ನವರಾತ್ರಿ ಸ್ಪೆಷಲ್ – ಮನೆಯಲ್ಲೇ ಮಾಡಿ ರುಚಿಯಾದ ಸಬ್ಬಕ್ಕಿ ಖಿಚಡಿ!

ನವರಾತ್ರಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಈ ಸಮಯದಲ್ಲಿ ನಾವು ಸುಲಭವಾಗಿ ತಯಾರಿಸಬಹುದಾದ ರುಚಿಕರವಾದ ಸಬ್ಬಕ್ಕಿ ಖಿಚಡಿ ಮಾಡುವ ವಿಧಾನವನ್ನು ತಿಳಿಯೋಣ!
ಮೊದಲಿಗೆ ಒಂದು ಕಪ್ ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು, ಅಗತ್ಯವಿರುವಷ್ಟು ನೀರು ಹಾಕಿ ಕೆಲವು ಗಂಟೆಗಳ ಕಾಲ ನೆನೆಸಿಡಿ. ಸಬ್ಬಕ್ಕಿ ಮೃದುವಾಗಿ ಉಬ್ಬಿದ ಬಳಿಕ ಅದರಲ್ಲಿರುವ ಹೆಚ್ಚುವರಿ ನೀರನ್ನು ಬಸಿದು ಪಕ್ಕಕ್ಕಿಡಿ.
ಇದನ್ನೂ ಓದಿ: 108 ಅಕ್ಕಿ ಕಾಳುಗಳಿಂದ ದುರ್ಗಾದೇವಿಯ ಪೂಜೆ! – ನವರಾತ್ರಿಯಲ್ಲಿ ಈ ಮಂತ್ರ ಜಪಿಸಿದರೆ ಏನು ವಿಶೇಷ?
ಈಗ ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿಮಾಡಿ. ಅದಕ್ಕೆ ಜೀರಿಗೆ, ಹಸಿಮೆಣಸಿನಕಾಯಿ ಹಾಗೂ ಸಣ್ಣಗೆ ಹೆಚ್ಚಿದ ಶುಂಠಿಯನ್ನು ಸೇರಿಸಿ ಹುರಿಯಿರಿ. ನಂತರ ಸಣ್ಣಗೆ ಹೆಚ್ಚಿದ ಬೇಯಿಸಿದ ಆಲೂಗಡ್ಡೆ ಮತ್ತು ನೆಲಗಡಲೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಇದಕ್ಕೆ ನೆನೆಸಿಟ್ಟ ಸಬ್ಬಕ್ಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಿಧಾನವಾಗಿ ಕಲಸಿ. ಸಬ್ಬಕ್ಕಿ ಪಾರದರ್ಶಕವಾಗಿ ಕಾಣುವವರೆಗೆ ಕೆಲವು ನಿಮಿಷ ಬೇಯಿಸಿ. ಕೊನೆಯಲ್ಲಿ ಸ್ವಲ್ಪ ನಿಂಬೆ ರಸ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ಬಿಸಿಬಿಸಿಯಾದ ಸಬ್ಬಕ್ಕಿ ಖಿಚಡಿ ಸಿದ್ಧ!
ರುಚಿಕರವಾಗಿರುವ ಈ ಖಾದ್ಯವನ್ನು ನವರಾತ್ರಿ ಉಪವಾಸದ ಆಹಾರವಾಗಿ ಬಳಸಬಹುದು. ಆದರೆ ನಿಮ್ಮ ಉಪವಾಸದ ನಿಯಮಗಳಿಗೆ ಅನುಗುಣವಾಗಿ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳಿ.

ನೋಡಿರಿ

