ಆಗಸ್ಟ್‌ನಲ್ಲೇ ಸೂರ್ಯ, ಚಂದ್ರ ಗ್ರಹಣ – ಒಟ್ಟೊಟ್ಟಿಗೆ ಗ್ರಹಣ ಬಂದ್ರೆ ಕಷ್ಟ, ನಷ್ಟ!
ಈ ಐದು ರಾಶಿಗೆ ಕಾದಿದೆ ಗ್ರಹಚಾರ!

ಗ್ರಹಣ ಅಂದ್ರೆ ಸಾಕಷ್ಟು ಜನರಿಗೆ ಭಯ ಶುರುವಾಗುತ್ತೆ.. ಗ್ರಹಣ ಸಂಭವಿಸಿದ ನಂತ್ರ ಸಾಕಷ್ಟು ಜನರಿಗೆ ಕೆಟ್ಟುದ್ದು ಆಗುತ್ತೆ.. ಹಾಗೇ ಕೆಲವರಿಗೆ ಒಳ್ಳೆಯದು ಆಗುತ್ತೆ ಅನ್ನೋ ನಂಬಿಕೆಯಿದೆ. ಗ್ರಹಣ ಮುಗಿದ ನಂತ್ರ ಪೂಜೆ ಮಾಡಿ ಸಾಕಷ್ಟು ಮಡಿವಂತಿಕೆಯಿಂದ ಇರ್ತಾರೆ.. ಯಾವುದೇ ರೀತಿಯ ತೊಂದರೆ ಆಗದಂತೆ ದೇವರ ಮೊರೆ ಹೋಗುತ್ತಾರೆ.. ಈ ನಡುವೆ ಆಗಸ್ಟ್ ಎರಡು ಗ್ರಹಣ ಸಂಭವಿಸಲಿದೇ..ಅದು ಈ ವರ್ಷದ ಕೊನೆಯ ಗ್ರಹಣಗಳು. ಹಾಗಿದ್ರೆ ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣದ ಬಗ್ಗೆ ನೋಡ್ತಾ ಹೋಗೋಣ ಬನ್ನಿ.
ಈ ವರ್ಷದ ಆಗಸ್ಟ್ ತಿಂಗಳು ಕೇವಲ ಹಬ್ಬಗಳ ಕಾರಣದಿಂದಾಗಿ ಮಾತ್ರವಲ್ಲದೇ ಗ್ರಹಣದಿಂದಲೂ ಸುದ್ದಿಯಲ್ಲಿದೆ. ಈ ತಿಂಗಳಲ್ಲಿ ಕೇವಲ 16 ದಿನಗಳಲ್ಲಿ, ಸೂರ್ಯಗ್ರಹಣ ಮತ್ತು ನಂತರ ಚಂದ್ರ ಗ್ರಹಣ ನಡೆಯಲಿದೆ. ಎರಡು ಗ್ರಹಣ ಒಟ್ಟಿಗೆ ಬಂದಿರುವುದ್ದರಿಂದ ಸಾಕಷ್ಟು ಭಯದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ಆಷಾಢ ಮಾಸದಲ್ಲಿ ಶನಿವಾರ ಶನಿದೇವರನ್ನ ಹೇಗೆ ಆರಾಧನೆ ಮಾಡಬೇಕು ಗೊತ್ತಾ?
ಆಗಸ್ಟ್ 12 ರಂದು ಸೂರ್ಯಗ್ರಹಣವಾಗಿರುತ್ತದೆ. ಇದರ ನಂತರ ಆಗಸ್ಟ್ 27 ರಂದು ಚಂದ್ರ ಗ್ರಹಣ ಸಂಭವಿಸುತ್ತದೆ. ಎರಡೂ ಗ್ರಹಣಗಳು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಸೂತಕ ಅವಧಿ ಇಲ್ಲಿ ಕಮ್ಮಿ. ಆದ್ರೂ ಜ್ಯೋತಿಷ್ಯದ ಪ್ರಕಾರ, ಈ ಗ್ರಹಣಗಳನ್ನು ಗ್ರಹಗಳ ಸ್ಥಾನದಿಂದಾಗಿ ವಿಶೇಷವೆಂದು ಪರಿಗಣಿಸಲಾಗುತ್ತದೆ
ಗ್ರಹಣಗಳು ಎಲ್ಲಿ ಗೋಚರಿಸುತ್ತವೆ?
ಆಗಸ್ಟ್ 12 ರಂದು ಒಟ್ಟು ಸೂರ್ಯಗ್ರಹಣವು ಗ್ರೀನ್‌ಲ್ಯಾಂಡ್, ಐಸ್ಲ್ಯಾಂಡ್ ಮತ್ತು ಉತ್ತರ ಸ್ಪೇನ್‌ನ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ಯುರೋಪ್, ಉತ್ತರ ಆಫ್ರಿಕಾ ಮತ್ತು ಉತ್ತರ ಅಮೆರಿಕದ ಅನೇಕ ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರಿಸುತ್ತದೆ. ಆಗಸ್ಟ್ 27 ಮತ್ತು 28 ರಂದು ಚಂದ್ರಗ್ರಹಣಗಳು ಉತ್ತರ ಮತ್ತು ದಕ್ಷಿಣ ಅಮೆರಿಕದ ಹೆಚ್ಚಿನ ಭಾಗಗಳಲ್ಲಿ ಹಾಗೂ ಯುರೋಪ್ ಮತ್ತು ಆಫ್ರಿಕಾದ ಅನೇಕ ದೇಶಗಳಲ್ಲಿ ಗೋಚರಿಸುತ್ತವೆ. ಇನ್ನೂ ಈ ಗ್ರಹಣದ ಎಪೆಕ್ಟ್ ಯಾವ ರಾಶಿಗಳ ಮೇಲೆ ಬೀಳುತ್ತೆ ಅನ್ನೋದ್ದನ್ನ ನೋಡೋಣ ಬನ್ನಿ.
ಮಿಥುನ
ಹೊಸ ವೃತ್ತಿ ಅವಕಾಶಗಳ ಕೊರತೆಯಿಂದಾಗಿ ಯುವಜನರು ಮಾನಸಿಕವಾಗಿ ತೊಂದರೆಗೊಳಗಾಗುತ್ತಾರೆ. ಹೆಚ್ಚುವರಿಯಾಗಿ, ಆರೋಗ್ಯದ ಮೇಲಿನ ವೆಚ್ಚಗಳು ಹೆಚ್ಚಾಗಬಹುದು. ಇದಲ್ಲದೆ, ನೀವು ಕಾನೂನು ವಿವಾದದಲ್ಲಿ ಸಿಲುಕಿಕೊಳ್ಳಬಹುದು
ಕನ್ಯಾರಾಶಿ
ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಇಲ್ಲದ ಕಾರಣ, ನೀವು ಮಾನಸಿಕವಾಗಿ ತೊಂದರೆಗೊಳಗಾಗುತ್ತೀರಿ. ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು, ಅದು ನಿಮಗೆ ಮಾತ್ರವಲ್ಲದೆ ನಿಮ್ಮ ಕುಟುಂಬದ ಎಲ್ಲರಿಗೂ ಸಮಸ್ಯೆಗಳನ್ನು ಉಂಟುಮಾಡಬಹುದು
ಧನು ರಾಶಿ
ಪಾಲುದಾರಿಕೆಯಲ್ಲಿ ಹೊಸ ಉದ್ಯಮವನ್ನು ಪ್ರಾರಂಭಿಸುವುದು ಒಳ್ಳೆಯದಲ್ಲ. ನಿಮ್ಮ ಪಾಲುದಾರರು ನಿಮಗೆ ದ್ರೋಹ ಮಾಡಬಹುದು. ಇದಲ್ಲದೆ, ಹೂಡಿಕೆಗಳು ದುಪ್ಪಟ್ಟು ಆರ್ಥಿಕ ನಷ್ಟವನ್ನುಂಟುಮಾಡುವ ಸಾಧ್ಯತೆಯಿದೆ. ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡುವವರು ತಮ್ಮ ಖ್ಯಾತಿಗೆ ಹಾನಿಯನ್ನು ಎದುರಿಸಬಹುದು.
ಮಕರ ರಾಶಿ
ಈ ವರ್ಷದ ಅಂತಿಮ ಸೂರ್ಯಗ್ರಹಣವು ಮಕರ ರಾಶಿಯವರಿಗೆ ಸಾಮಾನ್ಯವಾಗಿ ಅನುಕೂಲಕರ ಫಲಿತಾಂಶಗಳನ್ನು ನೀಡುವ ಸಾಧ್ಯತೆ ಇದೆ. ವಿಶೇಷವಾಗಿ ವೃತ್ತಿಜೀವನ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರಬಹುದು. ಬಹುಕಾಲದಿಂದ ಮಾಡಿದ ಪರಿಶ್ರಮಕ್ಕೆ ಈ ಅವಧಿಯಲ್ಲಿ ಉತ್ತಮ ಫಲ ದೊರಕುವ ಸಾಧ್ಯತೆ ಇದ್ದು, ಆತ್ಮವಿಶ್ವಾಸವೂ ಹೆಚ್ಚಾಗಬಹುದು.
ಮೇಷ ರಾಶಿ
ವರ್ಷದ ಅಂತಿಮ ಸೂರ್ಯಗ್ರಹಣವು ಮೇಷ ರಾಶಿಯವರ ಜೀವನದಲ್ಲಿ ಕೆಲವು ಸವಾಲಿನ ಪರಿಸ್ಥಿತಿಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ವಿಶೇಷವಾಗಿ ಈ ಅವಧಿಯಲ್ಲಿ ಮಾನಸಿಕ ಒತ್ತಡ ಮತ್ತು ಅತಿಯಾದ ಚಿಂತನೆಗಳು ಹೆಚ್ಚಾಗಬಹುದು. ಸಣ್ಣ ವಿಷಯಗಳನ್ನೂ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವ ಪ್ರವೃತ್ತಿ ಕಾಣಿಸಿಕೊಳ್ಳಬಹುದು. ಇವಿಷ್ಟು ಗ್ರಹಣದ ವಿಶೇಷಗಳು. ನಮಸ್ಕಾರ.

ನೋಡಿರಿ

