ನಾನು ಆಡುತ್ತಿದ್ದೇನೆ, ಆದ್ರೆ ರನ್ಸ್‌ ಬರುತ್ತಿಲ್ಲ ಅಷ್ಟೇ – ಸೂರ್ಯಕುಮಾರ್ ಉತ್ತರಕ್ಕೆ ತಲೆಕೆಡಿಸಿಕೊಂಡ ಫ್ಯಾನ್ಸ್

ನಾನು ಆಡುತ್ತಿದ್ದೇನೆ, ಆದ್ರೆ  ರನ್ಸ್‌ ಬರುತ್ತಿಲ್ಲ ಅಷ್ಟೇ  – ಸೂರ್ಯಕುಮಾರ್ ಉತ್ತರಕ್ಕೆ ತಲೆಕೆಡಿಸಿಕೊಂಡ ಫ್ಯಾನ್ಸ್

ಬ್ಯಾಟಿಂಗ್‌ ಪ್ರದರ್ಶನ ಕುಸಿತದ ಬಗ್ಗೆ ಪ್ರಶ್ನೆಗಳು ಜೋರಾಗಿ ಕೇಳಿಬರುತ್ತಿದ್ದಂತೆ ಸೂರ್ಯಕುಮಾರ್ ಯಾದವ್  ಸಮರ್ಥಿಸಿಕೊಂಡಿದ್ದಾರೆ. ಮೊದಲ ಮ್ಯಾಚ್​ನಲ್ಲಿ 12 ರನ್ ಬಾರಿಸಿದ್ದ ಸೂರ್ಯ, ದ್ವಿತೀಯ ಪಂದ್ಯದಲ್ಲಿ 5 ರನ್​ಗಳಿಸಿ ಔಟಾಗಿದ್ದರು. ಇದೀಗ ಮೂರನೇ ಪಂದ್ಯದಲ್ಲಿ ಮತ್ತೊಮ್ಮೆ 12 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಅಷ್ಟೇ ಅಲ್ಲದೆ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್​ನಲ್ಲಿ ಅರ್ಧಶತಕ ಬಾರಿಸಿ ವರ್ಷಗಳೇ ಕಳೆದಿವೆ. ಹೀಗಾಗಿಯೇ ಟೀಮ್ ಇಂಡಿಯಾ ನಾಯಕನ ಫಾರ್ಮ್​ ಬಗ್ಗೆ ಪ್ರಶ್ನೆಗಳೆದ್ದಿವೆ.

ಇದ್ದಕ್ಕೆ ಉತ್ತರಿಸಿದ ಸೂರ್ಯಕುಮಾರ್ ಯಾದವ್  ರನ್‌ ಗಳಿಸುತ್ತಿಲ್ಲ ನಿಜ, ಆದರೆ ಫಾರ್ಮ್‌ನಿಂದ ಹೊರಗುಳಿದಿಲ್ಲ ಎಂದು ಅವರು ಹೇಳಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದ ಬಳಿಕ ಮಾತನಾಡಿದ ಸೂರ್ಯಕುಮಾರ್‌, ವಿಷಯವೇನೆಂದರೆ, ನಾನು ನೆಟ್ಸ್‌ನಲ್ಲಿ ಸುಂದರವಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ.  ನನ್ನ ನಿಯಂತ್ರಣದಲ್ಲಿರುವ ಎಲ್ಲವನ್ನೂ ನಾನು ಪ್ರಯತ್ನಿಸುತ್ತಿದ್ದೇನೆ.  ರನ್‌ಗಳು ಬರಬೇಕಾದಾಗ ಸಂದರ್ಭದಲ್ಲಿ ಖಂಡಿತವಾಗಿಯೂ ರನ್ ಬರುತ್ತವೆ. ಸದ್ಯ ನಾನು ಫಾರ್ಮ್ ಕಳೆದುಕೊಂಡಿಲ್ಲ. ರನ್​ಗಳಿಸುತ್ತಿಲ್ಲ ಅಷ್ಟೇ ಎಂದಿದ್ದಾರೆ.

ಇದನ್ನೂ ಓದಿ: ಫ್ರೆಂಡ್ಸ್‌ ಜೊತೆ ಪಾರ್ಟಿ ಮಾಡುತ್ತಿದ್ದ ವೇಳೆ ಎಂಟ್ರಿ ಕೊಟ್ಟ ಪೊಲೀಸರು! – ಖಾಕಿಗೆ ಹೆದರಿ ಬಾಲ್ಕನಿಯಿಂದ ಹಾರಿದ ಯುವತಿ!

 ಈ ಕ್ರೀಡೆ ನಿಮಗೆ ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನೀವು ಸರಣಿಗೆ ಹೇಗೆ ಹಿಂತಿರುಗುತ್ತೀರಿ ಎಂಬುದು ಹೆಚ್ಚು ಮುಖ್ಯವಾಗಿದೆ. ಮತ್ತು ನಾವು ಅದೇ ಕೆಲಸವನ್ನು ಮಾಡಿದ್ದೇವೆ. ನಾವು ಮೂಲಭೂತ ವಿಷಯಗಳಿಗೆ ಹಿಂತಿರುಗಲು ಬಯಸಿದ್ದೇವೆ. ನಾವು ಚಂಡೀಗಢದಲ್ಲಿ ಆಡಿದ ಆಟದಿಂದ ಬಹಳಷ್ಟು ಕಲಿಯುತ್ತಿದ್ದೆವು. ನಾವು ಬಹಳಷ್ಟು ವಿಭಿನ್ನ ವಿಷಯಗಳನ್ನು ಮಾಡಲು ಪ್ರಯತ್ನಿಸಲಿಲ್ಲ. ಆದರೆ ಆ ಸಮಯದಲ್ಲಿ ಮೂಲಭೂತ ವಿಷಯಗಳು ಬಹಳ ಮುಖ್ಯವೆಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.

ಸೂರ್ಯಕುಮಾರ್‌ ಅವರ ಕಳಪೆ ಫಾರ್ಮ್‌ ನಡುವೆಯೂ, ಅವರು ಶ್ರೀಲಂಕಾದಲ್ಲಿ ಟಿ20 ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಟಿ20ಐ ಸ್ವರೂಪದಲ್ಲಿ ಟೀಮ್‌ ಇಂಡಿಯಾದ ಗೆಲುವಿನ ಸರಾಸರಿ ಹೆಚ್ಚಾಗಿದೆ. ಏಷ್ಯಾಕಪ್‌ ಸೇರಿದಂತೆ ಅವರ ನಾಯಕತ್ವದಲ್ಲಿ ಈವರೆಗೆ ಆಡಿರುವ ಎಲ್ಲಾ ಸರಣಿಗಳನ್ನು ಭಾರತ ತಂಡ ಗೆದ್ದುಕೊಂಡಿದೆ.

Kishor KV