ಏ.8ರಿಂದ ‘ನಮ್ಮ ಮೆಟ್ರೊ’ ಪ್ರಯಾಣಿಕರ ತೃಪ್ತಿ ಸಮೀಕ್ಷೆ! – ನೀವು ಭಾಗವಹಿಸಲು ಹೀಗೆ ಮಾಡಿ
ಸಿಲಿಕಾನ್ ಸಿಟಿಯ ಸಂಚಾರ ಜೀವನಾಡಿ ನಮ್ಮ ಮೆಟ್ರೋ ಎಂದೇ ಹೇಳಬಹುದು. ಆಫೀಸ್ಗೆ ಹೋಗಲು, ಕಾಲೇಜ್ಗೆ ಹೋಗಲು ಸಾವಿರಾರು ಮಂದಿ ಮೆಟ್ರೋವನ್ನೇ ಅವಲಂಭಿಸಿದ್ದಾರೆ. ಅನೇಕರು ಪ್ರಯಾಣಕ್ಕಾಗಿ ನಮ್ಮ ಮೆಟ್ರೋವನ್ನೇ ಅವಲಂಭಿಸಿರೋದ್ರಿಂದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಪ್ರಯಾಣಿಕರಿಗೆ ಬೇಕಾದ ಸೌಕರ್ಯಗಳನ್ನು ಒದಗಿಸುತ್ತಾ ಬಂದಿದೆ. ಇದೀಗ ಬಿಎಂಆರ್ಸಿಎಲ್ ನಿಗಮವು ಸಮೀಕ್ಷೆಯನ್ನು ನಡೆಸುತ್ತಿದೆ.
ಇದನ್ನೂ ಓದಿ: ಎಲೆಕ್ಷನ್ಗೆ ನಿಂತ ಬೆನ್ನಲ್ಲೇ 2.46 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ!
ಹೌದು, ಬಿಎಂಆರ್ಸಿಎಲ್ ಬಿಎಂಆರ್ಸಿಎಲ್ ನಿಗಮವು ‘ಮೆಟ್ರೋ ಪ್ರಯಾಣಿಕರ ತೃಪ್ತಿ ಸಮೀಕ್ಷೆ’ಯನ್ನು ಸಂಗ್ರಹಿಸಲು ಮುಂದಾಗಿದೆ. ಮೆಟ್ರೋ ರೈಲಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಮ್ಮ ಮೆಟ್ರೋದಲ್ಲಿ ಆಗಬೇಕಾದ ಬದಲಾವಣೆ ಏನು? ಈ ಎಲ್ಲದರ ಕುರಿತು ನಿಮ್ಮ ಅನಿಸಿಕೆಗಳನ್ನು ಪ್ರಯಾಣಿಕರು ನೀಡಬಹುದಾಗಿದೆ. ಈ ಸಮೀಕ್ಷೆಯನ್ನು ಬಿಎಂಆರ್ಸಿಎಲ್ ಎಪ್ರಿಲ್ 8 ರಿಂದ ಮೇ 6 ರವರೆಗೆ ನಡೆಸಲಿದೆ.
ಮೆಟ್ರೋ ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಅಗತ್ಯವಾಗಿ ಆಗಬೇಕಾದ ಬದಲಾವಣೆ ಮಾಡಿಕೊಳ್ಳಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಜೊತೆಗೆ ಲಂಡನ್ನ ಇಂಪೀರಿಯಲ್ ಕಾಲೇಜ್ ಮೆಟ್ರೋಗಾಗಿ ನಡೆಸಲಿರುವ ಕಾರ್ಯಸೂಚಿ ಅಧ್ಯಯನಕ್ಕೂ ಇದು ನೆರವಾಗಲಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.
ಕನ್ನಡ, ಇಂಗ್ಲೀಷ್ನಲ್ಲಿ ಸಮೀಕ್ಷೆ ನಡೆಯಲಿದ್ದು, ಪ್ರಯಾಣಿಕರು www.bmrc. co.in ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಸಮೀಕ್ಷೆಯ ಕ್ಯೂಆರ್ ಕೋಡ್ಅನ್ನು ರೈಲ್ವೇ ನಿಲ್ದಾಣದಲ್ಲಿ ಪ್ರದರ್ಶಿಸಲಾಗುವುದು. ಹೆಚ್ಚಿನ ಮಾಹಿತಿಗೆ 1800-425-12345ಗೆ ಸಂಪರ್ಕಿಸಬಹುದಾಗಿದೆ.