ಸೋಲಿಲ್ಲದ ಸೂರ್ಯನಿಗೆ AUS ಸವಾಲ್ – ODI ಸೋಲು.. T-20I ಸರಣಿನೂ ಕಷ್ಟ?
ಕ್ಯಾಪ್ಟನ್ ಆದ್ಮೇಲೆ SKY ಮಂಕಾಗಿದ್ದೇಕೆ?

ಸೋಲಿಲ್ಲದ ಸೂರ್ಯನಿಗೆ AUS ಸವಾಲ್ – ODI ಸೋಲು.. T-20I ಸರಣಿನೂ ಕಷ್ಟ?ಕ್ಯಾಪ್ಟನ್ ಆದ್ಮೇಲೆ SKY ಮಂಕಾಗಿದ್ದೇಕೆ?

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋತಿರೋ ಭಾರತಕ್ಕೆ ನೆಕ್ಸ್​ಟ್ ಚಾಲೆಂಜ್ ಇರೋದು ಟಿ-20ಐ ಸರಣಿ.. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ-20ಐ ಸರಣಿ ಅಕ್ಬೋಬರ್ 29 ಅಂದ್ರೆ ನೆಕ್ಸ್​ಟ್ ಗುರುವಾರದಿಂದಲೇ ಶುರುವಾಗ್ತಿದೆ. ಏಷ್ಯಾಕಪ್​ಗೆ ಸೆಲೆಕ್ಟ್ ಆಗಿದ್ದ ಆಟಗಾರರೇ ಈ ಸರಣಿಗೂ ಸೆಲೆಕ್ಟ್ ಆಗಿದ್ದಾರೆ.. ಸೂರ್ಯಕುಮಾರ್ ಯಾದವ್ ಟಿ-20ಐ ಕ್ಯಾಪ್ಟನ್ ಆದ್ಮೇಲೆ ಒಂದೇ ಒಂದು ಸರಣಿನೂ ಸೋತಿಲ್ಲ.

ಇದನ್ನೂ ಓದಿ : ಬೌಲಿಂಗ್ ನಲ್ಲಿ ಮಿಂಚಿದ ಟೀಂ ಇಂಡಿಯಾ – ಆಸ್ಟ್ರೇಲಿಯಾ ವಿರುದ್ಧ ಕೊನೇ ಮ್ಯಾಚ್ ಆದ್ರೂ ಗೆಲ್ತಾರಾ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಅಕ್ಟೋಬರ್ 29 ರಂದು ಕ್ಯಾನ್‌ಬೆರಾದಲ್ಲಿ ಆರಂಭವಾಗಲಿದೆ. ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯಲ್ಲಿ ಸರಣಿ ನಡೆಯಲಿದ್ದು ಅಕ್ಟೋಬರ್ 29, 31, ನವೆಂಬರ್ 2, 6, ಮತ್ತು 8 ರಂದು ಪಂದ್ಯಗಳು ನಡೆಯಲಿವೆ. 2026ರ ಟಿ-20 ವಿಶ್ವಕಪ್​ಗೂ ಮುನ್ನ ಈ ಸರಣಿ ಭಾರತಕ್ಕೆ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ. ಏಷ್ಯಾಕಪ್​ನಲ್ಲಿ ಅಜೇಯವಾಗಿ ಚಾಂಪಿಯನ್ ಆಗಿರೋ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲ್ಲೋದು ಸುಲಭದ ಮಾತಲ್ಲ. ಅದ್ರಲ್ಲೂ ನಾಯಕ ಸೂರ್ಯಕುಮಾರ್ ಯಾದವ್​ಗೆ ಬಿಗ್ ಚಾಲೆಂಜ್ ಇದೆ.

ಆಸ್ಟ್ರೇಲಿಯಾದಲ್ಲಿ ಕ್ಯಾಪ್ಟನ್ ಆಗಿ ಸೂರ್ಯನಿಗೆ ಮೊದಲ ಸರಣಿ!

2024ರ ಟಿ-20 ವಿಶ್ವಕಪ್ ಆದ್ಮೇಲೆ ರೋಹಿತ್ ಶರ್ಮಾ ಚುಟುಕು ಮಾದರಿಗೆ ಗುಡ್ ಬೈ ಹೇಳಿದ್ರು. ಈ ವೇಳೆ ಸೂರ್ಯಕುಮಾರ್​ಗೆ ನಾಯಕತ್ವ ನೀಡಲಾಯ್ತು. ಅಲ್ಲಿಂದ ಈಚೆಗೆ ಸೂರ್ಯಕುಮಾರ್ ಕ್ಯಾಪ್ಟನ್ಸಿಯಲ್ಲಿ ಭಾರತ 29 ಪಂದ್ಯಗಳನ್ನ ಆಡಿದೆ ಇದ್ರಲ್ಲಿ 25 ಪಂದ್ಯಗಳನ್ನ ಗೆದ್ದಿದ್ರೆ 4 ಪಂದ್ಯಗಳಲ್ಲಷ್ಟೇ ಸೋಲನ್ನ ಕಂಡಿದ್ದಾರೆ. 86.21 ಗೆಲುವಿನ ಪರ್ಸಂಟೇಜ್ ಇದೆ. ಸೂರ್ಯಕುಮಾರ್ ಕ್ಯಾಪ್ಟನ್ಸಿಯಲ್ಲಿ ಮೊದಲಿಗೆ ಭಾರತ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಸರಣಿ ಆಡಿದ್ದು ಮೂರರಲ್ಲೂ ಗೆಲುವು ಸಾಧಿಸಿದೆ. ಆ ಬಳಿಕ ಬಾಂಗ್ಲಾ ವಿರುದ್ಧ ಮೂರಕ್ಕೆ ಮೂರೂ ಪಂದ್ಯಗಳನ್ನೂ ಗೆದ್ಕೊಂಡಿತ್ತು. ದೆನ್ ಸೌತ್ ಆಫ್ರಿಕಾ ವಿರುದ್ಧ 4 ಪಂದ್ಯಗಳ ಸರಣಿಯಲ್ಲಿ ಮೂರು ಮ್ಯಾಚ್​ಗಳನ್ನ ವಿನ್ ಆಗಿತ್ತು. ಹಾಗೇ ಇದೇ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ 5 ಪಂದ್ಯಗಳ ಸರಣಿಯಲ್ಲಿ 4 ಪಂದ್ಯಗಳನ್ನ ಗೆದ್ದು ಸರಣಿ ಕೈವಶ ಮಾಡ್ಕೊಂಡಿತ್ತು. ಬಟ್ ಸೂರ್ಯ ಕ್ಯಾಪ್ಟನ್ ಆದ್ಮೇಲೆ ಭಾರತ ಆಸ್ಟ್ರೇಲಿಯಾ ವಿರುದ್ಧ ಒಂದೇ ಒಂದು ಟಿ-20ಐ ಪಂದ್ಯ ಆಡಿಲ್ಲ. ಅಲ್ದೇ ಸೂರ್ಯನಿಗೂ ಕೂಡ ಇದು ನಾಯಕನಾಗಿ ಮೊದಲ ಆಸ್ಟ್ರೇಲಿಯಾ ಸರಣಿ. ಇನ್ನು ಸೂರ್ಯ ಕ್ಯಾಪ್ಟನ್ ಆಗಿ ಒಂದೇ ಒಂದು ಸರಣಿ ಸೋಲದೇ ಇದ್ರೂ ಬ್ಯಾಟಿಂಗ್​ನಲ್ಲೂ ಸೌಂಡ್ ಮಾಡಿಲ್ಲ. ನಾಯಕತ್ವಕ್ಕೂ ಮುನ್ನ ಭಾರತದ ಪರ 43ಕ್ಕೂ ಹೆಚ್ಚಿನ ಸರಾಸರಿಯಲ್ಲಿ ರನ್ಸ್ ಕಲೆ ಹಾಕಿದ್ರು. ಬಟ್ ಕ್ಯಾಪ್ಟನ್ ಆದ್ಮೇಲೆ 18+ ಆವರೇಜ್​ನಲ್ಲಿ ರನ್ಸ್ ಬಂದಿದೆ. ಅಲ್ದೇ ಕಳೆದ ಏಷ್ಯಾಕಪ್​ನಲ್ಲೂ ಶೈನ್ ಆಗಿಲ್ಲ. 6 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದ ಸೂರ್ಯ ಒಟ್ಟಾರೆಯಾಗಿ ಸ್ಕೋರ್ ಮಾಡಿದ್ದೇ 71 ರನ್ಸ್. ಅದ್ರಲ್ಲೂ 47 ರನ್ ಗಳಿಸಿ ಅಜೇಯರಾಗಿ ಉಳಿದಿದ್ದೇ ಹೈಯೆಸ್ಟ್ ಸ್ಕೋರ್ ಆಗಿತ್ತು. ಹೀಗಾಗಿ ನಾಯಕನಾಗಿ ಸೂರ್ಯನಿಗೆ ಈ ಸರಣಿ ಅಷ್ಟು ಸುಲಭ ಇಲ್ಲ. ಹೀಗಾಗಿ ಸೂರ್ಯನಿಗೂ ಬಿಗ್ ಚಾಲೆಂಜಸ್ ಇದೆ. ಆಲ್ರೆಡಿ ಏಕದಿನ ಸರಣಿ ಗೆದ್ದಿರೋ ಆಸ್ಟ್ರೇಲಿಯಾ ತವರಿನಲ್ಲಿ ಮತ್ತೆ ಡಾಮಿನೇಟ್ ಮಾಡೋಕೆ ಕಾಯ್ತಾ ಇದೆ.

ಸದ್ಯ ಭಾರತ ಐಸಿಸಿ ಟಿ-20 ಐ ಫಾರ್ಮೆಟ್ ಹಾಲಿ ಚಾಂಪಿಯನ್. ಹಾಗೇ ಜಗತ್ತಿನ ನಂಬರ್ 1 ಟೀಂ. ಕಳೆದ 16 ತಿಂಗಳಲ್ಲಿ ಒಂದೇ ಒಂದು ಸರಣಿ ಸೋತಿಲ್ಲ. ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳನ್ನೂ ಸೋತಿಲ್ಲ. ಬಟ್ ಆಸ್ಟ್ರೇಲಿಯಾ ಸರಣಿಯೇ ಭಾರತಕ್ಕೆ ಅಗ್ನಿಪರೀಕ್ಷೆ. ಏಕದಿನ ಮಾದರಿಯ ಸೋಲಿನ ಸೇಡನ್ನ ಟಿ-20ಐನಲ್ಲಿ ತೀರಿಸಿಕೊಳ್ಬೇಕಿದೆ.

Shantha Kumari