ಕೆ.ಎಲ್ ರಾಹುಲ್ ರೀತಿ ಮಾಡೋಕೆ ಹೋಗಿ ಯಡವಟ್ಟು – ಸೂರ್ಯಕುಮಾರ್ಗೆ ಕೈ ಕೊಟ್ಟ ಕನ್ನಡಿಗನ ಟ್ರಿಕ್..!

ಕನ್ನಡಿಗ ಕೆ.ಎಲ್ ರಾಹುಲ್ ಸೌತ್ ಆಫ್ರಿಕಾ ವಿರುದ್ಧ ಕೊನೆಗೂ ಟಾಸ್ ವಿನ್ ಆಗಿದ್ದರು. ಟಾಸ್ ಗೆಲುವಿನ ಜೊತೆ ಸರಣಿ ಕೂಡಾ ಗೆದ್ದ ಖುಷಿಯಲ್ಲಿದ್ದರು. ಸತತ 20 ಬಾರಿ ಟಾಸ್ ಸೋತ ಟೀಮ್ ಇಂಡಿಯಾ ಶನಿವಾರ ನಡೆದ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿದ್ದು ಕೆ.ಎಲ್ ರಾಹುಲ್ ಅವರ ಟ್ರಿಕ್ನಿಂದ ಅನ್ನೋ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಮಂಗಳವಾರ ನಡೆದ ಮೊದಲ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕೂಡಾ ಇದೇ ಟ್ರಿಕ್ ಮಾಡಿದ್ದಾರೆ. ಆದರೆ, ಕೆ.ಎಲ್ ಕೈ ಹಿಡಿದ ಟಾಸ್ ಸೂರ್ಯನಿಗೆ ಕೈ ಕೊಟ್ಟಿದೆ.
ಇದನ್ನೂ ಓದಿ:ಪಾಂಡ್ಯ FIRE.. ಬೌಲರ್ಸ್ POWER – ಫಸ್ಟ್ ಮ್ಯಾಚಲ್ಲೇ ಪಲ್ಟಿ ಹೊಡೆದ SA
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 (T20) ಸರಣಿಯ ಮೊದಲ ಪಂದ್ಯ ಮಂಗಳವಾರ ನಡೆದಿದೆ. ಈಗ ಇಬ್ಬನಿ ಬೀಳುವುದು ಜಾಸ್ತಿಯಾಗಿರುವುದರಿಂದ ಟಾಸ್ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ಆಗುತ್ತಿದೆ. ಹೀಗಾಗಿ ಟಾಸ್ ಗೆಲ್ಲಲು ಟೀಮ್ ಇಂಡಿಯಾ ಸರ್ಕಸ್ ಮಾಡುತ್ತಿದೆ. ಸತತ 20 ಏಕದಿನ ಪಂದ್ಯಗಳ ನಂತರ ವಿಶಾಖಪಟ್ಟಣಂನಲ್ಲಿ ಕೆಎಲ್ ರಾಹುಲ್ ನೇತೃತ್ವದಲ್ಲಿ ಭಾರತ ಟಾಸ್ ಗೆದ್ದಿತ್ತು. ಈಗ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಭಾರತ ಟಿ20 ತಂಡ ಟಾಸ್ ಸೋತಿದೆ. ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಒಂದು ದಿನದ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಟಾಸ್ ಗೆಲ್ಲಲು ಕೆಎಲ್ ರಾಹುಲ್ ಅವರ ತಂತ್ರಗಳನ್ನು ಅಳವಡಿಸಿಕೊಳ್ಳುವುದಾಗಿ ಸ್ಪಷ್ಟಪಡಿಸಿದರು. ಆದರೆ, ಸೂರ್ಯಕುಮಾರ್ ಯಾದವ್ಗೆ ಕೆಎಲ್ ರಾಹುಲ್ ಟ್ರಿಕ್ ಕೈ ಕೊಟ್ಟಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಎಡಗೈನಲ್ಲಿ ನಾಣ್ಯವನ್ನು ಚಿಮ್ಮಿಸುವ ಮೂಲಕ ಟಾಸ್ ಗೆದ್ದಿದ್ದರು. ಇದೇ ಟ್ರಿಕ್ ಮೂಲಕ ಸೂರ್ಯ ಟಾಸ್ ಗೆಲ್ಲಲು ಮುಂದಾಗಿದ್ದರು. ಆದರೆ, ಸೂರ್ಯ ಈ ಟ್ರಿಕ್ ಬಳಸಿ ಟಾಸ್ ಗೆಲ್ಲುವಲ್ಲಿ ವಿಫಲವಾಗಿದ್ದಾರೆ.

ನೋಡಿರಿ

