ಸೂರ್ಯಕುಮಾರ್ ಯಾದವ್ ಐಸಿಸಿ ವರ್ಷದ T-20 ಕ್ರಿಕೆಟರ್?

ಮುಂಬೈ: ಐಸಿಸಿ ವರ್ಷದ ಟಿ-20 ಕ್ರಿಕೆಟಿಗ ಪ್ರಶಸ್ತಿಗೆ ಟೀಂ ಇಂಡಿಯಾದ 360 ಡಿಗ್ರಿ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಹೆಸರನ್ನ ನಾಮನಿರ್ದೇಶನ ಮಾಡಲಾಗಿದೆ. 2022ರ ಸಾಲಿನಲ್ಲಿ ಸೂರ್ಯಕುಮಾರ್ ಯಾದವ್ 31 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನಾಡಿದ್ದು, 18.43 ಸರಾಸರಿಯೊಂದಿಗೆ 1164 ರನ್ ಬಾರಿಸಿದ್ದಾರೆ. ಅಷ್ಟೇ ಅಲ್ಲ, ಒಂದೇ ವರ್ಷದಲ್ಲಿ ಟಿ-20ಯಲ್ಲಿ ಸಾವಿರ ರನ್ ಚಚ್ಚಿದ ಜಗತ್ತಿನ ಎರಡನೇ ಆಟಗಾರ ಅನ್ನೋ ಹೆಗ್ಗಳಿಕೆಗೂ ಸೂರ್ಯಕುಮಾರ್ ಪಾತ್ರರಾಗಿದ್ದಾರೆ. ಇನ್ನು ಈ ವರ್ಷ ಟಿ-20ಯಲ್ಲಿ ಸೂರ್ಯಕುಮಾರ್ ಬರೋಬ್ಬರಿ 68 ಸಿಕ್ಸರ್ಗಳನ್ನು ಬಾರಿಸಿದ್ದು, ಎರಡು ಸೆಂಚೂರಿ ಮತ್ತು ಒಂಭತ್ತು ಅರ್ಧಶತಗಳನ್ನ ಕೂಡ ಗಳಿಸಿದ್ದಾರೆ. ಇನ್ನು ಸೂರ್ಯಕುಮಾರ್ ಜೊತೆ ಪಾಕಿಸ್ತಾನದ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಕೂಡ ಐಸಿಸಿ ವರ್ಷದ ಟಿ-20 ಕ್ರಿಕೆಟಿಗ ಪ್ರಶಸ್ತಿಗೆ ರೇಸ್ನಲ್ಲಿದ್ದಾರೆ.