಕೌಂಟಿ ಮ್ಯಾಚ್ಗಳನ್ನ ಕೂಡ ಆಡಿ ಬಂದಿದ್ರು. ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್ ಕೂಡ ನೀಡಿದ್ರು. ಆಸ್ಟ್ರೇಲಿಯಾ ವಿರುದ್ಧ ಟಿ-20 ಸೀರಿಸ್ಗೆ ಸೆಲೆಕ್ಟ್ ಆಗಬಹುದು ಅನ್ನೋ ಲೆಕ್ಕಾಚಾರದಲ್ಲಿ ಚಹಾಲ್ ಇದ್ರು. ಆದ್ರೆ ಮತ್ತೆ ಟೀಂನಿಂದ ಡ್ರಾಪ್ ಆಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಮೈಲಿ ಇಮೋಜಿಯನ್ನ ಹಾಕಿ ಮಾರ್ಮಿಕವಾಗಿ ತಮ್ಮ ಮೆಸೇಜ್ ಪಾಸ್ ಮಾಡಿದ್ದಾರೆ.