ಮದುವೆಯಾಗಿ 10 ವರ್ಷಗಳ ನಂತರ ತಂದೆಯಾಗುತ್ತಿರುವ ಸೂರ್ಯ – ದೇವಿಶಾ ಶೆಟ್ಟಿಗೆ ಸೀಮಂತ ಶಾಸ್ತ್ರದ ಸಂಭ್ರಮ

ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ಮದುವೆಯಾಗಿ 10 ವರ್ಷಗಳ ನಂತರ ತಂದೆಯಾಗುವ ಸಂತಸದಲ್ಲಿದ್ದಾರೆ.
ಇದನ್ನೂ ಓದಿ:ಟಿ20 ವಿಶ್ವಕಪ್‌ನಲ್ಲಿ ಸೂರ್ಯೋದಯ – 3ನೇ ಟಿ20 ವಿಶ್ವಕಪ್ ಗೆದ್ದ ಭಾರತ!
ಕ್ಯಾಪ್ಟನ್ ಸೂರ್ಯಕುಮಾರ್ ಮತ್ತು ದೇವಿಶಾ ಶೆಟ್ಟಿ ತಮ್ಮ ಮೊದಲ ಮಗುವಿನ ಸ್ವಾಗತಿಸುವ ಸಂಭ್ರಮದಲ್ಲಿದ್ದಾರೆ. ಇತ್ತೀಚಿಗೆ ಸೂರ್ಯ ತನ್ನ ಪತ್ನಿ ದೇವಿಶಾ ಶೆಟ್ಟಿಗೆ ಸೀಮಂತ ಶಾಸ್ತ್ರ ನೆರವೇರಿಸಿದರು. ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸೀಮಂತ ಕಾರ್ಯ ಮಾಡಿದ್ದಾರೆ.
ಸೂರ್ಯಕುಮಾರ್ ಮತ್ತು ದೇವಿಶಾ ಶೆಟ್ಟಿ ಜೋಡಿ 2016ರ ಜುಲೈ 7ರಂದು ವಿವಾಹವಾಗಿದ್ದರು. ಈ ಜೋಡಿ 2010ರಲ್ಲಿ ಮುಂಬೈನ ಆರ್ ಎ ಪೋದರ್ ಕಲೆ ಮತ್ತು ಅರ್ಥಶಾಸ್ತ್ರ ಕಾಲೇಜಿನಲ್ಲಿ ಭೇಟಿಯಾಗಿದ್ದರು. ಭರತನಾಟ್ಯ ನೃತ್ಯಗಾರ್ತಿ ಹಾಗೂ ನೃತ್ಯ ತರಬೇತುದಾರರಾಗಿರುವ ದೇವಿಶಾ ಶೆಟ್ಟಿ ಹಾಗೂ ಸೂರ್ಯಕುಮಾರ್ ಯಾದವ್ ಆರು ವರ್ಷಗಳ ಕಾಲ ಪ್ರೇಮಿಗಳಾಗಿದ್ದರು. ನಂತರ ಇಬ್ಬರೂ ವಿವಾಹವಾದರು. ಕಳೆದ ವಾರವಷ್ಟೇ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಇದೇ ಸಂಭ್ರಮದಲ್ಲೇ ಅಭಿಮಾನಿಗಳು ತೇಲುತ್ತಿರುವಾಗಲೇ ಸೂರ್ಯ ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಸೂರ್ಯಕುಮಾರ್ ಪತ್ನಿ ದೇವಿಶಾ ಶೆಟ್ಟಿ ಕರಾವಳಿಯವರು. ಉಡುಪಿ ಜಿಲ್ಲೆಯ ಕಾಪು ದೇವಿಶಾ ಶೆಟ್ಟಿಯ ತವರೂರು.

ನೋಡಿರಿ

