ಶೂನ್ಯದಲ್ಲೂ ‘ಸೂರ್ಯ’ನ ಸಾಧನೆ – ಈವರೆಗೂ ಮೊದಲ ಎಸೆತದಲ್ಲೇ ಅದೆಷ್ಟು ಕ್ರಿಕೆಟರ್ಸ್ ಔಟಾಗಿದ್ದರು..?

ಶೂನ್ಯದಲ್ಲೂ ‘ಸೂರ್ಯ’ನ ಸಾಧನೆ – ಈವರೆಗೂ ಮೊದಲ ಎಸೆತದಲ್ಲೇ ಅದೆಷ್ಟು ಕ್ರಿಕೆಟರ್ಸ್ ಔಟಾಗಿದ್ದರು..?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ್ಯ ಪಂದ್ಯದಲ್ಲಿ ಒಂದು ರನ್ ಕೂಡ ಗಳಿಸದೆ ಸೂರ್ಯ ಕುಮಾರ್ ಯಾದವ್ ಸಾಧನೆ ಮಾಡಿದ್ದಾರೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. ಆದರೆ ಭಾರತ-ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿಯೂ ಟೀಂ ಇಂಡಿಯಾದ ಸ್ಟಾರ್​ ಪ್ಲೇಯರ್ ಸೂರ್ಯಕುಮಾರ್ ಯಾದವ್​ ಶೂನ್ಯಕ್ಕೆ ಔಟ್​ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಇದನ್ನೂ ಓದಿ : ಆಸೀಸ್ ನಾಯಕನ ತಾಯಿ ವಿಧಿವಶ – ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಕ್ರಿಕೆಟ್ ತಂಡ

ಆಸ್ಚ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಸೂರ್ಯ ಕುಮಾರ್ ಯಾದವ್ ಶೂನ್ಯ ಸಾಧನೆ ಮುಂದುವರೆದಿದ್ದು, 3ನೇ ಬಾರಿಗೆ ಡಕೌಟ್ ಆಗುವ ಮೂಲಕ ಸೂರ್ಯ ಕುಮಾರ್ ಯಾದವ್ ಕಳಪೆ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್, ಅವರು ಸತತ ಮೂರನೇ ಬಾರಿಗೆ ಖಾತೆ ತೆರೆಯದೆ ಮೊದಲ ಎಸೆತದಲ್ಲಿಯೇ ಔಟಾದರು. 270 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಹಿಂದಿನ ಎರಡು ಪಂದ್ಯಗಳಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಕಾರಣ ಸೂರ್ಯ ಕುಮಾರ್ ಯಾದವ್ ಅವರನ್ನು ಆರನೇ ಕ್ರಮಾಂಕಕ್ಕೆ ಕಳುಹಿಸಿತು. 36ನೇ ಓವರ್‌ನ ಮೊದಲ ಎಸೆತದಲ್ಲಿ 54 ರನ್ ಗಳಿಸಿ ವಿರಾಟ್ ಕೊಹ್ಲಿ ಕ್ಯಾಚಿತ್ತು ಔಟಾದರು. ಇಂತಹ ಪರಿಸ್ಥಿತಿಯಲ್ಲಿ 32ರ ಹರೆಯದ ಬಲಗೈ ಬ್ಯಾಟ್ಸ್ ಮನ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆ ಹುಸಿಗೊಳಿಸಿದ ಸೂರ್ಯ ಕುಮಾರ್ ಯಾದವ್ ಶೂನ್ಯಕ್ಕೆ ಔಟಾದರು.

ಹ್ಯಾಟ್ರಿಕ್ ಗೆ ಬ್ರೇಕ್

ತಮಾಷೆಯೆಂದರೆ ಇದು ಆಷ್ಟನ್ ಅಗರ್ ಅವರ 10ನೇ ಅಂದರೆ ಕೊನೆಯ ಓವರ್ ಆಗಿತ್ತು. ಅವರು ಒಂಬತ್ತು ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆದಿರಲಿಲ್ಲ. ಆದರೆ ಕೊನೆಯ ಓವರ್‌ನಲ್ಲಿ ಅವರು ಸತತ ಎರಡು ಎಸೆತಗಳಲ್ಲಿ ಎರಡು ದೊಡ್ಡ ವಿಕೆಟ್ ಗಳನ್ನು ಪಡೆದರು. ಅವರು ಹ್ಯಾಟ್ರಿಕ್‌ ಮೂಡ್ ನಲ್ಲಿದ್ದ ಅವರ ಕನಸುಗಳನ್ನು ಜಡೇಜಾ ಭಗ್ನಗೊಳಿಸಿದರು.

3 ಸಲ ಶೂನ್ಯಕ್ಕೆ ಮಂಕಾದ ‘ಸೂರ್ಯ’

ಮುಂಬೈ ಮತ್ತು ವಿಶಾಖಪಟ್ಟಣಂನಲ್ಲಿ ಮಿಚೆಲ್ ಸ್ಟಾರ್ಕ್ ಅವರಿಂದ LBW ಮೂಲಕ ಔಟ್ ಆಗಿದ್ದ ಸೂರ್ಯ ಕುಮಾರ್ ಯಾದವ್, ಚೆನ್ನೈ ODI ನಲ್ಲಿ ಸ್ಪಿನ್ನರ್ ಆಷ್ಟನ್ ಅಗರ್ ಅವರ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಇದರೊಂದಿಗೆ ಸೂರ್ಯ ಕುಮಾರ್ ಯಾದವ್ ಹೆಸರಿನಲ್ಲಿ ಮುಜುಗರದ ದಾಖಲೆಯೊಂದು ದಾಖಲಾಗಿದೆ. ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ ಮೊದಲ ಎಸೆತದಲ್ಲೇ ಔಟಾದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಕುಖ್ಯಾತಿಗೆ ಸೂರ್ಯ ಕುಮಾರ್ ಭಾಜನರಾಗಿದ್ದಾರೆ.

ಶೂನ್ಯ ಸಾಧನೆಯಲ್ಲೂ ಸೂರ್ಯ ದಾಖಲೆ

ಶೂನ್ಯ ಸಾಧನೆ ಮೂಲಕ ಸೂರ್ಯ ಕುಮಾರ್ ಯಾದವ್ ಸತತ ಮೂರು ಗೋಲ್ಡನ್ ಡಕ್‌ಗಳನ್ನು ನೋಂದಾಯಿಸಿದ ವಿಶ್ವದ 14 ನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದಕ್ಕೂ ಮೊದಲು 1994 ರಲ್ಲಿ ಸಚಿನ್ ತೆಂಡೂಲ್ಕರ್ ಅವರು ಸತತ ಮೂರು ಬಾರಿ 0 ರನ್ ಗಳಿಸಿ ಔಟಾಗಿದ್ದರು, ಆದರೆ ಇದು ಅವರ ಮೊದಲ ಎಸೆತವಲ್ಲ ಆದರೆ ಅವರ ಎರಡನೇ ಎಸೆತವಾಗಿತ್ತು. ಯಾದವ್ ಸತತ ಮೂರು ಗೋಲ್ಡನ್ ಡಕ್‌ಗಳನ್ನು ನೋಂದಾಯಿಸಿದ ವಿಶ್ವದ 14 ನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಪಟ್ಟಿಯು ಅಲೆಕ್ ಸ್ಟೀವರ್ಟ್, ಆಂಡ್ರ್ಯೂ ಸೈಮಂಡ್ಸ್ ಮತ್ತು ಶೇನ್ ವ್ಯಾಟ್ಸನ್ ಅವರಂತಹ ದಿಗ್ಗಜ ಆಟಗಾರರ ಹೆಸರುಗಳನ್ನು ಒಳಗೊಂಡಿದೆ.

suddiyaana