Rankingನಲ್ಲೂ ಜಾರಿಬಿದ್ದ ಸೂರ್ಯ – T-20 ವಿಶ್ವಕಪ್ ಕೊನೇ ಅಗ್ನಿಪರೀಕ್ಷೆ
ಕ್ಯಾಪ್ಟನ್ಸಿ LUCK ಕರಿಯರ್ ಉಳಿಸುತ್ತಾ?

Rankingನಲ್ಲೂ ಜಾರಿಬಿದ್ದ ಸೂರ್ಯ – T-20 ವಿಶ್ವಕಪ್ ಕೊನೇ ಅಗ್ನಿಪರೀಕ್ಷೆಕ್ಯಾಪ್ಟನ್ಸಿ LUCK ಕರಿಯರ್ ಉಳಿಸುತ್ತಾ?

2026ರ ಆರಂಭದಲ್ಲೇ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಏಕದಿನ ಹಾಗೇ ಟಿ-20ಐ ಸರಣಿಗಳನ್ನಾಡಲಿದೆ. ಆ ನಂತ್ರ ಡೈರೆಕ್ಟ್ ಟಿ-20 ವಿಶ್ವಕಪ್.. 20 ತಂಡಗಳ ನಡುವಿನ ಹೈವೋಲ್ಟೇಜ್ ಫೈಟ್ ನಲ್ಲಿ ಭಾರತ ಟ್ರೋಫಿ ಡಿಫೆಂಡ್ ಮಾಡಿಕೊಳ್ಬೇಕಿದೆ. ಆಲ್ರೆಡಿ ಸೂರ್ಯಕುಮಾರ್ ಕ್ಯಾಪ್ಟನ್ಸಿಯಲ್ಲಿ 15 ಆಟಗಾರರ ಸ್ಕ್ಯಾಡ್ ಕೂಡ ಅನೌನ್ಸ್ ಆಗಿದೆ. ಸದ್ಯಕ್ಕೆ ಭಾರತಕ್ಕೆ ಇರೋ ಒಂದೇ ಒಂದು ಟೆನ್ಷನ್ ಅಂದ್ರೆ ಅದು ನಾಯಕನ ಕಳಪೆ ಫಾರ್ಮ್. ಉಳಿದಂತೆ ಮ್ಯಾಚ್ ವಿನ್ನಿಂಗ್ ಪ್ಲೇಯರ್​ಗಳೇ ಇದ್ದಾರೆ.

ಇದನ್ನೂ ಓದಿ : ವಿರಾಟ್‌ ಕೊಹ್ಲಿ ಅರ್ಧಶತಕ, ರೋಹಿತ್‌ ಶರ್ಮಾ  ಗೋಲ್ಡಕ್‌ ಡಕ್‌ – VHT ಎರಡನೇ ಪಂದ್ಯದಲ್ಲಿ ಆಗಿದ್ದೇನು?

ಸೂರ್ಯಕುಮಾರ್ ಯಾದವ್.. ಟಿ-20 ಕ್ರಿಕೆಟ್ ಸ್ಪೆಷಲಿಸ್ಟ್ ಬ್ಯಾಟರ್.. ಮಿಸ್ಟರ್ 360 ಡಿಗ್ರಿ ಬ್ಯಾಟರ್.. ಪವರ್ ಹಿಟ್ಟರ್ ಅಂತೆಲ್ಲಾ ಕರೆಸಿಕೊಳ್ತಿದ್ದ ಸೂರ್ಯ 2023ರಲ್ಲಿ ಐಸಿಸಿ ಮೆನ್ಸ್ ಟಿ-20ಐ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದಿದ್ರು. 2024ರ ಟಿ-20 ವಿಶ್ವಕಪ್​ವರೆಗೂ ಮೈದಾನದಲ್ಲಿ ಪ್ರಜ್ವಲಿಸ್ತಾನೇ ಇದ್ರು. ಸೌತ್ ಆಫ್ರಿಕಾ ವಿರುದ್ಧದ ಫೈನಲ್ ಮ್ಯಾಚಲ್ಲಿ ಸೂರ್ಯ ಹಿಡಿದ ಅದೊಂದು ಕ್ಯಾಚ್​ ಭಾರತವನ್ನ ಚಾಂಪಿಯನ್ ಪಟ್ಟಕ್ಕೇರಿಸಿತ್ತು. ಬಟ್ ಯಾವಾಗ ರೋಹಿತ್ ಶರ್ಮಾ ಬಳಿಕ ಕ್ಯಾಪ್ಟನ್ಸಿ ಸಿಕ್ತೋ ಅಲ್ಲಿಂದ ಈಚೆಗೆ ಸೂರ್ಯನಿಗೆ ಹಿಡಿದಿರೋ ಗ್ರಹಣ ಬಿಟ್ಟೇ ಇಲ್ಲ. 2025ರಲ್ಲಂತೂ ಸೂರ್ಯ ಕಳಪೆ ಫಾರ್ಮ್​ನಲ್ಲೇ ಮರೆಯಾಗಿ ಬಿಟ್ಟ. ಸೂರ್ಯನ ಈ ಗ್ರಹಣ ಟಿ-20 ರ್ಯಾಂಕಿಂಗ್​ನಲ್ಲೂ ಶಾಕ್ ಕೊಟ್ಟಿದೆ.

ಟಿ-20 ಟಾಪ್-10 ಬ್ಯಾಟರ್ ಶ್ರೇಯಾಂಕದಿಂದ ಹೊರ ಬಿದ್ದ ಸೂರ್ಯ!

ಫೆಬ್ರವರಿ 07ರಿಂದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಸ್ಟಾರ್ಟ್ ಆಗುತ್ತೆ. ಇದ್ರ ನಡುವೆ ಐಸಿಸಿ ನೂತನ ಟಿ20 ರ‍್ಯಾಂಕಿಂಗ್‌ ಪ್ರಕಟಗೊಂಡಿದ್ದು, ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಟಾಪ್ 10 ಪಟ್ಟಿಯಿಂದಲೇ ಹೊರಬಿದ್ದಿದ್ದಾರೆ. ಇತ್ತೀಚೆಗೆ ಸೌತ್ ಆಫ್ರಿಕಾ ವಿರುದ್ಧದ ಸಿರೀಸ್​ನಲ್ಲೂ ಸದ್ದು ಮಾಡದ ಸೂರ್ಯ ಮತ್ತೆ ಮೂರು ಸ್ಥಾನ ಕುಸಿತ ಕಾಣುವ ಮೂಲಕ 13ನೇ ಸ್ಥಾನಕ್ಕೆ ಜಾರಿದ್ದಾರೆ. ಕಳೆದೊಂದು ವರ್ಷದಿಂದಲೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ಬಿಗ್ ಇನ್ನಿಂಗ್ಸ್ ಬಂದೇ ಇಲ್ಲ. ಈಗ  ಐಸಿಸಿ ಟಿ20 ಶ್ರೇಯಾಂಕದಲ್ಲಿ ಟಾಪ್ 10 ಪಟ್ಟಿಯಿಂದಲೂ ಔಟ್ ಆಗಿದ್ದಾರೆ.  ಅಭಿಷೇಕ್ ಶರ್ಮಾ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಎರಡನೇ ಸ್ಥಾನದಲ್ಲಿದ್ದಾರೆ. ತಿಲಕ್ ವರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ವಿಶ್ವಕಪ್ ಗೂ ಮುನ್ನ ಸೂರ್ಯನಿಗೆ ಕಂ ಬ್ಯಾಕ್ ಮಾಡೋಕೆ ನ್ಯೂಜಿಲೆಂಡ್ ಸಿರೀಸ್​ನಲ್ಲಿ ಚಾನ್ಸ್ ಇದೆ.

ನ್ಯೂಜಿಲೆಂಡ್ ವಿರುದ್ಧ ಅಬ್ಬರಿಸಲೇಬೇಕಿದೆ ಸೂರ್ಯ!

ಈಗ ಆಲ್ರೆಡಿ ಕಳಪೆ ಫಾರ್ಮ್ ಕಾರಣದಿಂದಲೇ ವೈಸ್ ಕ್ಯಾಪ್ಟನ್ ಆಗಿದ್ದ ಶುಭ್​ಮನ್ ಗಿಲ್​ರನ್ನ ಟಿ-20 ವಿಶ್ವಕಪ್ ತಂಡದಿಂದಲೇ ಗೇಟ್ ಪಾಸ್ ಕೊಟ್ಟಾಗಿದೆ. 2024ರ ತಂಡದಿಂದಲೂ ಹೊರಬಿದ್ದಿದ್ದ ಗಿಲ್ ಈಗ 2026ರ ಟೂರ್ನಿಯನ್ನೂ ಮಿಸ್ ಮಾಡಿಕೊಳ್ತಿದ್ದಾರೆ. ಆದ್ರೆ ಕ್ಯಾಪ್ಟನ್ ಅನ್ನೋ ಕಾರಣಕ್ಕೋ ಅಥವಾ ಲಾಸ್ಟ್ ಮೂಮೆಂಟ್​ನಲ್ಲಿ ನಾಯಕತ್ವ ಬದಲಾವಣೆ ಬೇಡ ಅನ್ನೋ ಕಾರಣಕ್ಕೋ ಅಥವಾ ಸೂರ್ಯನ ಕ್ಯಾಪ್ಟನ್ಸಿಯಲ್ಲಿ ತಂಡದ ಪ್ರದರ್ಶನ ಚೆನ್ನಾಗಿದೆ ಅನ್ನೋ ಕಾರಣಕ್ಕೋ ಬಿಸಿಸಿಐ ಸೂರ್ಯನನ್ನ ಉಳಿಸಿಕೊಂಡಿದೆ. ಹೀಗಾಗಿ ಸೂರ್ಯನ ಬ್ಯಾಟಿಂಗ್​ನಲ್ಲಿ ಬಿಗ್ ಸ್ಕೋರ್​ ಬರ್ಲೇಬೇಕಿದೆ. ಟಿ-20 ವಿಶ್ವಕಪ್​ಗೂ ಮುನ್ನ ಭಾರತ ಜನವರಿ ಎಂಡ್​ನಲ್ಲಿ 5 ಪಂದ್ಯಗಳ ಟಿ-20ಐ ಸರಣಿ ಆಡಲಿದೆ. ಈ ಸರಣಿಯಲ್ಲಾದ್ರೂ ಸೂರ್ಯ ಮತ್ತೊಮ್ಮೆ ಪ್ರಕಾಶಮಾನವಾಗಿ ಉದಯಿಸಲೇಬೇಕಿದೆ. ಇಲ್ಲದೇ ಇದ್ರೆ ಅನಿವಾರ್ಯವಾಗಿ ಟಿ-20 ವಿಶ್ವಕಪ್ ಆಡಿಸಿದ್ರೂ ಆ ನಂತ್ರ ಸೂರ್ಯ ಶಾಶ್ವತವಾಗಿ ಮುಳುಗಿದ್ರೂ ಅಚ್ಚರಿ ಇಲ್ಲ. ಯಾಕಂದ್ರೆ 2025ರ ಪೂರ್ತಿ ಸೂರ್ಯ ಒಂದೇ ಒಂದು ಅರ್ಧಶತಕ ಗಳಿಸಿಲ್ಲ. ಈ ವರ್ಷ 21 ಪಂದ್ಯಗಳ ಪೈಕಿ 19 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಮೂರು ಸಲ ನಾಟ್-ಔಟ್‌ ಆಗಿ ಉಳಿದಿದ್ದಾರೆ. ಅದ್ರಲ್ಲಿ ಕೇವಲ 218 ರನ್‌ಗಳನ್ನು ಗಳಿಸಿದ್ದಾರೆ, ವೈಯಕ್ತಿಕ ಅತ್ಯುತ್ತಮ ಸ್ಕೋರ್ ಅಂದ್ರೆ ಅದು 47 ರನ್​ ಗಳಿಸಿ ನಾಟ್-ಔಟ್ ಆಗಿದ್ದು. ಌಂಡ್ ಬ್ಯಾಟಿಂಗ್ ಆವರೇಜ್  13.62 ಇದ್ರೆ ಸ್ಟ್ರೈಕ್ ರೇಟ್ 123.16 ಇದೆ. ಹೀಗಾಗಿ 2026ನೇ ವರ್ಷ ಸೂರ್ಯನ ಭವಿಷ್ಯ ನಿರ್ಧಾರ ಮಾಡಲಿದೆ.

Shantha Kumari