IND Vs SL ಸರಣಿಗೆ ಬಿಗ್ ಶಾಕ್ – ಸೂರ್ಯ & ಪಾಂಡ್ಯ ನಡುವೆ ಬಿರುಕು
ಮೂವರು ಆಟಗಾರರಿಗೆ ಬೆಂಚ್ ಫಿಕ್ಸ್

IND Vs SL ಸರಣಿಗೆ ಬಿಗ್ ಶಾಕ್ – ಸೂರ್ಯ & ಪಾಂಡ್ಯ ನಡುವೆ ಬಿರುಕುಮೂವರು ಆಟಗಾರರಿಗೆ ಬೆಂಚ್ ಫಿಕ್ಸ್

ಶ್ರೀಲಂಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಅನೌನ್ಸ್ ಆದಾಗ ಸಾಕಷ್ಟು ಜನ ಅಚ್ಚರಿಗೊಂಡಿದ್ರು. ಯಾಕಂದ್ರೆ ರೇಸ್ನಲ್ಲೇ ಇಲ್ಲದ ಸೂರ್ಯಕುಮಾರ್ ಯಾದವ್ ಟಿ-20 ಫಾರ್ಮೇಟ್ಗೆ ಕ್ಯಾಪ್ಟನ್ ಆಗಿ ಸೆಲೆಕ್ಟ್ ಆಗಿದ್ರು. ಟಿ-20 ವಿಶ್ವಕಪ್ನಿಂದಲೂ ನಾಯಕತ್ವದ ಜಟಾಪಟಿಯಲ್ಲಿ ಮುಂಚೂಣಿಯಲ್ಲಿದ್ದ ಹಾರ್ದಿಕ್ ಪಾಂಡ್ಯಗೆ ಪಟ್ಟಾಭಿಷೇಕ ಮಿಸ್ ಆಗಿತ್ತು. ಅಷ್ಟೇ ಯಾಕೆ ವೈಸ್ ಕ್ಯಾಪ್ಟನ್ಸಿಯಿಂದಲೂ ಔಟ್ ಆಗಿದ್ರು. ಸೂರ್ಯಕುಮಾರ್ ನಾಯಕನ ಜಬಾಬ್ದಾರಿ ತಗೊಂಡ್ರೆ ಶುಭ್ಮನ್ ಗಿಲ್ಗೆ ಉಪನಾಯಕನ ಪಟ್ಟ ಸಿಕ್ಕಿತ್ತು. ಫೈನಲಿ ಅಚ್ಚರಿಯ ತಂಡದೊಂದಿಗೆ ಲಂಕಾ ನೆಲಕ್ಕೆ ಹಾರಿದ್ದ ಬ್ಲ್ಯೂ ಬಾಯ್ಸ್ ಭರ್ಜರಿ ತಾಲೀಮು ನಡೆಸ್ತಿದ್ದಾರೆ. ಶನಿವಾರದಿಂದ ಆರಂಭ ಆಗಲಿರುವ ಟಿ-20 ಕದನದಲ್ಲಿ ತಮ್ಮ ರಿಯಲ್ ಜಲ್ವಾ ತೋರಿಸೋಕೆ ರೆಡಿಯಾಗ್ತಿದ್ದಾರೆ. ಆದ್ರೆ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದಲ್ಲಿ ಬಿರುಕು ಮೂಡಿದ್ಯಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಹಾಗಾದ್ರೆ ಈ ಬಿರುಕು ಯಾರ ಮಧ್ಯೆ? ಇದ್ರಿಂದ ತಂಡದ ಮೇಲೆ ಎಫೆಕ್ಟ್ ಆಗುತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಲಂಕಾ ಬೇಟೆಗೆ ಬಂತು ಹೊಸ ಜೆರ್ಸಿ – ಡಬಲ್ ಸ್ಟಾರ್ ಜೆರ್ಸಿಯ ಸಂಕೇತವೇನು?

ಶ್ರೀಲಂಕಾದಲ್ಲಿ ನಡೆಯಲಿರುವ ಮೂರು ಟಿ20 ಪಂದ್ಯಗಳ ಸರಣಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಟೀಮ್ ಇಂಡಿಯಾ ನಾಯಕರನ್ನಾಗಿ ಮಾಡಲಾಗಿದೆ. ಆದ್ರೀಗ ಸರಣಿ ಆರಂಭಕ್ಕೂ ಮುನ್ನವೇ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನಲಾಗಿದೆ. ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಸೂರ್ಯಕುಮಾರ್ ನಾಯಕರಾದಾಗಿನಿಂದಲೂ ಹಾರ್ದಿಕ್ ಪಾಂಡ್ಯಗೆ ಆದ್ಯತೆ ನೀಡಬೇಕಿತ್ತೇ ಎಂಬ ಚರ್ಚೆ ನಡೆಯುತ್ತಲೇ ಇದೆ. ಭಾರತ ತಂಡವು ಶ್ರೀಲಂಕಾಕ್ಕೆ ಹಾರುವ ಮೊದಲು ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಹಾರ್ದಿಕ್ಗೆ ನಾಯಕತ್ವ ನೀಡದಿರಲು ಕಾರಣಗಳನ್ನು ತಿಳಿಸಿದ್ದರು. ಅಲ್ಲದೆ ಸೂರ್ಯಕುಮಾರ್ಗೆ ಟಿ20 ನಾಯಕತ್ವವನ್ನು ಹಸ್ತಾಂತರಿಸುವ ಮೊದಲು ಹಾರ್ದಿಕ್ ಅವರೊಂದಿಗೆ ಮಾತನಾಡಿರುವ ಬಗ್ಗೆ ಕೂಡ ಹೇಳಿದ್ದರು. ಆದರೂ, ಸೂರ್ಯ ನಾಯಕತ್ವ ಪಡೆದಿದ್ದರಿಂದ ಹಾರ್ದಿಕ್ ಹಾಗೂ ಅವರ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ರೋಹಿತ್ ಶರ್ಮಾ ನಿವೃತ್ತಿಯ ನಂತರ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಸ್ವರೂಪದ ನಾಯಕತ್ವ ವಹಿಸಲಿದ್ದಾರೆ ಅಂತ ಹೇಳಲಾಗ್ತಿತ್ತು. ಆದರೆ ಹಾರ್ದಿಕ್ ಪಾಂಡ್ಯಗಿಂತ ಸೂರ್ಯಕುಮಾರ್ ಯಾದವ್ಗೆ ಆದ್ಯತೆ ನೀಡಲಾಗಿದೆ. ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ಮಾಡುವಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಸದ್ಯ ಭಾರತ ತಂಡ ಶ್ರೀಲಂಕಾ ಪ್ರವಾಸದಲ್ಲಿದೆ. ಅಲ್ಲದೇ ಭಾರತ-ಶ್ರೀಲಂಕಾ ಸರಣಿ ಆರಂಭಕ್ಕೂ ಮುನ್ನವೇ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಸೂರ್ಯಕುಮಾರ್ ಯಾದವ್ ನಾಯಕರಾದ ನಂತರ ಹಾರ್ದಿಕ್ ಪಾಂಡ್ಯ ಭಾರತ ತಂಡದ ಮೊದಲ ಹಡಲ್ ಸೆಷನ್ಗೆ ಹಾಜರಾಗಿಲ್ಲ. ಇದ್ರಿಂದ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಅಂತಾ ಅಭಿಮಾನಿಗಳು ಮಾತನಾಡ್ತಿದ್ದಾರೆ. ಅಲ್ದೇ ಮುಂಬೈ ಇಂಡಿಯನ್ಸ್ ತಂಡದಲ್ಲಿ ಇಬ್ಬರೂ ಆಡುವ ವೇಳೆ ಕೂಡ ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಸೂರ್ಯನಿಗೆ ಅಸಮಾಧಾನ ಇತ್ತು. ಪಾಂಡ್ಯ ಮುಂಬೈ ಕ್ಯಾಪ್ಟನ್ ಆಗಿ ಘೋಷಣೆಯಾದ ಬೆನ್ನಲ್ಲೇ ಸೂರ್ಯ ಹಾರ್ಟ್ ಬ್ರೇಕ್ ಎಮೋಜಿಯನ್ನ ಇನ್ಸ್ಟಾದಲ್ಲಿ ಹಾಕೋ ಮೂಲಕ ಬೇಸರ ಹೊರ ಹಾಕಿದ್ದರು. ಯಾಕಂದ್ರೆ ಸೂರ್ಯ ಹೇಳಿ ಕೇಳಿ ರೋಹಿತ್ ಶರ್ಮಾ ಬಣದ ಹುಡುಗ.

ಇಲ್ಲಿ ಲಂಕಾ ಸರಣಿ ಟೀಂ ಇಂಡಿಯಾ ಪಾಲಿಗೆ ತುಂಬಾನೇ ಮಹತ್ವದ ಪಂದ್ಯವಾಗಿದೆ. ಯಾಕಂದ್ರೆ ಹೆಡ್ ಕೋಚ್ ಗೌತಮ್ ಗಂಭೀರ್ಗೆ ಇದು ಹೊಸ ಇನ್ನಿಂಗ್ಸ್ನ ಮೊದಲ ಸಿರೀಸ್. ಹಾಗೇ ಈ ಸರಣಿಯಲ್ಲಿ 7 ಪ್ಲೇಯರ್ಸ್ ಶ್ರೀಲಂಕಾ ನೆಲದಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದ್ದಾರೆ. ವೈಟ್ ಬಾಲ್ ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಅರ್ಷದೀಪ್ ಸಿಂಗ್, ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಅಪಾರ ಕೊಡುಗೆ ನೀಡಿದ್ದರು. ಆದರೆ ಇಷ್ಟು ಸಾಧನೆಗಳ ಹೊರತಾಗಿಯೂ ಅರ್ಷದೀಪ್ ಗೆ ಶ್ರೀಲಂಕಾದಲ್ಲಿ ಆಡುವ ಮೊದಲ ಅವಕಾಶ ಇದಾಗಿದೆ. ಅಲ್ದೇ ಎಡಗೈ ವೇಗಿ ಖಲೀಲ್ ಅಹ್ಮದ್ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿ 6 ವರ್ಷಗಳಾಗಿವೆ. ಅವರು 2018 ರಲ್ಲಿ ತಮ್ಮ ಮೊದಲ ಟಿ20 ಪಂದ್ಯವನ್ನು ಆಡಿದ್ದರು. ಅದರ ಹೊರತಾಗಿಯೂ, ಶ್ರೀಲಂಕಾದಲ್ಲಿ ಅವರು ಮೊದಲ ಟಿ20 ಪಂದ್ಯವನ್ನು ಆಡಲಿದ್ದಾರೆ. ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಟಿ20 ಪಂದ್ಯವನ್ನು ಆಡಲಿದ್ದಾರೆ. 2019ರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಈ ಎಡಗೈ ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ಗೆ ಶ್ರೀಲಂಕಾದಲ್ಲಿ ಟಿ20 ಆಡಲು ಇದು ಮೊದಲ ಅವಕಾಶವಾಗಿದೆ.

ಇನ್ನು ಟಿ-20 ಸ್ಪೆಷಲಿಸ್ಟ್ ರಿಂಕು ಸಿಂಗ್ 2023ರಲ್ಲಿ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ನಂತರ   ಭಾರತ ಪರ 20 ಪಂದ್ಯಗಳನ್ನು ಆಡಿದ್ದಾರೆ. ಆದರೆ, ಆ 20 ಪಂದ್ಯಗಳಲ್ಲಿ ಶ್ರೀಲಂಕಾ ನೆಲದಲ್ಲಿ ಒಂದೂ ಪಂದ್ಯವನ್ನು ಆಡಿಲ್ಲ. ಶ್ರೀಲಂಕಾದಲ್ಲಿ ಇದೇ ಮೊದಲ ಬಾರಿಗೆ ಟಿ20ಯಲ್ಲಿ ರಿಂಕು ಸಿಂಗ್ ಕಣಕ್ಕಿಳಿಯಲಿದ್ದಾರೆ. ರವಿ ಬಿಷ್ಣೋಯ್ ಟೀಂ ಇಂಡಿಯಾ ಪರ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಿ 5 ವರ್ಷಗಳಾಗಿವೆ. ಆದರೆ, ಅವರು ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಟಿ20 ಪಂದ್ಯವನ್ನು ಆಡಲಿದ್ದಾರೆ. ಹಾಗೇ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ಶಿವಂ ದುಬೆ ಕೂಡ ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಆಡಲಿದ್ದಾರೆ. ಶುಭ್ಮನ್ ಗಿಲ್ ನಾಯಕತ್ವದಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ ಟಿ20 ಮಾದರಿಗೆ ಪಾದಾರ್ಪಣೆ ಮಾಡಿದ್ದ ರಿಯಾನ್ ಪರಾಗ್ ಕೂಡ ಶ್ರೀಲಂಕಾದಲ್ಲಿ ಇದೇ ಮೊದಲ ಪಂದ್ಯವಾಗಿದೆ.

ಸದ್ಯ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಹಲವು ಯುವ ಆಟಗಾರರ ಜೊತೆಗೆ ಅನುಭವಿಗಳಿಗೂ ಅವಕಾಶ ನೀಡಲಾಗಿದೆ. ಆದಾಗ್ಯೂ, ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರರು ಬೆಂಚ್ ಕಾಯುವ ಪರಿಸ್ಥಿತಿಯಲ್ಲಿದ್ದಾರೆ.  15 ಆಟಗಾರರ ಪೈಕಿ ಯಾರ್ಯಾರು ಬೆಂಚ್ ಕಾಯಬಹುದು ಅನ್ನೋದನ್ನ ಹೇಳ್ತಾ ಹೋಗ್ತೇನೆ ನೋಡಿ.

ನಂಬರ್ 1 ಸಂಜು ಸ್ಯಾಮ್ಸನ್

ಟೀಮ್ ಇಂಡಿಯಾದ ವಿಕೆಟ್ಕೀಪರ್ ಮತ್ತು ಬ್ಯಾಟರ್ ಸಂಜು ಸ್ಯಾಮ್ಸನ್ ಅದ್ಭುತ ಪ್ರತಿಭೆ ಹೊಂದಿದ್ದರೂ ಆಡುವ ಅವಕಾಶ ಸಿಕ್ಕಿರುವುದು ಬಹಳ ಕಡಿಮೆ. ಏಕೆಂದರೆ ಟಿ20 ವಿಶ್ವಕಪ್ 2024ರ ಚಾಂಪಿಯನ್ ಭಾರತ ತಂಡದಲ್ಲಿ ಸಂಜು ಸ್ಥಾನ ಪಡೆದಿದ್ದರು. ಆದರೆ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವಾಡದೆ ಬೆಂಚ್ ಕಾದಿದ್ದರು. ಇದೀಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಸಂಜು ಅವರಿಗೆ ಮತ್ತೊಮ್ಮೆ ಸವಾಲು ಎದುರಾಗಿದೆ. ಟೀಮ್ ಇಂಡಿಯಾದಲ್ಲಿ ಸಂಜು ಗಿಂತಲೂ ಶ್ರೇಷ್ಠ ಕ್ರಿಕೆಟಿಗರು ಇದ್ದಾರೆ. ಇದಲ್ಲದೇ ವಿಕೆಟ್ಕೀಪರ್ ಆಗಿ ಟೀಮ್ ಮ್ಯಾನೇಜ್ಮೆಂಟ್ನ ಮೊದಲ ಆಯ್ಕೆ ರಿಷಬ್ ಪಂತ್ ಆಗಿರುತ್ತೆ. ಇಂತಹ ಪರಿಸ್ಥಿತಿಯಲ್ಲಿ ಟಿ20 ಸ್ಪೆಷಲಿಸ್ಟ್ ಬ್ಯಾಟರ್ ಆಗಿದ್ದರೂ, ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಬೆಂಚ್ ಕಾಯುವುದು ಪಕ್ಕ ಎನ್ನಲಾಗುತ್ತಿದೆ.

ನಂಬರ್ 2 – ವಾಷಿಂಗ್ಟನ್ ಸುಂದರ್

ಆಫ್ ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಶ್ರೀಲಂಕಾ ವಿರುದ್ಧದ ಈ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯೋದು ಡೌಟ್ ಇದೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸ್ಪಿನ್ ವಿಭಾಗದಲ್ಲಿ ಅಕ್ಷರ್ ಪಟೇಲ್ ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ವಾಷಿಂಗ್ಟನ್ ಸುಂದರ್ ಟೀಮ್ ಇಂಡಿಯಾದ ಪ್ಲೇಯಿಂಗ್-11 ನಲ್ಲಿ ಪಾಲ್ಗೊಳ್ಳುವುದು ಕಷ್ಟ. ಅಕ್ಷರ್ ಪಟೇಲ್ ಒಬ್ಬ ಅತ್ಯುತ್ತಮ ಕ್ರಿಕೆಟಿಗರಾಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಟೀಮ್ ಇಂಡಿಯಾ ಪರ ಸಾಕಷ್ಟು ಸದ್ದು ಮಾಡಿದ್ದಾರೆ.  ರವಿ ಬಿಷ್ಣೋಯ್ ಸಹಾ ವಾಷಿಂಗ್ಟನ್ ಸುಂದರ್ ಅವರಿಗಿಂತ ಹೆಚ್ಚು ಮಾರಕ ಸ್ಪಿನ್ನರ್ ಆಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ವಾಷಿಂಗ್ಟನ್ ಸುಂದರ್ ಟಿ20 ಸರಣಿಯಲ್ಲಿ ಬೆಂಚ್ ಕಾಯುವ ಸಾಧ್ಯತೆ ಇದೆ.

ನಂಬರ್ 3 ರಿಯಾನ್ ಪರಾಗ್

ಶ್ರೀಲಂಕಾ ವಿರುದ್ಧದ ಈ ಟಿ20 ಸರಣಿಯ ತಂಡದಲ್ಲಿ ರಿಯಾನ್ ಪರಾಗ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಟೀಮ್ ಇಂಡಿಯಾದ ಪ್ಲೇಯಿಂಗ್ ಹನ್ನೊಂದರಲ್ಲಿ ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್ ಮತ್ತು ಶಿವಂ ದುಬೆ ಆಡುವುದು ಬಹುತೇಕ ಖಚಿತವಾಗಿದೆ. ಸೋ ಅಂತಿಮವಾಗಿ ರಿಯಾನ್ ಪರಾಗ್ ಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ಥಾನ ಉಳಿಯೋದಿಲ್ಲ. ಅಲ್ಲದೆ ಜಿಂಬಾಬ್ವೆ ವಿರುದ್ಧದ ಕೊನೆಯ ಟಿ20 ಸರಣಿಯಲ್ಲಿ ರಿಯಾನ್ ಪರಾಗ್ ಅವರ ಪ್ರದರ್ಶನ ತೀರಾ ಕಳಪೆಯಾಗಿತ್ತು. ಈ ಕಾರಣದಿಂದಾಗಿ ಅವರು ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವಂತೆ ಕಾಣುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ರಿಯಾನ್ ಪರಾಗ್ ಇಡೀ ಟಿ 20 ಸರಣಿಯಿಂದ ದೂರ ಉಳಿಬಹುದು.

ಫೈನಲಿ ಲಂಹಾ ದಹನಕ್ಕೆ ರೆಡಿಯಾಗಿರೋ ಟೀಂ ಇಂಡಿಯಾ ಮೈದಾನದಲ್ಲಿ ಭರ್ಜರಿ ಕಸರತ್ತು ನಡೆಸ್ತಿದೆ. ಆದ್ರೆ ಸೂರ್ಯಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಮುನಿಸು ಮೂಡಿದೆ ಎಂಬ ಸುದ್ದಿ ಟೀಂ ಇಂಡಿಯಾ ಫ್ಯಾನ್ಸ್ಗೆ ಶಾಕ್ ನೀಡಿದೆ. ಮತ್ತೊಂದೆಡೆ ಸಾಕಷ್ಟು ಯಂಗ್ ಪ್ಲೇಯರ್ಸ್ ಭಾರತ ತಂಡದ ಪರ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಇಲ್ಲಿ ನಾಯಕ, ಉಪನಾಯಕನ ಸ್ಥಾನ ಸಿಕ್ಕಿಲ್ಲ ಅನ್ನೋದಕ್ಕಿಂತ ಕೊನೆಗೆ ಭಾರತ ಗೆಲ್ಲೋದಷ್ಟೇ ಎಲ್ಲರ ಗುರಿ. ಸೋ ಏನೇ ಮನಸ್ಥಾಪ ಇದ್ರೂ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಲಿ ಅನ್ನೋದಷ್ಟೇ ಕೋಟಿ ಕೋಟಿ ಭಾರತೀಯರ ಆಶಯ.

Shwetha M

Leave a Reply

Your email address will not be published. Required fields are marked *