ಸೂರ್ಯನಿಗೆ ಕ್ಯಾಪ್ಟನ್ಸಿ ಗ್ರಹಣ – 1 ವರ್ಷ.. 18 ಇನ್ನಿಂಗ್ಸ್.. ಫಿಫ್ಟಿನೂ ಇಲ್ಲ
MR.360 ಡಿಗ್ರಿ ಮರೆತೋಯ್ತಾ?

ಕಳೆದ ಒಂದೂವರೆ ವರ್ಷದಲ್ಲಿ ಭಾರತ ಟೆಸ್ಟ್ ಸರಣಿಗಳನ್ನ ಸೋತಿದೆ. ಏಕದಿನ ಸರಣಿಯನ್ನೂ ಕಳ್ಕೊಂಡಿದೆ. ಬಟ್ ಟಿ-20ಐ ವಿಜಯಯಾತ್ರೆಯನ್ನ ತಡೆಯೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಹಿಂದೆಂದಿಗಿಂತಲೂ ಸೂಪರ್ ಸ್ಟ್ರಾಂಗ್ ಆಗಿ ಪರ್ಫಾಮ್ ಮಾಡ್ತಿದೆ. ಆದ್ರಿಲ್ಲಿ- ತಂಡ ಗೆಲ್ತಿದೆ ಅನ್ನೋದೇನೋ ನಿಜ. ಅದ್ರ ಬಗ್ಗೆ ಎರಡು ಮಾತಿಲ್ಲ. ಬಟ್ ವಾಟ್ ಎಬೌಟ್ ಸೂರ್ಯಕುಮಾರ್ ಯಾದವ್. ನಾಯಕನಾಗಿ ಟೀಂ ಗೆಲ್ಲಿಸ್ತಿರೋ ಅದೇ ಸೂರ್ಯ ಆಟಗಾರನಾಗಿ ಗೆಲ್ಲೋಕೆ ಆಗ್ತಿಲ್ಲ. ಟಿ-20 ಸ್ಪೆಷಲಿಸ್ಟ್ ಬ್ಯಾಟರ್, ಫಿಯರ್ಲೆಸ್ ಬ್ಯಾಟರ್ ಅಂತಾ ಕರೆಸಿಕೊಳ್ತಿದ್ದ ಸೂರ್ಯನಿಗೆ ಕ್ಯಾಪ್ಟನ್ಸಿ ಗ್ರಹಣ ಹಿಡಿದಿದೆ.
ಇದನ್ನೂ ಓದಿ : 6 ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ ಜೀವ ಹೋಯ್ತು! – ಅಂತ್ಯಕ್ರಿಯೆ ವೇಳೆ ಕಣ್ಣು ತೆರೆದ ವ್ಯಕ್ತಿ!
ಭಾರತ-ಆಸ್ಟ್ರೇಲಿಯಾ ನಡುವಿನ ಟಿ-20 ಸಿರೀಸ್ನಲ್ಲಿ 2ನೇ ಪಂದ್ಯದ ಸೋಲಿನ ಬಳಿಕ ಭಾರತ ಗ್ರೇಟ್ ಕಂ ಬ್ಯಾಕ್ ಮಾಡ್ತು. ಅದ್ರಲ್ಲೂ ಬೌಲಿಂಗ್ ಸ್ಕ್ವಾಡ್ ಅಂತೂ ಎಕ್ಟ್ರಾರ್ಡಿನರಿ ಪರ್ಫಾಮೆನ್ಸ್ ನೀಡಿದೆ. ಬಟ್ ಎಲ್ಲರ ಕಣ್ಣಿದಿದ್ದೇ ಕ್ಯಾಪ್ಟನ್ ಌಂಡ್ ವೈಸ್ ಕ್ಯಾಪ್ಟನ್ ಮೇಲೆ. ಟಿ-20 ಫಾರ್ಮೆಟ್ನ ಸ್ಪೆಷಲಿಸ್ಟ್ ಅಂತಾನೇ ಕರೆಸಿಕೊಳ್ತಿದ್ದ ಸೂರ್ಯ ಸಿಡಿಯೋದನ್ನ ನೋಡೋಕೆ ಕೋಟ್ಯಂತರ ಫ್ಯಾನ್ಸ್ ಕಾಯ್ತಿದ್ದಾರೆ. ಆದ್ರೆ ಕ್ಯಾಪ್ಟನ್ ಆದ್ಮೇಲೆ ಸೂರ್ಯನಿಗೆ ಗ್ರಹಣ ಹಿಡಿದಿದೆ. ಪ್ರಜ್ವಲಿಸೋದನ್ನೇ ಮರೆತಿದ್ದಾನೆ. 2024 ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ನಂತರ ರೋಹಿತ್ ಟಿ20ಐನಿಂದ ನಿವೃತ್ತರಾದ್ರು. ಹಾಗೇ ಸೂರ್ಯಕುಮಾರ್ ನಾಯಕತ್ವ ವಹಿಸಿಕೊಂಡಿದ್ದು ಅಲ್ಲಿಂದ ಹಿಡಿದು ಅಜೇಯವಾಗಿ ಏಷ್ಯಾಕಪ್ ಟ್ರೋಫಿ ಗೆಲ್ಲೋವರೆಗೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದ್ರೆ ಸೂರ್ಯನ ಕೊಡುಗೆ ಏನು ಅಂದ್ರೆ ಬಿಗ್ ಕ್ವಶ್ಚನ್ ಮಾರ್ಕ್ ಕಾಣಿಸ್ತಿದೆ.
2024ರ ಜುಲೈ 27ರಿಂದ ಸೂರ್ಯ ಪೂರ್ಣಾವಧಿಯ T20I ನಾಯಕನಾಗಿ ಭಾರತವನ್ನು ಮೊದಲ ಬಾರಿಗೆ ಮುನ್ನಡೆಸ್ತಾರೆ. ಌಂಡ್ ಆ ಬಳಿಕ ಭಾರತವು 22 ಪಂದ್ಯಗಳನ್ನು ಗೆದ್ದಿದೆ. ಮೂರು ಪಂದ್ಯಗಳನ್ನ ಮಾತ್ರವೇ ಸೋತು 2 ಮ್ಯಾಚ್ಗಳು ರದ್ದಾಗಿವೆ. ಈ ಟೈಮಲ್ಲಿ ಐಸಿಸಿಯ ಯಾವುದೇ ಪೂರ್ಣ ಸದಸ್ಯ ತಂಡದಿಂದಲೂ ಇಂಥಾ ರಿಸಲ್ಟ್ ಬಂದಿಲ್ಲ. ಈ ಗೆಲುವಿನ ಓಟದಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧ T20I ಸರಣಿ ಗೆಲುವುಗಳು ಹಾಗೇ ಏಷ್ಯಾಕಪ್‌ನಲ್ಲಿ ಅಜೇಯ ಟ್ರೋಫಿ ಗೆಲುವು, ಈಗ ಆಸ್ಟ್ರೇಲಿಯಾ ಸಿರೀಸ್ನಲ್ಲೂ ನೋ ಲಾಸ್ ರೆಕಾರ್ಡ್ ಮುಂದುವರಿದಿದೆ. ಆದ್ರೆ ಸೂರ್ಯಕುಮಾರ್ ಇಂಡಿವಿಶ್ಯುಯಲ್ ರಿಸಲ್ಟ್ ಮಾತ್ರ ಸಪ್ಪೆಯಾಗಿದೆ. ಒಂದು ಟೈಮಲ್ಲಿ ಜಗತ್ತಿನ ದಿ ಮೋಸ್ಟ್ ಡೇಂಜರಸ್ ಬ್ಯಾಟರ್ ಆಗಿದ್ದ ಸೂರ್ಯ ಈಗ ಸದ್ದೇ ಮಾಡ್ತಿಲ್ಲ. ಅದ್ರಲ್ಲೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಅಂತಾ ಹೇಳಿಕೊಳ್ಳುವಂತ ಇನ್ನಿಂಗ್ಸ್ ಕೂಡ ಬರ್ತಿಲ್ಲ. ಇನ್ನೊಂದು ಇಂಟ್ರೆಸ್ಟಿಂಗ್ ಅಂದ್ರೆ ಭಾರತ ಪರ ಅರ್ಧಶತಕ ಬಾರಿಸಿ ವರ್ಷವೇ ಉರುಳಿ ಹೋಗಿದೆ.
ಬಾಂಗ್ಲಾ ವಿರುದ್ಧ ಕೊನೇ ಬಾರಿ ಅರ್ಧಶತಕ ಸಿಡಿಸಿದ್ದ ಸೂರ್ಯ!
ಸೂರ್ಯಕುಮಾರ್ ಯಾದವ್ ಕೊನೇ ಬಾರಿಗೆ ಟಿ20ಐನಲ್ಲಿ ಅರ್ಧಶತಕ ಬಾರಿಸಿದ್ದು 2024 ರ ಅಕ್ಟೋಬರ್ 12 ರಂದು. ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧ. ಅಂದಿನಿಂದ 18 ಇನ್ನಿಂಗ್ಸ್ ಆಡಿದ್ರೂ ಒಂದೇ ಒಂದು ಅರ್ಧಶತಕ ಬಾರಿಸೋಕೆ ಸಾಧ್ಯವಾಗಿಲ್ಲ. ಕಳೆದ 18 ಇನ್ನಿಂಗ್ಸ್‌ಗಳಲ್ಲಿ ಕೇವನ 14ರ ಸರಾಸರಿ ಹೊಂದಿದ್ದಾರೆ. 120 ರ ಸ್ಟ್ರೈಕ್ ರೇಟ್‌ನಲ್ಲಿ 210 ರನ್‌ಗಳನ್ನು ಗಳಿಸಿದ್ದಾರೆ. ಈ ಇನಿಂಗ್ಸ್‌ಗಳಲ್ಲಿ ಅವರ ಅತ್ಯಧಿಕ ಸ್ಕೋರ್ ಅಂದ್ರೆ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಗ್ರೂಪ್ ಪಂದ್ಯದಲ್ಲಿ 47 ರನ್ ಗಳಿಸಿ ನಾಟೌಟ್ ಆಗಿ ಉಳಿದಿದ್ದು. ಹಾಗೇ ಇದು 40ಪ್ಲಸ್ ರನ್ಗಳ ಏಕೈಕ ಇನ್ನಿಂಗ್ಸ್ ಆಗಿದೆ. ಜೊತೆಗೆ 12 ಸಲ 20 ರನ್ಗಳಿಗಿಂತ ಮೊದಲೇ ಔಟ್ ಆಗಿದ್ದಾರೆ. ಹೀಗಿದ್ರೂ ಆಸ್ಟ್ರೇಲಿಯಾದಲ್ಲಿ ಮೊದಲ ನಾಲ್ಕು T20I ಪಂದ್ಯಗಳಲ್ಲಿ ಕಮ್ ಬ್ಯಾಕ್ ಹಿಂಟ್ ಕೊಟ್ಟಿದ್ರು. ಫಸ್ಟ್ ಮ್ಯಾಚಲ್ಲಿ 39 ರನ್ ಗಳಿಸಿ ಆಡ್ತಿದ್ರು ಬಟ್ ಮಳೆ ಬಂದು ಮ್ಯಾಚ್ ವಾಶ್ ಔಟ್ ಆಗಿತ್ತು. ಬಟ್ ಎರಡನೇ ಪಂದ್ಯದ್ಲಲಿ 1 ರನ್. ಮೂರನೇ ಮ್ಯಾಚಲ್ಲಿ 24, ನಾಲ್ಕನೇ ಪಂದ್ಯದಲ್ಲಿ 20 ರನ್. ಬಟ್ ಕೊನೆಯೆ ಎರಡು ಇನ್ನಿಂಗ್ಸ್‌ಗಳು 200 ಅಥವಾ ಅದಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ ಹೊಂದಿದ್ವು. ಬಟ್ ಅದನ್ನ ಬಿಗ್ ಇನ್ನಿಂಗ್ಸ್ ಆಗಿ ಕನ್ವರ್ಟ್ ಮಾಡೋಕೆ ಸಾಧ್ಯವಾಗ್ಲಿಲ್ಲ.

ನೋಡಿರಿ

