ಸೂರ್ಯ ಇನ್ ರಿಲ್ಯಾಕ್ಸ್ ಮೂಡ್ – ‘ಎಮು’ವಿನಂತೆಯೇ ಹೆಜ್ಜೆ ಹಾಕಿದ ಕ್ರಿಕೆಟರ್!

ಸೂರ್ಯ ಇನ್ ರಿಲ್ಯಾಕ್ಸ್ ಮೂಡ್ – ‘ಎಮು’ವಿನಂತೆಯೇ ಹೆಜ್ಜೆ ಹಾಕಿದ ಕ್ರಿಕೆಟರ್!

ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾದ ಮಿಸ್ಟರ್ 360 ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ಕೇವಲ ಮೈದಾನದಲ್ಲಿ ಮಾತ್ರ ಸಕ್ರೀಯವಾಗಿರದೇ, ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿರುತ್ತಾರೆ. ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ‘ಶೋಲೆ-2 ಕಮಿಂಗ್ ಸೂನ್’ – ರಾಂಚಿ ಱಂಬೋ ಜೊತೆ ಪಾಂಡ್ಯ ರೈಡಿಂಗ್

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಸೂರ್ಯ ಕುಮಾರ್ ಯಾದವ್ ಜಾಲಿ ಮೂಡ್ ನಲ್ಲಿರುವಂತೆ ಕಾಣುತ್ತಿದೆ.  ಎಮು ಪಕ್ಷಿಯ ಪಕ್ಕ ಅದರಂತೆಯೇ ಹೆಜ್ಜೆ ಹಾಕಿದ್ದಾರೆ. ಇದನ್ನು ಕಂಡ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

ಸೂರ್ಯ ಕುಮಾರ್ ಯಾದವ್ ಮೃಗಾಲಯಕ್ಕೆ ತೆರಳಿದ್ದರು. ಈ ವೇಳೆ ಎಮು ಪಕ್ಷಿಯನ್ನು ಇಮಿಟೇಟ್ ಮಾಡಿದ್ದಾರೆ. ಈ  ವಿಡಿಯೋವನ್ನು ಪೋಸ್ಟ್ ಮಾಡಿ, “ನಾನು ಎಮುವನ್ನು ಅನುಕರಿಸುತ್ತಿದ್ದೇನೆಯೇ ಅಥವಾ ಎಮು ನನ್ನನ್ನು ಅನುಕರಿಸುತ್ತಿದೆಯೇ?” ಅಂತ ಕ್ಯಾಪ್ಶನ್ ಹಾಕಿದ್ದಾರೆ. ಸೂರ್ಯಕುಮಾರ್ ಪೋಸ್ಟ್ ಮಾಡಿರುವ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

suddiyaana