ಮುಂಬೈ ತಂಡಕ್ಕೆ ಕೈ ಕೊಟ್ಟ ಸೂರ್ಯಕುಮಾರ್ – ಹಾರ್ದಿಕ್-ಸೂರ್ಯ ಇಲ್ಲದಿದ್ದರೆ ನಾಯಕ ಯಾರು?

ಮುಂಬೈ ತಂಡಕ್ಕೆ ಕೈ ಕೊಟ್ಟ ಸೂರ್ಯಕುಮಾರ್ – ಹಾರ್ದಿಕ್-ಸೂರ್ಯ ಇಲ್ಲದಿದ್ದರೆ ನಾಯಕ ಯಾರು?

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಇದು ಸಂಕಷ್ಟ ಕಾಲ. ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡ ಇದೀಗ ಗೆಲುವು ಕಾಣಲು ಶುರುಮಾಡಿದೆ. ಇದರ ಮಧ್ಯೆ ಪ್ರಮುಖ ಆಟಗಾರರು ತಂಡದಿಂದ ಹೊರಗುಳಿಯುತ್ತಿದ್ದಾರೆ.

ಇದನ್ನೂ ಓದಿ:ನಂಬರ್ 1 ಪಟ್ಟಕ್ಕೇರಿದ SRH – ಶ್ರೇಯಸ್ ಪಡೆಗೆ ಹ್ಯಾಟ್ರಿಕ್ ಸೋಲು

ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಇಂಜುರಿಯಿಂದ ಚೇತರಿಕೆ ಕಾಣುತ್ತಿದ್ದಾರೆ. ಲಕ್ನೋ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಕಣಕ್ಕಿಳಿದಿರಲಿಲ್ಲ. ಇದೀಗ ಮುಂದಿನ ಪಂದ್ಯದಲ್ಲೂ ಹಾರ್ದಿಕ್ ಪಾಂಡ್ಯ ಆಡುವುದು ಡೌಟ್ ಎಂದು ಹೇಳಲಾಗುತ್ತಿದೆ. ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನೆಡೆಸಿದ್ದು ಸೂರ್ಯಕುಮಾರ್ ಯಾದವ್. ಸೂರ್ಯನ ನಾಯಕತ್ವದಲ್ಲಿ ಮುಂಬೈ ತಂಡ ಗೆಲುವು ದಾಖಲಿಸಿದೆ. ಹೀಗಾಗಿ ಸೂರ್ಯನೇ ಕ್ಯಾಪ್ಟನ್ ಆಗೋದು ಬೆಸ್ಟ್ ಅಂತಾ ಫ್ಯಾನ್ಸ್ ಹೇಳಿದ್ದರು. ಇದೀಗ ಮುಂಬೈ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ರಾಯ್‌ಪುರದಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಆಡುತ್ತಿಲ್ಲ.

ಸೂರ್ಯಕುಮಾರ್ ಅವರ ಪತ್ನಿ ದೇವಿಶಾ ಶೆಟ್ಟಿ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಸೂರ್ಯಕುಮಾರ್ ತಮ್ಮ ಕುಟುಂಬದೊಂದಿಗೆ ಈ ಸಂತೋಷದ ಸಮಯವನ್ನು ಕಳೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಕಾರಣಕ್ಕಾಗಿ ಅವರು ಮೇ 10 ರಂದು ಬೆಂಗಳೂರು ವಿರುದ್ಧದ ಮಹತ್ವದ ಪಂದ್ಯಕ್ಕೆ ಲಭ್ಯವಿರುವುದಿಲ್ಲ.

ನಾಯಕ ಮತ್ತು ಉಪನಾಯಕ ಇಬ್ಬರ ಅನುಪಸ್ಥಿತಿಯಲ್ಲಿ, ತಂಡದ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದು ಈಗ ಕುತೂಹಲಕಾರಿಯಾಗಿದೆ. ತಂಡಕ್ಕೆ ಐದು ಬಾರಿ ಟ್ರೋಫಿಯನ್ನು ಗೆದ್ದುಕೊಟ್ಟ ರೋಹಿತ್ ಶರ್ಮಾ ಅವರತ್ತ ಮ್ಯಾನೇಜ್‌ಮೆಂಟ್ ಒಲವು ತೋರುತ್ತಿದೆ ಎಂಬ ವರದಿಗಳಿವೆ. ತಂಡವು ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವುದರಿಂದ, ಅನುಭವಿ ರೋಹಿತ್ ತಂಡವನ್ನು ಮುನ್ನಡೆಸಬಹುದು ಎಂಬ ನಂಬಿಕೆಯಲ್ಲಿದ್ದಾರೆ ಅಭಿಮಾನಿಗಳು.

Sulekha