ಶತಮಾನಕ್ಕೊಬ್ಬ ಕ್ರಿಕೆಟರ್ ಸೂರ್ಯಕುಮಾರ್ – ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ ಬಣ್ಣನೆ

ಶತಮಾನಕ್ಕೊಬ್ಬ ಕ್ರಿಕೆಟರ್ ಸೂರ್ಯಕುಮಾರ್ – ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ ಬಣ್ಣನೆ

ಟೀಂ ಇಂಡಿಯಾದ 360 ಡಿಗ್ರಿ ಬ್ಯಾಟ್ಸ್​ಮನ್ ಸೂರ್ಯಕುಮಾರ್​ ಯಾದವ್​ರನ್ನ ಕ್ರಿಕೆಟ್ ದಂತಕಥೆ ಕಪಿಲ್​​ ದೇವ್ ಕೊಂಡಾಡಿದ್ದಾರೆ. ವಿವಿಯನ್ ರಿಚರ್ಡ್ಸ್​, ಸಚಿನ್, ಪಾಂಟಿಂಗ್ ಮತ್ತು ವಿರಾಟ್​ರಂಥವರ ಆಟ ನೋಡಿದಾಗ ಒಂದಲ್ಲಾ ಒಂದು ದಿನ ಇವರ ಸಾಲಿನಲ್ಲಿ ಇನ್ನೊಬ್ಬ ಬಂದು ನಿಲ್ಲುತ್ತಾನೆ ಅಂತಾ ಅನಿಸ್ತಿತ್ತು. ಇದೀಗ ಸೂರ್ಯ ಕುಮಾರ್​ ಯಾದವ್ ಅವರ ಸಾಲಿಗೆ ಬಂದು ನಿಂತಿದ್ದಾರೆ. ಸ್ಕೈ ಆಟವನ್ನ ಬಣ್ಣಿಸೋಕೆ ಪದಗಳೇ ಸಿಗಲ್ಲ ಅಂತಾ ದಿ ಗ್ರೇಟ್ ಕಪಿಲ್ ದೇವ್ ಹೇಳಿದ್ದಾರೆ.

ಇದನ್ನೂ ಓದಿ:  ಭಾರತ-ಶ್ರೀಲಂಕಾ ನಡುವಿನ ಏಕದಿನ ಸರಣಿ – ಬುಮ್ರಾ ಆಗಿಲ್ಲ ಫಿಟ್, ರಾಹುಲ್ ಆಡೋದು ಡೌಟ್

ಸೂರ್ಯಕುಮಾರ್ ಯಾದವ್ ಲೀಲಾಜಾಲವಾಗಿ ತಮಗೆ ಬೇಕಾದ ದಿಕ್ಕಿನತ್ತ ಸಿಕ್ಸರ್ ಹೊಡೆಯುತ್ತಾರೆ. ತುಂಬಾ ಕಡಿಮೆ ಸಂಖ್ಯೆಯ ಕ್ರಿಕೆಟಿಗರಷ್ಟೇ ಈ ಸಾಮರ್ಥ್ಯ ಹೊಂದಿದ್ದಾರೆ. ಸೂರ್ಯಕುಮಾರ್​ನಂಥವರಂತೂ ಶತಮಾನಕ್ಕೊಬ್ಬ ಕ್ರಿಕೆಟರ್ ಅಂತಾ ಕಪಿಲ್ ದೇವ್ ಬಣ್ಣಿಸಿದ್ದಾರೆ.

suddiyaana