ಕ್ರಿಕೆಟ್ ನಲ್ಲಿ ಮುಳುಗಿದ ಸೂರ್ಯ! ಚಾನ್ಸ್ ನೀಡದೇ BCCI ಅನ್ಯಾಯ!
ಮುಂಬೈ ಬಿಟ್ಟು KKR ಸೇರ್ತಾರಾ SKY ?

ಟಿ-20ಐ ಸ್ಪೆಷಲಿಸ್ಟ್ ಬ್ಯಾಟರ್, ಮಿಸ್ಟರ್ 360 ಡಿಗ್ರಿ ಬ್ಯಾಟರ್, ಟಿ20ವಿಶ್ವಕಪ್ 2026 ಗೆಲ್ಲಿಸಿಕೊಟ್ಟ ನಾಯಕ ಅಂತ ಚುಟುಕು ಮಾದರಿಯಲ್ಲಿ ಮೆರೆಯುತ್ತಿದ್ದ ಸೂರ್ಯ ಕ್ರಿಕೆಟ್ ಲೋಕದಲ್ಲಿ ಮುಳುಗುವ ಸಮಯ ಬಂದಂತೆ ಕಾಣ್ತಿದೆ. ಯಾಕಂದ್ರೆ ಸೂರ್ಯಕುಮಾರ್ ಸಾರಥ್ಯದಲ್ಲಿ ಟೀಂ ಇಂಡಿಯಾ ಹೆಚ್ಚು ಪಂದ್ಯ ಸೋತಿಲ್ಲ, ಹಾಗಂತ ಗೆಲ್ಲೋ ಪಂದ್ಯಕ್ಕೆ ಸೂರ್ಯಕುಮಾರ್ ಕಾರಣರಾಗಿಲ್ಲ.. ಐಪಿಎಲ್‌ನಲ್ಲೂ ಕೂಡ ಅಬ್ಬರದ ಪ್ರದರ್ಶನವಿಲ್ಲ.. ಎಲ್ಲಾ ಅಳೆದು ತೂಗಿ ಲೆಕ್ಕಹಾಕಿದ ಬಿಸಿಸಿಐ ಸೂರ್ಯಕುಮಾರ್‌ರನ್ನ ಟೀಂ ಇಂಡಿಯಾ ಕ್ಯಾಪ್ಟನ್ ಪಟ್ಟದಿಂದ ಮಾತ್ರ ಅಲ್ಲ ತಂಡದಿಂದಲೇ ಹೊರ ಹಾಕಿದೆ. ಆದ್ರೆ ಕಾಡ್ತಾ ಇರೋ ಪ್ರಶ್ನೆ ಏನಪ್ಪ ಅಂದ್ರೆ ಸೂರ್ಯಕುಮಾರ್ ಮುಂದಿ ದಾರಿ ಏನು? ಅನ್ನೋದು. ಒಂದ್ಕಡೆ ಸೂರ್ಯಕುಮಾರ್ ಕಳಪೆ ಪ್ರದರ್ಶನವೇ ಟೀಂ ಇಂಡಿಯಾದಿಂದ ಔಟ್ ಆಗೋಕೆ ಕಾರಣ ಅಂದ್ರೆ, ಇನ್ನೊಂದ್ಕಡೆ ಅವರಿಗೆ ಬಿಸಿಸಿ ಅನ್ಯಾಯ ಮಾಡ್ತು ಅನ್ನೋ ಪ್ರಶ್ನೆ ಎದ್ದಿದೆ. ಜೊತೆಗೆ ಸೂರ್ಯ ಮುಂಬೈ ಬಿಟ್ಟು ಕೆಕೆಆರ್‌ನಲ್ಲಿ ಉದಯ ಆಗ್ತಾನೆ ಅನ್ನೋ ಚರ್ಚೆ ಕೂಡ ಶುರುವಾಗಿದೆ.
ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ ವೈಭವ್ ಸೂರ್ಯವಂಶಿ – ಭರ್ಜರಿ ಶತಕ ಸಿಡಿಸಿದ ರುತುರಾಜ್ ಗಾಯಕ್ವಾಡ್
ಭಾರತದ ಟಿ20ಐ ತಂಡದಲ್ಲಿ ಯಾವಾಗ ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಅಯ್ಯರ್‌ಗೆ ಕ್ಯಾಪ್ಟನ್ಸಿ ಪಟ್ಟ ಸಿಕ್ತೋ ಆಗಿದ್ದ ಆಗ್ತಿರೋ ಚರ್ಚೆ ವಿಷ್ಯ ಒಂದೇ.. ಸೂರ್ಯಕುಮಾರ್ ಮುಂದೇನು ಮಾಡ್ತಾರೆ ಅನ್ನೋದು.. ಯಾಕೆ ಸೂರ್ಯಕುಮಾರ್‌ಗೆ ಈ ಪರಿಸ್ಥಿತಿ ಬಂತು ಅಂತ ವಿಮರ್ಶೆ ಮಾಡಿದ್ರೆ ಸಾಕಷ್ಟು ಕಾರಣಗಳು ಸಿಗುತ್ತೆ.. ಇಲ್ಲಿ ಕ್ಯಾಪ್ಟನ್ಸಿ ಮಾತ್ರ ಕಳೆದುಕೊಂಡಿದ್ರ ಅಷ್ಟು ಮಹತ್ವ ಪಡೆದುಕೊಳ್ಳುತಿರಲ್ಲ. ಆದ್ರೆ ಇಲ್ಲಿ ಸೂರ್ಯಕುಮಾರ್ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಯಿಂದಲೇ ಔಟ್ ಆಗಿದ್ದಾರೆ. ಇದು ಇವರ ಕ್ರಿಕೆಟ್ ವೃತ್ತಿ ಜೀವನದ ಮೇಲೆ ಎಫೆಕ್ಟ್ ಬೀಳುವ ಸಾಧ್ಯತೆ ಹೆಚ್ಚಿದೆ. ಬಿಸಿಸಿಐ ನಿರ್ಧಾರಕ್ಕೆ ಸೂರ್ಯ ಕುಮಾರ್ ಕಳಫೆ ಫಾರ್ಮ್ ಒಂದು ಕಾರಣವಾದ್ೆ, ಸಾಕಷ್ಟು ಮಾಜಿ ಆಟಗಾರರು ಸೂರ್ಯಕುಮಾರ್‌ಗೆ ಬಿಸಿಸಿಐ ಅನ್ಯಾಯ ಮಾಡ್ತು ಅನ್ನೋ ರೀತಿಯಲ್ಲಿ ಮಾತನಾಡಿದ್ದಾರೆ.
ಸೂರ್ಯಕುಮಾರ್‌ಗೆ ಬಿಸಿಸಿಐ ಚಾನ್ಸ್ ಕೊಡಬೇಕಿತ್ತು
ಇತ್ತೀಚೆಗೆ ಟಿ20 ವಿಶ್ವಕಪ್ ಗೆದ್ದಿರುವ ಭಾರತೀಯ ತಂಡಕ್ಕೆ ಸ್ವಲ್ಪ ಹೆಚ್ಚುವರಿ ಸಮಯ ನೀಡಬೇಕು. ಆಡಿದ ಎಲ್ಲ ಆಟಗಾರರೂ ಅದಕ್ಕೆ ಅರ್ಹರು. ನನ್ನ ಅಭಿಪ್ರಾಯದಲ್ಲಿ, ಸೂರ್ಯಕುಮಾರ್ ಪ್ರಕರಣದಲ್ಲಿ ಅವರಿಗೆ ನಾಯಕತ್ವ ನೀಡಬಾರದು. ಆದರೆ ಒಂದು ಅಥವಾ ಎರಡು ಸರಣಿಗಳಿಗೆ ಅವಕಾಶ ನೀಡಬೇಕು. ಅವರು ಪ್ರದರ್ಶನ ನೀಡದಿದ್ದರೆ ನಂತರ ತಂಡದಿಂದ ಕೈಬಿಡಬೇಕು ಎಂದು ಆರ್ ಅಶ್ವಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐ ಸೂರ್ಯನಿಗೆ ಮತ್ತೊಂದು ಅವಕಾಶ ನೀಡಬೇಕಿತ್ತು
ಇನ್ನು ಈ ಬಗ್ಗೆ ಆಕಾಶ್ ಚೋಪ್ರಾ ಕೂಡ ಮಾತನಾಡಿದ್ದು, ಸೂರ್ಯನಿಗೆ ಇನ್ನೊಂದು ಅವಕಾಶ ನೀಡಬೇಕಿತ್ತು ಅಂತ ಹೇಳಿದ್ದಾರೆ. ಅವರು ವಿಶ್ವಕಪ್ ಟ್ರೋಫಿ ಹಿಡಿದು ಸಂಭ್ರಮಿಸುತ್ತಿರುವುದು ಕಣ್ಣಮುಂದೆ ಬರುತ್ತದೆ. ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ತಂಡದಿಂದಲೇ ಡ್ರಾಪ್ ಮಾಡುವುದು ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ಎಲ್ಲೂ ನಡೆಯುವುದಿಲ್ಲ. ನನ್ನ ಪ್ರಕಾರ ಬಿಸಿಸಿಐ ಅವರಿಗೆ ಮತ್ತೊಂದು ಗೌರವಯುತ ಅವಕಾಶ ನೀಡಬೇಕಿತ್ತು ಎಂದಿದ್ದಾರೆ.
ಮುಂಬೈ ಬಿಟ್ಟು ಕೆಕೆಆರ್ ಹೋಗ್ತಾರಾ ಸೂರ್ಯ?
ಇನ್ನೊಂದ್ಕಡೆ ಸೂರ್ಯಕುಮಾರ್ ಯಾದವ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಸಂಬಂಧ ಕೊನೆಗೊಳ್ಳಲಿದೆಯಾ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಸೂರ್ಯಕುಮಾರ್ ಯಾದವ್ ತಮ್ಮ ಬಯೋದಿಂದ ಮುಂಬೈ ಇಂಡಿಯನ್ಸ್ ಅನ್ನು ತೆಗೆದುಹಾಕಿದ್ದಾರೆ. ಜತೆಗೆ ಮುಂಬೈ ಇಂಡಿಯನ್ಸ್ ಅನ್ನು ಅನ್‌ಫಾಲೋ ಮಾಡಿದ್ದಾರೆ. ಎಂಐ ಕೂಡ ಸೂರ್ಯನನ್ನ ಅನ್‌ಫಾಲೋ ಮಾಡಿದೆ. ಸೂರ್ಯ ತಮ್ಮ ಇನ್‌ಸ್ಟಾ ಐಡಿಯಿಂದ ಎಂಐಗೆ ಸಂಬಂಧಿಸಿದ ಎಲ್ಲಾ ಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆದುಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ, ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್‌ಗೆ ವಿದಾಯ ಹೇಳಬಹುದು ಅನ್ನೋ ಗಾಸಿಫ್ ಜೋರಾಗಿದೆ. ಈ ವಿಷಯದಲ್ಲಿ ಫ್ರಾಂಚೈಸಿ ಅಥವಾ ಸೂರ್ಯಕುಮಾರ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. 19ನೇ ಆವೃತ್ತಿಯ ಐಪಿಎಲ್ ಹರಾಜಿಗೆ ಮೊದಲು ಮುಂಬೈ ಇಂಡಿಯನ್ಸ್ 16.25 ಕೋಟಿ ನೀಡಿ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಅವರು 2018 ರಿಂದ ಮುಂಬೈ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿದ್ದಾರೆ. ಈಗ ಸೂರ್ಯಕುಮಾರ್ ಫ್ರಾಂಚೈಸಿಯನ್ನು ತೊರೆಯಲು ನಿರ್ಧರಿಸಿದ್ದಾರೆ ಎನ್ನಾಗಿಲಿದೆ. ಇನ್ನು ಸೂರ್ಯ ಕುಮಾರ್ ಐಪಿಎಲ್‌ನಲ್ಲಿ ಮುಂಬೈ ಬಿಟ್ರೆ ಯಾವ ತಂಡಕ್ಕೆ ಹೋಗ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸೂರ್ಯ ಅವರ ಹಳೆಯ ತಂಡ ಕೆಕೆಆರ್.. ಸದ್ಯಕ್ಕೆ ಕೆಕೆಆರ್‌ಗೆ ಅನುಭವಿ ಭಾರತೀಯ ಬ್ಯಾಟ್ಸ್‌ಮನ್ ಮತ್ತು ನಾಯಕನ ಅಗತ್ಯವಿದೆ. ಆದ್ದರಿಂದ, ಸೂರ್ಯಕುಮಾರ್ ಮತ್ತೆ ತಂಡವನ್ನು ಸೇರುವ ಸಾಧ್ಯತೆ ಇದೆ. ಇದಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಸೂರ್ಯ ಕುಮಾರ್ ಯಾದವ್ ಮೇಲೆ ಕಣ್ಣಿಟ್ಟಿದೆ.
ಸೂರ್ಯಕುಮಾರ್ ಯಾದವ್ 2011 ರಲ್ಲಿ ಮುಂಬೈ ಇಂಡಿಯನ್ಸ್‌ನೊಂದಿಗೆ ಆಡಿದ್ದರು. ಆದರೆ ಅವರಿಗೆ ಆ ಆವೃತ್ತಿಯಲ್ಲಿ ದೊಡ್ಡ ಅವಕಾಶಗಳು ಸಿಗಲಿಲ್ಲ. ಅವರು ಕೆಕೆಆರ್ ತಂಡದತ್ತ ಮುಖ ಮಾಡಿದರು. 2018ರಲ್ಲಿ ಇವರು ಮತ್ತೆ ಮುಂಬೈ ತಂಡವನ್ನು ಸೇರಿದರು. ಈಗ ಮತ್ತೆ ಕೆಕೆಆರ್ ತಂಡ ಸೇರುವ ಸಾಧ್ಯತೆ ಹೆಚ್ಚಿದೆ. ಐಪಿಎಲ್ 2026ರಲ್ಲಿ ಸೂರ್ಯಕುಮಾರ್ ಯಾದವ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರು ಆಡಿದ 13 ಪಂದ್ಯಗಳಲ್ಲಿ ಕೇವಲ 270 ರನ್ ಸಿಡಿಸಿದ್ದಾರೆ. ಒಟ್ನಲ್ಲಿ ಸೂರ್ಯನಿಗೆ ಟೀಂ ಇಂಡಿಯಾ ಟಿ20ಐ ತಂಡದ ಕ್ಯಾಪ್ಟನ್ಸಿ ಜೊತೆ ತಂಡದಲ್ಲೂ ಸ್ಥಾನ ಕಳೆದುಕೊಂಡು ದಾರಿ ಕಾಣದಂತೆ ಕುಳಿತಿದ್ದಾರೆ. ಹಾಗೇ ಮುಂಬೈ ಬಿಡೋ ಮಾತು ಕೇಳಿ ಬರ್ತಿದೆ. ಹೀಗಾಗಿ ಸೂರ್ಯಕುಮಾರ್ ನಡೆ ಕುತೂಹಲ ಕೆರಳಿಸಿದೆ.

ನೋಡಿರಿ

