ಮನುಷ್ಯರಿಗಿಂತ ತಂತ್ರಜ್ಞಾನಕ್ಕೆ ಜೈ ಎಂದ ಉದ್ಯಮಿಗಳು – 50 ಪರ್ಸೆಂಟ್ ನೌಕರರ ಕೆಲಸಕ್ಕೆ ಕತ್ತರಿ..!

ಮನುಷ್ಯರಿಗಿಂತ ತಂತ್ರಜ್ಞಾನಕ್ಕೆ ಜೈ ಎಂದ ಉದ್ಯಮಿಗಳು – 50 ಪರ್ಸೆಂಟ್ ನೌಕರರ ಕೆಲಸಕ್ಕೆ ಕತ್ತರಿ..!

ಮೈಕ್ರೋಸಾಫ್ಟ್ ಬೆಂಬಲಿತ ಚಾಟ್ ಜಿಪಿಟಿ ಸದ್ಯ ಜಗತ್ತಿನಲ್ಲಿ ಅತೀ ಹೆಚ್ಚು ಚರ್ಚೆಯಾಗುತ್ತಿದೆ.. 2022ರ ನವೆಂಬರ್ ನಿಂದ ಪ್ರಾರಂಭವಾದ AI-ಚಾಲಿತ ಚಾಟ್‌ಬಾಟ್ ಈಗ ಹೆಚ್ಚು ಜನಪ್ರಿಯತೆ ಗಳಿಸಿದೆ. ಕವನ ಮತ್ತು ಸಂಗೀತವನ್ನು ರಚಿಸುವುದರಿಂದ ಹಿಡಿದು ಪ್ರಬಂಧಗಳನ್ನು ಬರೆಯುವವರೆಗೆ ಚಾಟ್‌ಬಾಟ್ ವಿವಿಧ ಕೆಲಸಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನ ಸಾಬೀತುಪಡಿಸಿದೆ. ಈಗಾಗ್ಲೇ ಚಾಟ್ ಜಿಪಿಟಿ ಎಂಬಿಎ ಪರೀಕ್ಷೆಯನ್ನ ಕ್ಲಿಯರ್ ಮಾಡಿರುವುದರ ಜೊತೆಗೆ ಪ್ರವೇಶ ಮಟ್ಟದ ಕೋಡಿಂಗ್ ಕೆಲಸಗಳಿಗೂ ಅರ್ಹತೆ ಪಡೆದಿದೆ. ಚಾಟ್ ಜಿಪಿಟಿಯ ಇದೇ ಫೀಚರ್ಸ್ ಈಗ ಮತ್ತೊಂದು ಪ್ರಶ್ನೆ ಹುಟ್ಟು ಹಾಕಿದೆ. ಅದುವೇ ಮನುಷ್ಯರ ಕೆಲಸ ಕಿತ್ತುಕೊಳ್ಳಲಿದೆ ಅನ್ನೋದು. ಹೌದು ಇತ್ತೀಚಿನ ಸಮೀಕ್ಷೆಯ ಪ್ರಕಾರ, ಚಾಟ್‌ಜಿಪಿಟಿಯಿಂದ ಈಗಾಗಲೇ ಕೆಲಸದ ಸ್ಥಳಗಳಲ್ಲಿ ಮನುಷ್ಯರನ್ನು ಬದಲಿಸಲು ಕಂಪನಿಗಳು ಪ್ರಾರಂಭಿಸಿದೆ.

ಇದನ್ನೂ ಓದಿ : 91ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿಗೆ ಪ್ರೇಮಾಂಕುರ – ಕುಬೇರನ ಮನಗೆದ್ದ ಚೆಲುವೆ ಯಾರು ಗೊತ್ತಾ?

ಸಮೀಕ್ಷೆಯೊಂದರ ಪ್ರಕಾರ, ಅದರಲ್ಲಿ ಭಾಗವಹಿಸಿದ ಸುಮಾರು 50 ಪ್ರತಿಶತ ಅಮೆರಿಕದ ಕಂಪನಿಗಳು ChatGPT ಅನ್ನು ಬಳಸಲು ಪ್ರಾರಂಭಿಸಿವೆ. ಹಾಗೇ ಕೆಲ US ಮೂಲದ ಕಂಪನಿಗಳು ಮಾನವ ಕೆಲಸಗಾರರ ಬದಲಿಗೆ ChatGPT ಅನ್ನು ನಿಯೋಜಿಸಲು ಪ್ರಾರಂಭಿಸಿವೆ ಎಂದು ಬಹಿರಂಗಪಡಿಸಿದೆ. 1,000 ಉದ್ಯಮಿಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದು ಈ ಪೈಕಿ ಅರ್ಧದಷ್ಟು ಜನ ChatGPT ಅನ್ನು ಬಳಸುತ್ತಿದ್ದಾರೆ ಮತ್ತು ತಮ್ಮ ಕಂಪನಿಗಳಲ್ಲಿ ಕೆಲಸಗಾರರನ್ನು ಬದಲಿಸಿವೆ ಎಂದು ಹೇಳಿದ್ದಾರೆ.

ಇನ್ನು ChatGPT ಅನ್ನು OpenAI ನಿಂದ ರಚಿಸಲಾಗಿದೆ. ಇನ್ನು ಚಾಟ್ ಜಿಪಿಟಿ ಕಂಪನಿಯನ್ನು 2015 ರಲ್ಲಿ ಸ್ಯಾಮ್ ಆಲ್ಟ್‌ಮ್ಯಾನ್ ಮತ್ತು ಎಲಾನ್ ಮಸ್ಕ್ ಸ್ಥಾಪಿಸಿದ್ದರು. ಬಳಿಕ ಮಸ್ಕ್‌ ಇತರ ಎರಡು ಕಂಪನಿಗಳಾದ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಜವಾಬ್ದಾರಿ ವಹಿಸಿಕೊಂಡಿದ್ದರಿಂದ OpenAI ಗೆ ರಾಜೀನಾಮೆ ನೀಡಿದ್ರು.

 

suddiyaana