ದೇವಿಶಾ ಡ್ಯಾನ್ಸ್ ನೋಡಿ ಸ್ಕೈ ಎದೆಯಲ್ಲೂ ಪ್ರೀತಿ ಥಕಥೈ! – ಬಲು ರೊಮ್ಯಾಂಟಿಕ್ ಸೂರ್ಯ ಕುಮಾರ್ ಯಾದವ್ ಲವ್ ಲೈಫ್ !
ಹೀರೋಯಿನ್‌ಮಾಡುವ ಡ್ಯಾನ್ಸ್ ನೋಡ್ತಾ ನೋಡ್ತಾ ಹೀರೋ ಲವ್ವಲ್ಲಿ ಬೀಳುವ ಕತೆ ಅನೇಕ ಸಿನಿಮಾಗಳಲ್ಲಿದೆ.. ಹಾಗೆ ಯಾವುದೇ ಸಿನಿಮಾ ಕತೆಗೂ ಕಮ್ಮಿಯಿಲ್ಲ SKY ಖ್ಯಾತಿಯ ಸೂರ್ಯಕುಮಾರ್ ಯಾದವ್ ಪ್ರೇಮಕತೆ… ಸ್ಕೈ- ದೇವಿಶಾ ಜೋಡಿಯಾಗಿದ್ದು ಹೇಗೆ? ಅವರಿಬ್ಬರ ಆಸಕ್ತಿಗಳೇನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮತ್ತೆ ಬರ್ತಿದ್ದಾನೆ ಮುಸ್ತಾಫಾ! – ದುನಿಯಾ ವಿಜಿಗೆ ಶಿಶಿರ್ ಸಾಥ್!
ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಒಂದೇ ಕಾಲೇಜಿನಲ್ಲಿ ಓದಿದವರು. ಇವರಿಬ್ಬರ ಪ್ರೇಮಕತೆ ಶುರುವಾಗಿದ್ದು ಕೂಡ ಕಾಲೇಜು ಕಾರಿಡಾರಿನಲ್ಲಿ.. ದೇವಿಶಾ ಹುಟ್ಟಿದ್ದು ಮುಂಬೈನಲ್ಲಾದರೂ, ಅವರ ತಂದೆ-ತಾಯಿ ಕರಾವಳಿ ಮೂಲದವರು. ಇವರ ಮನೆಭಾಷೆ ಕೂಡಾ ತುಳು. ತಂದೆ ತಾಯಿ ಮುಂಬೈನಲ್ಲೇ ನೆಲೆಸಿರುವುದರಿಂದ ದೇವಿಶಾ ಹುಟ್ಟಿದ್ದು, ವಿದ್ಯಾಭ್ಯಾಸ ಪಡೆದಿದ್ದು ಎಲ್ಲವೂ ಮುಂಬೈನಲ್ಲೇ.
ದೇವಿಶಾ ಮುಂಬೈನ ಪೊದ್ದಾರ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಎಕನಾಮಿಕ್ಸ್‌ನಿಂದ ಪದವಿ ಪಡೆದ್ದಾರೆ. ಇದೇ ಕಾಲೇಜಿನಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಭೇಟಿಯಾಗಿದ್ದರು. ಅದರಲ್ಲೂಕಾಲೇಜಿನ ಕಾರ್ಯಕ್ರಮವೊಂದರಲ್ಲಿ ದೇವಿಶಾ ಮಾಡಿದ ನೃತ್ಯ ನೋಡಿದ ಸ್ಕೈ ಎದೆಯಲ್ಲೂ ಪ್ರೀತಿ ಥಕಥೈ ಅಂತಾ ಕುಣಿಯಲು ಶುರುವಾಗಿತ್ತು.. ಹಾಗೆ ದೇವಿಶಾ ಹಿಂದೆ ಬಿದ್ದ ಸೂರ್ಯ, ಪರಿಚಯ ಮಾಡ್ಕೊಂಡ್ರು.. ಅಲ್ಲಿಂದ ಶುರುವಾದ ಗೆಳೆತನ, ಹೋಗ್ತಾ ಹೋಗ್ತಾ ಪ್ರೀತಿಗೆ ತಿರುಗಿತು. ನಂತರ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸೂರ್ಯಕುಮಾರ್ ಅವರ ಮದುವೆಯಲ್ಲಿ ಅವರ ಆಪ್ತರು ಮತ್ತು ಸಂಬಂಧಿಕರು ಮಾತ್ರ ಭಾಗವಹಿಸಿದ್ದರು.
ಸೂರ್ಯಕುಮಾರ್ ಅವರ ಬ್ಯಾಟಿಂಗ್‌ಗೆ ದೇವಿಶಾ ಫಿದಾ ಆದ್ರೆ, ದೇವಿಶಾಳ ನೃತ್ಯ ನೋಡಿ ಸೂರ್ಯಕುಮಾರ್ ಕ್ಲೀನ್ ಬೋಲ್ಡ್ ಆಗಿದ್ದರು. ಇದು ಇವರ ಪ್ರೀತಿಗೆ ಅಡಿಪಾಯವಾಗಿತ್ತು. ದೇವಿಶಾ ಜೊತೆಗೆ ಪ್ರೀತಿಗೆ ಬಿದ್ದ ಮೇಲೆ ಮೈದಾನದಲ್ಲಿ ಸ್ಕೈಬ್ಯಾಟಿಂಗ್ ಅಬ್ಬರ ಮತ್ತಷ್ಟು ಜಾಸ್ತಿಯಾಗಿತ್ತು..ಈಗ ದೇವಿಶಾ ನೃತ್ಯ ಶಿಕ್ಷಕಿ. ಸಮಾಜಸೇವೆಯಲ್ಲೂ ಆಸಕ್ತಿ ಹೊಂದಿರುವ ಇವರು ಕೆಲವು ಎನ್ ಜಿಒಗಳಲ್ಲೂ ಕೆಲಸ ಮಾಡಿದ್ದಾರೆ. ದೇವಿಶಾ ತಮ್ಮ ಬೆನ್ನ ಮೇಲೆ ಸೂರ್ಯಕುಮಾರ್ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ 360 ಡಿಗ್ರಿ ಶಾಟ್ ಗಳ ಮೂಲಕ ಫೇಮಸ್ ಆಗಿದ್ದಾರೆ.. ಬ್ಯಾಟರ್ ಆಗಿದ್ದಾರೆ.