ಟಾಸ್ ಗೆದ್ದ ಡೆಲ್ಲಿ, ಎರಡು ವಿಕೆಟ್ ಕಳೆದುಕೊಂಡ ಮುಂಬೈ – ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯ ಕ್ಯಾಪ್ಟನ್

ಟಾಸ್ ಗೆದ್ದ ಡೆಲ್ಲಿ, ಎರಡು ವಿಕೆಟ್ ಕಳೆದುಕೊಂಡ ಮುಂಬೈ – ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯ ಕ್ಯಾಪ್ಟನ್

ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಯುತ್ತಿದೆ. ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಅನಾರೋಗ್ಯದಿಂದ ಪಂದ್ಯದಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ:CSK Vs RCB ಪಂದ್ಯಕ್ಕೂ ಮುನ್ನ RCB ಕ್ಯಾಪ್ಟನ್ ಟೆಂಪಲ್‌ ರನ್! – ತಿಮ್ಮಪ್ಪನ ದರ್ಶನ ಪಡೆದ ರಜತ್‌ ಪಾಟೀದಾರ್!

ಮುಂಬೈ ಇಂಡಿಯನ್ಸ್ ಡೆಲ್ಲಿ ವಿರುದ್ಧ ಬ್ಯಾಟಿಂಗ್ ಆರಂಭ ಮಾಡಿದ್ದು, ಎರಡು ವಿಕೆಟ್ ಕಳೆದುಕೊಂಡಿದೆ. ರಿಯಾನ್ ರಿಕಲ್ಟನ್ ಮತ್ತು ತಿಲಕ್ ವರ್ಮಾ ವಿಕೆಟ್ ಕಳೆದುಕೊಂಡಿದೆ ಮುಂಬೈ ತಂಡ. ಇನ್ನು ಮುಂಬೈ ತಂಡದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಆಡುತ್ತಿಲ್ಲ. ಅನಾರೋಗ್ಯದ ಕಾರಣ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ನಾಯಕನಾಗಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನೆಡಸಲಿದ್ದಾರೆ. ಪಾಂಡ್ಯ ಬದಲಿಗೆ ದೀಪಕ್ ಚಾಹರ್ ಆಡುತ್ತಿದ್ದಾರೆ.

ದೆಹಲಿ ತಂಡ ತವರು ಮೈದಾನದಲ್ಲಿರುವ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕಣಕ್ಕಿಳಿದಿದೆ. ಈ ಸೀಸನ್​ನಲ್ಲಿ ಎರಡೂ ತಂಡಗಳ ಎರಡನೇ ಪಂದ್ಯ ಇದಾಗಿದೆ. ಎರಡೂ ತಂಡಗಳು ಸೀಸನ್ ಅನ್ನು ಗೆಲುವಿನೊಂದಿಗೆ ಆರಂಭಿಸಿವೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇದುವರೆಗೆ 37 ಪಂದ್ಯಗಳು ನಡೆದಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 21 ಪಂದ್ಯಗಳನ್ನು ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 16 ಪಂದ್ಯಗಳನ್ನು ಗೆದ್ದಿದೆ. ಅಂದರೆ ಈ ಮುಖಾಮುಖಿಯಲ್ಲಿ ಮುಂಬೈ ಮೇಲುಗೈ ಸಾಧಿಸಿರುವುದನ್ನು ಕಾಣಬಹುದಾಗಿದೆ. ಇನ್ನು ಈ ಅವೃತ್ತಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಅದರಲ್ಲಿ ಮುಂಬೈ ಇಂಡಿಯನ್ಸ್, ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರೆ, ಇತ್ತ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ತಂಡವನ್ನು ಮಣಿಸಿದೆ.

Sulekha