ಮುಂಬೈಗೆ ಸೂರ್ಯ ಕ್ಯಾಪ್ಟನ್? – ಪಾಂಡ್ಯನೇ ಪಟ್ಟ ಬಿಟ್ಟು ಕೊಡ್ತಾರಾ?
ವಿಶ್ವಕಪ್ ಟ್ರೋಫಿ ಸಾರಥ್ಯ ಬದಲಿಸುತ್ತಾ?

ಮುಂಬೈ ಇಂಡಿಯನ್ಸ್.. ಐಪಿಎಲ್ನ ಮೋಸ್ಟ್ ಸಕ್ಸಸ್ಫುಲ್ ಟೀಂ. 5 ಸಲ ಚಾಂಪಿಯನ್ ಪಟ್ಟಕ್ಕೇರಿದ ಮೊದಲ ತಂಡ. ಅದ್ರಲ್ಲೂ ಸ್ಟಾರ್ ಆಟಗಾರರ ದಂಡೇ ತುಂಬಿರುವ ಫ್ರಾಂಚೈಸಿ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ ಹಾಗೇ ಜಸ್ಪ್ರೀತ್ ಬುಮ್ರಾ. ಹೀಗೆ ಎಲ್ರೂ ಟೀಂ ಇಂಡಿಯಾ ಆಟಗಾರರೇ. ಇಂಟ್ರೆಸ್ಟಿಂಗ್ ಅಂದ್ರೆ ಮುಂಬೈ ಇಂಡಿಯನ್ಸ್ ಈ ಸೀಸನ್ನಲ್ಲಿ ಮತ್ತೆ ಕ್ಯಾಪ್ಟನ್ಸಿ ಬದಲಿಸುತ್ತಾ ಅನ್ನೋ ಚರ್ಚೆ ಶುರುವಾಗಿದೆ.
ಇದನ್ನೂ ಓದಿ : PSLನಿಂದ ಹಿಂದೆ ಸರಿಯಿರಿ- ವಿದೇಶಿ ಆಟಗಾರರಿಗೆ ಉಗ್ರ ಸಂಘನೆಯ ಎಚ್ಚರಿಕೆ
ಬ್ಯಾಟಿಂಗ್, ಬೌಲರ್, ಫಿನಿಶರ್ಸ್ ಹೀಗೆ ಟಾಪ್ ಟು ಬಾಟಮ್ ದಿ ಬೆಸ್ಟ್ ಪ್ಲೇಯರ್ಗಳನ್ನೇ ಹೊಂದಿರೋ ಮುಂಬೈ ಇಂಡಿಯನ್ಸ್ 2020ರಲ್ಲಿ ಟ್ರೋಫಿ ಗೆದ್ದ ಬಳಿಕ ಮತ್ತೆ ಕಪ್ ಗೆದ್ದಿಲ್ಲ. ಹೀಗಾಗೇ ಐದು ಬಾರಿಯ ಚಾಂಪಿಯನ್ ಕ್ಯಾಪ್ಟನ್ ರೋಹಿತ್ ಶರ್ಮಾರನ್ನೇ ಕೆಳಗಿಳಿಸಿ 2024ರಲ್ಲಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿದ್ರು. ಆದ್ರೆ ಈ ಬದಲಾವಣೆ ಫ್ರಾಂಚೈಸಿಗೆ ಅಷ್ಟು ಈಸಿ ಇರ್ಲಿಲ್ಲ. ಅಭಿಮಾನಿಗಳು ಒಪ್ಪಿಕೊಳ್ಳಲಿಲ್ಲ. ಆನ್ಫೀಲ್ಡ್, ಆಫ್ದಿ ಫೀಲ್ಡ್ ತುಂಬಾನೇ ವಿರೋಧ ಮಾಡಿದ್ರು. 14 ಪಂದ್ಯಗಳ ಪೈಕಿ ಕೇವಲ 4 ಮ್ಯಾಚ್ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿ ಸೀಸನ್ ಮುಗಿಸಿದ್ರು. ಲಾಸ್ಟ್ ಇಯರ್ ಪ್ಲೇ ಆಫ್ಗೆ ಬಂದ್ರೂ ಕೂಡ ಕ್ವಾಲಿಫೈಯರ್ 2 ರಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ಸೋತು ಟೂರ್ನಿಗೆ ಗುಡ್ ಬೈ ಹೇಳಿದ್ರು. ಬಟ್ ಈ ವರ್ಷ ಟ್ರೋಫಿ ಗೆಲ್ಲಲೇಬೇಕು ಅನ್ನೋ ಇಂಟೆನ್ಷನ್ನಲ್ಲಿರೋ ಮುಂಬೈನಲ್ಲಿ ಮತ್ತೆ ನಾಯಕತ್ವ ಬದಲಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಭಾರತದ ಮಾಜಿ ಆಟಗಾರ ಕ್ರಿಸ್ ಶ್ರೀಕಾಂತ್ ಹೊಸ ಹಿಂಟ್ ಕೊಟ್ಟಿದ್ದಾರೆ.
ಸೂರ್ಯನಿಗೆ ನಾಯಕತ್ವ ಬಿಟ್ಟುಕೊಡ್ತಾರಾ ಹಾರ್ದಿಕ್ ಪಾಂಡ್ಯ?
2026ರ ಐಪಿಎಲ್ಗೂ ಮುನ್ನ ಭಾರತದ ಮಾಜಿ ಆಯ್ಕೆದಾರ ಕ್ರಿಸ್ ಶ್ರೀಕಾಂತ್ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ಬಗ್ಗೆ ಮಾತನಾಡಿದ್ದಾರೆ. ನಾಯಕತ್ವದಲ್ಲಿ ಬದಲಾವಣೆ ಚಾನ್ಸಸ್ ಇದೆ ಎಂದಿದ್ದಾರೆ. ಭಾರತವನ್ನು ಟಿ-20 ವಿಶ್ವಕಪ್ಗೆ ಮುನ್ನಡಿಸಿದ್ದ ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕತ್ವ ಜವಾಬ್ದಾರಿ ನೀಡ್ಬೋದು ಎಂದಿದ್ದಾರೆ. ಹಾಗೇನಾದ್ರೂ ಮಾಡಿದ್ರೆ ಫ್ರಾಂಚೈಸಿ ಮಾಲೀಕರು, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಒಂದಾದ್ರೆ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಬಹುದು ಎಂದಿದ್ದಾರೆ. ಮುಂಬೈ ಫ್ರಾಂಚೈಸಿ ಅದೃಷ್ಟ ಬದಲಾಯಿಸಲು ಈ ವರ್ಷ ಸೂರ್ಯ ಅವರನ್ನು ಮುನ್ನಡೆಸಲು ಕೇಳಬೇಕು. ಯಾವಾಗ ಬೇಕಾದರೂ ಸೂರ್ಯ ಅವರನ್ನು ನಾಯಕನನ್ನಾಗಿ ನೇಮಿಸಬಹುದು. ಹಾಗಂತ ಈಗಲೇ ಘೋಷಣೆ ಮಾಡ್ಬೇಕು ಅಂತೇನಿಲ್ಲ. ಅಲ್ಲದೇ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ವಿಶ್ವಕಪ್ ವಿಜೇತ ನಾಯಕರು. ಪ್ರಸ್ತುತ ಹಾರ್ದಿಕ್ ನೇತೃತ್ವದಲ್ಲಿ ಆಡುತ್ತಿದ್ದಾರೆ. ಇದೊಂಥರ ತಮಾಷೆಯ ಪರಿಸ್ಥಿತಿ. ಹಾಗಂತ ಹಾರ್ದಿಕ್ ಪಾಂಡ್ಯ ಒಳ್ಳೆಯ ನಾಯಕನೇ. ಹಾರ್ದಿಕ್ ಅಡಿಯಲ್ಲಿ ಇಬ್ಬರು ಟಿ20 ವಿಶ್ವಕಪ್ ವಿಜೇತ ನಾಯಕರು ಈಗ ಆಡುತ್ತಿದ್ದಾರೆ ಅನ್ನೋ ಮೂಲಕ ತಮ್ಮ ವಾದ ಏನು ಅನ್ನೋದನ್ನ ಹೇಳಿದ್ದಾರೆ.
ಹಾರ್ದಿಕ್ ಸ್ವತಃ ನಾಯಕತ್ವ ಬಿಟ್ಟುಕೊಡ್ತಾರಾ?
ಇಲ್ಲಿ ಇನ್ನೊಂದು ವಿಚಾರ ಹೇಳಿರೋ ಶ್ರೀಕಾಂತ್, ಸ್ವತಃ ಹಾರ್ದಿಕ್ ಪಾಂಡ್ಯ ಅವ್ರೇ ಕ್ಯಾಪ್ಟನ್ಸಿ ಬಿಟ್ಟುಕೊಡಬೇಕು ಎಂದಿದ್ದಾರೆ. ರೋಹಿತ್ ಮತ್ತು ಸೂರ್ಯ ನೇತೃತ್ವದಲ್ಲಿ ಭಾರತ ವಿಶ್ವಕಪ್ ಗೆಲ್ಲಲು ಹಾರ್ದಿಕ್ ಪಾಂಡ್ಯ ಪಾತ್ರವೂ ತುಂಬಾ ದೊಡ್ಡದಿದೆ. ಹೀಗಿದ್ರೂ ಹಾರ್ದಿಕ್ ಸ್ವತಃ ನಾಯಕತ್ವವನ್ನು ನಿರಾಕರಿಸಬೇಕು ಮತ್ತು ಸೂರ್ಯ ಅವರನ್ನು ಮುನ್ನಡೆಸಲು ಅವಕಾಶ ನೀಡಬೇಕು. ಹಾರ್ದಿಕ್ ಅವ್ರೇ ಕ್ಯಾಪ್ಟನ್ಸಿ ಬಿಟ್ಟುಕೊಟ್ರೆ ಗೊಂದಲಗಳೆಲ್ಲಾ ಪರಿಹಾರ ಆಗುತ್ತೆ. ಸೂರ್ಯ ಲೀಡರ್ಶಿಪ್ ತಗೊಂಡ್ರೆ ನಾನು ಅದನ್ನ ಬೆಂಬಲಿಸುತ್ತೇನೆ ಎಂದಿದ್ದಾರೆ. ಆದ್ರೆ ಶ್ರೀಕಾಂತ್ ಅವ್ರ ಸಲಹೆ ಜಾರಿಗೆ ಬರೋದು ಕಷ್ಟ.
ಐಪಿಎಲ್ ಬೇರೆ, ಟೀಂ ಇಂಡಿಯಾ ನಾಯಕತ್ವವೇ ಬೇರೆ!
ಌಕ್ಚುಲಿ ಇಲ್ಲಿ ಶ್ರೀಕಾಂತ್ ಪಾಂಡ್ಯ ಅವ್ರೇ ಕ್ಯಾಪ್ಟನ್ಸಿ ಬಿಟ್ಟುಕೊಡ್ಲಿ ಅಂತಿದ್ದಾರೆ. ಆದ್ರೆ ಅದು ಸುಲಭ ಇಲ್ಲ. ಯಾಕಂದ್ರೆ ಐಪಿಎಲ್ನಲ್ಲಿ ನಾಯಕತ್ವವೇ ಬೇರೆ ಟೀಂ ಇಂಡಿಯಾ ನಾಯಕತ್ವವೇ ಬೇರೆ. ಎರಡನ್ನೂ ಕಂಪೇರ್ ಮಾಡೋಕೆ ಆಗಲ್ಲ. ಅದೂ ಅಲ್ದೇ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ದಾಗ್ಲೇ ಹಾರ್ದಿಕ್ ಪಾಂಡ್ಯರನ್ನ ತಂದು ಪಟ್ಟಾಭಿಷೇಕ ಮಾಡಿದ್ರು. 2024ರಲ್ಲಿ ಪಾಂಡ್ಯ ನಾಯಕತ್ವದಲ್ಲೇ ಐಪಿಎಲ್ ಆಡಿದ್ರು. ಌಂಡ್ ಈ ಐಪಿಎಲ್ ಆದ್ಮೇಲೆ ಮತ್ತೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ-20 ವಿಶ್ವಕಪ್ ಆಡಿ ಭಾರತ ಗೆಲ್ತು. ಌಂಡ್ ನೆಕ್ಸ್ಟ್ ಈಗ 2026ರಲ್ಲಿ ಸೂರ್ಯ ನಾಯಕತ್ವದಲ್ಲಿ ಭಾರತ ಮತ್ತೆ ಚಾಂಪಿಯನ್ ಪಟ್ಟಕ್ಕೇರಿತು. ಈ ಎರಡೂ ಟೂರ್ನಿಗಳಲ್ಲೂ ಭಾರತದ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಕೊಡುಗೆ ತುಂಬಾನೇ ದೊಡ್ಡದಿದೆ. ಹಾಗೇ ನೋಡಿದ್ರೆ ಕೆಎಲ್ ರಾಹುಲ್ ಕೂಡ ಟೀಂ ಇಂಡಿಯಾದ ಸ್ಟಾರ್ ಆಟಗಾರ. ಆದ್ರೆ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಕರ್ನಾಟಕ ಪರ ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್ ಕೈಕೆಳಗೂ ಆಡ್ತಾರೆ. ಹೀಗಾಗಿ ಪಾಂಡ್ಯ ಏನೂ ಫ್ರೆಶ್ ಕ್ರಿಕೆಟರ್ ಅಲ್ಲ. ಐಪಿಎಲ್ನಲ್ಲಿ ನಾಯಕನಾಗಿ ಗುಜರಾತ್ಗೆ ಕಪ್ ಗೆದ್ದಿದ್ದಾರೆ. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್ ಅವ್ರಿಗೆ ನಾಯಕತ್ವ ನೀಡಿತ್ತು. ಸೋ ಈ ವರ್ಷವೂ ಅದೇ ಫಾರ್ಮುಲಾ ಕಂಟಿನ್ಯೂ ಆಗ್ಬೋದು. ಅಂದ್ರೆ ಪಾಂಡ್ಯ ಅಡಿಯಲ್ಲೇ ಟೀಂ ಕಂಟನ್ಯು ಆಗುತ್ತೆ. ಇನ್ನು ಮುಂಬೈ ಇಂಡಿಯನ್ಸ್ನಲ್ಲಿ ಸ್ಟಾರ್ ಆಟಗಾರರ ದಂಡೇ ಇರೋದ್ರಿಂದ ಅಲ್ಲಿ ಟೀಂ ಎಫರ್ಟ್ ಬಂದ್ರೆ ಗೆಲುವೂ ಕೂಡ ಸುಲಭ ಆಗುತ್ತೆ. ರೋಹಿತ್ ಶರ್ಮಾರನ್ನೇ ನಾಯಕತ್ವದಿಂದ ಇಳಿಸಿರೋ ಫ್ರಾಂಚೈಸಿ ಸೂರ್ಯನಿಗೆ ಪಟ್ಟ ಕಟ್ಟುತ್ತಾ ಅನ್ನೋದೇ ಈಗಿರೋ ಪ್ರಶ್ನೆ.

ನೋಡಿರಿ

