ಹೆಂಡತಿಯ ಹುಟ್ಟುಹಬ್ಬಕ್ಕೆ ಸೂರ್ಯಕುಮಾರನ ಪ್ರೀತಿಯ ಸಂದೇಶ – ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆ
‘ನೀನು ನನ್ನ ಹೆಂಡತಿಯಾಗಿ ಸಿಕ್ಕಿದ್ದು ನನ್ನ ಅದೃಷ್ಟ’- ಪತ್ನಿಗೆ ಶುಭಕೋರಿದ ಸೂರ್ಯಕುಮಾರ್

ಹೆಂಡತಿಯ ಹುಟ್ಟುಹಬ್ಬಕ್ಕೆ ಸೂರ್ಯಕುಮಾರನ ಪ್ರೀತಿಯ ಸಂದೇಶ – ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆ‘ನೀನು ನನ್ನ ಹೆಂಡತಿಯಾಗಿ ಸಿಕ್ಕಿದ್ದು ನನ್ನ ಅದೃಷ್ಟ’- ಪತ್ನಿಗೆ ಶುಭಕೋರಿದ ಸೂರ್ಯಕುಮಾರ್

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ ನಲ್ಲಿ ಟೀಮ್ ಇಂಡಿಯಾದ ಹೀರೋ ಆಗಿ ಮಿಂಚಿದ ಸೂರ್ಯಕುಮಾರ್ ಯಾದವ್ ತನ್ನ ಮುದ್ದಿನ ಹೆಂಡತಿಯ ಜನ್ಮ ದಿನಕ್ಕೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.  ಸೂರ್ಯಕುಮಾರ್ ತನ್ನ ಪತ್ನಿ ದೇವಿಶಾ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ವಿಶೇಷ ಸಂದೇಶ ಬರೆದು ಶುಭ ಹಾರೈಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ:  ಹಾಲಿ ಕೋಚ್‌ಗೆ ಮಾತಿನಲ್ಲೇ ಚುಚ್ಚಿದ ಮಾಜಿ ಕೋಚ್ -ವಿಶ್ರಾಂತಿ ಬಗ್ಗೆ ಶಾಸ್ತ್ರಿ ಪಾಠ

ಅಂತಾರಾಷ್ಟ್ರೀಯ ಟಿ20 ಱಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸೂರ್ಯಕುಮಾರ್ ಈಗ ಕಿವೀಸ್ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಸಂದೇಶ ಬರೆದು ಶುಭ ಹಾರೈಸಿದ್ದಾರೆ. ಪತ್ನಿಯೊಂದಿಗಿರುವ ಫೋಟೋವನ್ನು ಹಂಚಿಕೊಂಡಿರುವ ಸೂರ್ಯ, ‘ನನ್ನ ಸುಂದರ ಹೆಂಡತಿಗೆ ಜನ್ಮದಿನದ ಶುಭಾಶಯಗಳು. ನೀನೇ ನನ್ನ ಪ್ರಪಂಚ, ನೀವು ಇಲ್ಲದೆ ನಾನು ಏನು ಮಾಡುತ್ತೇನೆ ಎಂದು ನನಗೆ ನಿಜವಾಗಿಯೂ ತಿಳಿದಿಲ್ಲ. ನೀನು ನನ್ನ ಹೆಂಡತಿಯಾಗಿ ಸಿಕ್ಕಿದ್ದು ನನ್ನ ಅದೃಷ್ಟ’ ಎಂದು ಪತ್ನಿಗೆ ಪ್ರೀತಿಯಿಂದ ವಿಶೇಷವಾಗಿ ಶುಭಕೋರಿದ್ದಾರೆ.

ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ನೋಡಿದ ಕ್ರಿಕೆಟ್ ಅಭಿಮಾನಿಗಳು ಮತ್ತು ನೆಟ್ಟಿಗರು ದೇವಿಶಾ ಶೆಟ್ಟಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ. ಜೊತೆಗೆ ನೆಚ್ಚಿನ ಕ್ರಿಕೆಟಿಗ ಸೂರ್ಯಕುಮಾರ್ ಅವರ ಬಗ್ಗೆ ಅಭಿಮಾನಿಗಳು  ಮೆಚ್ಚುಗೆಯ ಕಮೆಂಟ್ ಹಾಕುತ್ತಿದ್ದಾರೆ.

ಸೂರ್ಯಕುಮಾರ್-ದೇವಿಶಾ ಶೆಟ್ಟಿ ಅವರದ್ದು ಪ್ರೇಮ ವಿವಾಹ. 2012ರಲ್ಲಿ ಮುಂಬೈನ ಕಾಲೇಜೊಂದರಲ್ಲಿ ಓದುತ್ತಿದ್ದಾಗ ಸೂರ್ಯ ಮೊದಲ ಬಾರಿಗೆ ದೇವಿಶಾರನ್ನು ಭೇಟಿಯಾಗಿದ್ದರು. ಐದು ವರ್ಷಗಳ ಪ್ರೀತಿಯ ನಂತರ ಈ ಜೋಡಿ, 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿತ್ತು. ಸೂರ್ಯಕುಮಾರ್  ಪತ್ನಿಯ ಹೆಸರನ್ನು ಹೃದಯದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇವರಿಬ್ಬರ ಪ್ರೀತಿ ಹೀಗೆ ಇರಲಿ ಅನ್ನೋದು ಅಭಿಮಾನಿಗಳ ಆಶಯ.

suddiyaana