500 ವರ್ಷಗಳ ಬಳಿಕ ಶ್ರೀರಾಮನಿಗೆ ನೆರವೇರಿದ ಅಭಿಷೇಕ, ಸೂರ್ಯ ತಿಲಕ – ಅದ್ಭುತ ಕ್ಷಣಕ್ಕೆ ಸಾಕ್ಷಿಯಾದ ಭಕ್ತಗಣ 

500 ವರ್ಷಗಳ ಬಳಿಕ ಶ್ರೀರಾಮನಿಗೆ ನೆರವೇರಿದ ಅಭಿಷೇಕ, ಸೂರ್ಯ ತಿಲಕ – ಅದ್ಭುತ ಕ್ಷಣಕ್ಕೆ ಸಾಕ್ಷಿಯಾದ ಭಕ್ತಗಣ 

ಕೋಟ್ಯಂತರ ಹಿಂದೂಗಳ ಕನಸು ನನಸಾಗಿದೆ. ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೊಂಡಿದ್ದು, 500 ವರ್ಷಗಳ ಬಳಿಕ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಬಾಲರಾಮನಿಗೆ ರಾಮನವಮಿಯಂದು ಅಭಿಷೇಕ ನೆರವೇರಿದೆ.

ರಾಮನವಮಿಯ ಹಿನ್ನೆಲೆಯಲ್ಲಿ ರಾಮನಗರಿ ಅಯೋಧ್ಯೆಯಲ್ಲಿ ಸಂಭ್ರಮ ಕಳೆಗಟ್ಟಿದೆ. ಬೆಳಗಿನ ಜಾವ 3.30ಕ್ಕೆ ಮಂಗಳಾರತಿ ನೆರವೇರಿಸುವುದರ ಮೂಲಕ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ರಾತ್ರಿ 11 ರ ತನಕವೂ ಭಕ್ತರಿಗೆ ರಾಮನ ದರ್ಶನ ಸಿಗಲಿದೆ ಪೂಜಾ ಪುನಸ್ಕಾರಗಳುನೆರವೇರುತ್ತಿವೆ. 500 ವರ್ಷದ ಬಳಿಕ ರಾಮನವಮಿಯಂದು ಶ್ರೀರಾಮನಿಗೆ ಸೂರ್ಯ ಅಭಿಷೇಕ ನಡೆಯಿತು. ಏಪ್ರಿಲ್ 17 ರಂದು ಭಗವಾನ್ ಶ್ರೀರಾಮನ ಜನ್ಮ ಮುಹೂರ್ತದ ವೇಳೆಯಲ್ಲೇ ಸೂರ್ಯ ರಶ್ಮಿ ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸಿದೆ.

ಇದನ್ನೂ ಓದಿ:  ನನಗೂ, ನನ್ನ ಮಗನಿಗೆ ಭವಿಷ್ಯ ಇಲ್ಲ ಎಂದೇ ಈ ನಿರ್ಧಾರ ಕೈಗೊಂಡೆ! – ಶಾಕಿಂಗ್‌ ಹೇಳಿಕೆ ಕೊಟ್ಟ ಈಶ್ವರಪ್ಪ

ರಾಮ ಮಂದಿರದಲ್ಲಿ ಸೂಕ್ತ ಸ್ಥಳಗಳಲ್ಲಿ ಅಳವಡಿಸಿರುವ ಮಸೂರಗಳು ಸೂರ್ಯನ ಕಿರಣವನ್ನು ರಾಮ ಲಲ್ಲಾ ಮೂರ್ತಿಯ ಹಣೆಯನ್ನು ಸ್ಪರ್ಶಿಸಿತು. ಯಾವುದೇ ಬ್ಯಾಟರಿ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಕೆ ಮಾಡದೇ ಸೂರ್ಯನ ಕಿರಣಗಳು ನೇರವಾಗಿ ಬಾಲ ರಾಮನ ಹಣೆಯನ್ನು ಸ್ಪರ್ಶಿಸುವಂತೆ ಮಾಡಲು ಮಸೂರಗಳನ್ನು ಮಾತ್ರ ಬಳಕೆ ಮಾಡಲಾಗಿತ್ತು.

ರಾಮನವಮಿ ಹಬ್ಬದ ದಿನದಂದು ರಾಮನಿಗೆ ಉಣಬಡಿಸಲು 56 ಬಗೆಯ ಭೋಗ್ ಪ್ರಸಾದಗಳನ್ನು ಸಿದ್ಧಪಡಿಸಲಾಗಿದೆ. ಇದರ ಜೊತೆಗೆ ದೇವ್ರ ಹಂಸ್ ಟ್ರಸ್ಟ್ ನಿಂದ ಈಗಾಗಲೇ 1,11,111 ಕೆ.ಜಿ ಲಡ್ಡು ಪ್ರಸಾದವನ್ನು ಅಯೋಧ್ಯೆಗೆ ನೀಡಲಾಗಿದ್ದು, ದೇಗುಲಕ್ಕೆ ಬರುವ ಭಕ್ತರಿಗೆ ವಿತರಿಸಲಾಗುತ್ತದೆ. ಬುಧವಾರ ಬರೋಬ್ಬರಿ 19 ಗಂಟೆಗಳ ಕಾಲ ರಾಮ ಮಂದಿರ ಓಪನ್ ಇರಲಿದೆ.

Shwetha M