ಅಗ್ರಸ್ಥಾನಕ್ಕೇರಿದ ಸೂರ್ಯಕುಮಾರ್ ಗೆ ಸಮಾನ ಯಾರೂ ಇಲ್ಲ..!
ಅಗ್ರಸ್ಥಾನದಲ್ಲಿ ಪ್ರಜ್ವಲಿಸಿದ ಸೂರ್ಯಕುಮಾರ್

ಅಗ್ರಸ್ಥಾನಕ್ಕೇರಿದ ಸೂರ್ಯಕುಮಾರ್ ಗೆ ಸಮಾನ ಯಾರೂ ಇಲ್ಲ..!ಅಗ್ರಸ್ಥಾನದಲ್ಲಿ ಪ್ರಜ್ವಲಿಸಿದ ಸೂರ್ಯಕುಮಾರ್

ಟಿ20 ವಿಶ್ವಕಪ್‌ನಲ್ಲಿ ಪ್ರಜ್ವಲಿಸಿದ ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್, ಐಸಿಸಿ ಟಿ20 ಱಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್, ಟಿ20 ವಿಶ್ವಕಪ್‌ನಲ್ಲಿ  ಅದ್ಭುತ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ:  ಮುಂಬೈ ಇಂಡಿಯನ್ಸ್ ಕೈಬಿಟ್ಟಿದ್ದಕ್ಕೆ ಐಪಿಎಲ್‌ಗೆ ಗುಡ್‌ಬೈ

ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ಇತ್ತೀಚಿನ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ್ದರು. ನಂಬರ್ ಒನ್ ರೇಸ್​ನಲ್ಲಿ ಈಗಲೂ ಸೂರ್ಯಕುಮಾರ್‌ ಅವರೇ ಮಿಂಚುತ್ತಿದ್ದಾರೆ. ಟಿ20 ವಿಶ್ವಕಪ್‌ನ ಸೂಪರ್ 12ನೇ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟಿ20 ಕ್ರಿಕೆಟ್​ನ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿ ಸೂರ್ಯಕುಮಾರ್ ಕ್ರೀಡಾಭಿಮಾನಿಗಳ ಮನಗೆದ್ದಿದ್ದರು. ಇಡೀ ಟೂರ್ನಿಯಲ್ಲಿ ಆಡಿದ 5 ಇನ್ನಿಂಗ್ಸ್‌ಗಳಲ್ಲಿ ಸೂರ್ಯ ಭರ್ಜರಿ 3 ಅರ್ಧಶತಕಗಳನ್ನು ಬಾರಿಸಿದ್ದರು. ಜೊತೆಗೆ ತಮ್ಮ ವೃತ್ತಿಜೀವನದ ಅತ್ಯುತ್ತಮ 869 ರೇಟಿಂಗ್ ಅಂಕಗಳನ್ನು ಗಳಿಸಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಕೇವಲ 14 ರನ್‌ಗಳಿಗೆ ಔಟಾದ ಕಾರಣ, 869 ಅಂಗಳಲ್ಲಿ 10 ಅಂಕ ಕಡಿತಗೊಂಡಿದೆ. ಆದಾಗ್ಯೂ, ಈ ಕುಸಿತದ ನಂತರವೂ ಸೂರ್ಯ ನಂಬರ್ ಸ್ಥಾನದಲ್ಲಿ ಮುಂದುವರೆದಿದ್ದಾರೆ.

suddiyaana