ಸೂರ್ಯ, ಚಂದ್ರ ಮಿಷನ್‌ ಆಯ್ತು.. ಇಸ್ರೋ ಮುಂದಿನ ಆಪರೇಷನ್‌ ಯಾವುದು?

ಸೂರ್ಯ, ಚಂದ್ರ ಮಿಷನ್‌ ಆಯ್ತು.. ಇಸ್ರೋ ಮುಂದಿನ ಆಪರೇಷನ್‌ ಯಾವುದು?

ನವದೆಹಲಿ: ಚಂದ್ರಯಾನ -3 ಆಯ್ತು.. ಆದಿತ್ಯ L1ಆಯ್ತು.. ಈಗ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಾರಂಭಿಸಲು ಸಜ್ಜಾಗುತ್ತಿದೆ. ಇಸ್ರೋ XPoSAT ಉಪಗ್ರಹ ಉಡಾವಣೆಗೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಚಂದ್ರಯಾನ -3 ಯೋಜನೆಗೆ ಸಕ್ಸಸ್‌ ಆದ ಬೆನ್ನಲ್ಲೇ ಇಸ್ರೋ ಸಂಸ್ಥೆ ಶನಿವಾರ ಆದಿತ್ಯ L1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದೀಗ ಬಾಹ್ಯಾಕಾಶ ಸಂಸ್ಥೆ ಇಸ್ರೋ XPoSAT (ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ) ಉಪಗ್ರಹ ಉಡಾವಣೆಗೆ  ಸಿದ್ಧವಾಗಿದೆ. XPoSat (ಎಕ್ಸ್-ರೇ ಪೋಲಾರಿಮೀಟರ್ ಸ್ಯಾಟಲೈಟ್) ಭಾರತದ ಮೊದಲ ಮೀಸಲಾದ ಪೋಲಾರಿಮೆಟ್ರಿ ಮಿಷನ್ ಆಗಿದೆ. ಇದು ತೀವ್ರವಾದ ಪರಿಸ್ಥಿತಿಗಳಲ್ಲಿ ಪ್ರಕಾಶಮಾನವಾದ ಖಗೋಳ ಎಕ್ಸ್-ರೇ ಮೂಲಗಳ ವಿವಿಧ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡುತ್ತದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸೂರ್ಯ ಶಿಕಾರಿಗೆ ಹೊರಟ ಇಸ್ರೋ – ಆದಿತ್ಯ L1 ನೌಕೆ ಹೊತ್ತು ಯಶಸ್ವಿಯಾಗಿ ನಭಕ್ಕೆ ಹಾರಿದ PSLV C-57 ರಾಕೆಟ್

ಈ ಬಾಹ್ಯಾಕಾಶ ನೌಕೆಯು ಎರಡು ವೈಜ್ಞಾನಿಕ ಪೇಲೋಡ್‌ಗಳನ್ನು ಕಡಿಮೆ ಭೂಮಿಯ ಕಕ್ಷೆಯಲ್ಲಿ ಸಾಗಿಸುತ್ತದೆ. ಒಂದು ಪ್ರೈಮರಿ ಪೇಲೋಡ್‌ POLIX (ಎಕ್ಸ್‌-ಕಿರಣಗಳಲ್ಲಿನ ಪೋಲಾರಿಮೀಟರ್‌ ಉಪಕರಣ). ಮತ್ತೊಂದು XSPECT (ಎಕ್ಸ್‌-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್)‌ ಪೇಲೋಡ್‌. ಈ ಬಾಹ್ಯಾಕಾಶ ನೌಕೆಯು ಎರಡು ವೈಜ್ಞಾನಿಕ ಪೇಲೋಡ್‌ಗಳನ್ನು ಕಡಿಮೆ ಭೂಮಿಯ ಕಕ್ಷೆಯಲ್ಲಿ ಸಾಗಿಸುತ್ತದೆ. ಒಂದು ಪ್ರೈಮರಿ ಪೇಲೋಡ್‌ POLIX (ಎಕ್ಸ್‌-ಕಿರಣಗಳಲ್ಲಿನ ಪೋಲಾರಿಮೀಟರ್‌ ಉಪಕರಣ). ಮತ್ತೊಂದು XSPECT (ಎಕ್ಸ್‌-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್)‌ ಪೇಲೋಡ್‌.

XPoSat ಉಡಾವಣೆಗೆ ಸಿದ್ಧವಾಗಿದೆ ಎಂದು ಇಸ್ರೋದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಪ್ಪು ಕುಳಿ, ನ್ಯೂಟ್ರಾನ್ ನಕ್ಷತ್ರಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯ, ಪಲ್ಸರ್ ವಿಂಡ್ ನೀಹಾರಿಕೆಗಳಂತಹ ವಿವಿಧ ಖಗೋಳ ಮೂಲಗಳಿಂದ ಹೊರಸೂಸುವ ಎಕ್ಸ್‌-ರೇ ಅಧ್ಯಯನ ಮಾಡಲು ಇದು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ (XPoSat) ಕಾಸ್ಮಿಕ್ ಎಕ್ಸ್‌-ಕಿರಣಗಳ ಧ್ರುವೀಕರಣವನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ವೀಕ್ಷಣಾಲಯ ಉಡಾವಣೆಗೆ ಇಸ್ರೋ ಯೋಜಿಸಿದೆ. 2023ರ ಕೊನೆಯಲ್ಲಿ ಅಥವಾ ಮುಂದಿನ ವರ್ಷ ಈ ಉಪಗ್ರಹ ಉಡಾಯಿಸಲು ಇಸ್ರೋ ಪ್ಲ್ಯಾನ್‌ ಮಾಡಿದೆ. ಈ ಮಿಷನ್‌ ಅವಧಿ ಕನಿಷ್ಠ 5 ವರ್ಷ ಇರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

suddiyaana