ಕೊನೆಗೂ ಮುಖದ ಮೇಲೆ ಮೂಡಿದ ಮೂಗು!- ಮೊದಲ ಬಾರಿಗೆ ಯಶಸ್ವಿ ಮೂಗಿನ ಕಸಿ

ಕೊನೆಗೂ ಮುಖದ ಮೇಲೆ ಮೂಡಿದ ಮೂಗು!- ಮೊದಲ ಬಾರಿಗೆ ಯಶಸ್ವಿ ಮೂಗಿನ ಕಸಿ

ಪ್ಯಾರಿಸ್: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ತನ್ನ ಮೂಗನ್ನು ಕಳೆದುಕೊಂಡಿದ್ದು, ನಂತರ ಮಹಿಳೆಯ ಕೈಮೇಲೆ ಯಶಸ್ವಿಯಾಗಿ ಬೆಳೆಯಲಾದ ಬದಲಿ ಮೂಗಿನ ರಚನೆಯನ್ನು ಆಕೆಯ ಮುಖಕ್ಕೆ ಕಸಿ  ಮಾಡುವ ಮೂಲಕ ಫ್ರಾನ್ಸ್ ಸರ್ಜನ್ ಗಳು ವೈದ್ಯಕೀಯ ಲೋಕದಲ್ಲಿ ಚಮತ್ಕಾರವೊಂದನ್ನು ಸೃಷ್ಟಿಸಿದ್ದಾರೆ.

ಇದನ್ನೂ ಓದಿ: ಶೇ.21 ರಷ್ಟು ತೆಲಂಗಾಣ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲ- ಅಧ್ಯಯನ ವರದಿಯಿಂದ ಬಹಿರಂಗ

ಟೌಲೌಸ್ ಮೂಲದ ಮಹಿಳೆಯೊಬ್ಬಳು ಮೂಗಿನ ಕ್ಯಾವಿಟಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಳು. 2013ರಿಂದಲೂ ರೆಡಿಯೋಥೆರಫಿ ಮತ್ತು ಕಿಮೋಥೆರಫಿ ಚಿಕಿತ್ಸೆಗೆ ಒಳಗಾಗಿದ್ದಳು. ಇದರ ಪರಿಣಾಮವಾಗಿ ಆಕೆ ತನ್ನ ಮೂಗಿನ ಬಹುತೇಕ ಭಾಗಗಳನ್ನು ಕಳೆದುಕೊಳ್ಳುತ್ತಾ ಬಂದಿದ್ದಳು. ಇದರಿಂದ ಆಕೆ ಹಲವು ವರ್ಷಗಳ ಕಾಲ ದೇಹದ ಪ್ರಮುಖ ಅಂಗ ಮೂಗು ಇಲ್ಲದೇ ಬದುಕಿದ್ದಳು. ತನ್ನ ಮೂಗನ್ನು ಮರಳಿ ಪಡೆಯಲು ಅನೇಕ ಪ್ರಯತ್ನಗಳನ್ನು ಮಾಡಿದ್ದಳು. ಇದೀಗ ಫ್ರಾನ್ಸ್ ಸರ್ಜನ್ ಗಳು ವೈದ್ಯಕೀಯ ಲೋಕದಲ್ಲಿ ಸೃಷ್ಟಿ ಮಾಡಿದ್ದು, ಆಕೆ ಮತ್ತೆ ತನ್ನ ಮೂಗನ್ನು ಮರಳಿ ಪಡೆದಿದ್ದಾಳೆ.

ಹೌದು, ಫ್ರಾನ್ಸ್ ನ ಸರ್ಜನ್ ಗಳು ವೈದ್ಯಕೀಯ ಲೋಕದಲ್ಲಿ ಅಚ್ಚರಿಯನ್ನು ಸೃಷ್ಟಿಸಿದ್ದು, ಮಹಿಳೆಯ ಕೈ ಮೇಲೆ ಬದಲಿ ಮೂಗಿನ ರಚನೆಯನ್ನು ಕಸಿ ಮಾಡಿ ಬಳಿಕ ಆಕೆಯ ಮೂಗಿಗೆ ಜೋಡಿಸಿದ್ದಾರೆ.

ಮೂಲಗಳ ಪ್ರಕಾರ ಮೊದಲಿಗೆ 3ಡಿ ಮುದ್ರಿತ ಜೈವಿಕ ವಸ್ತುಗಳಿಂದ ತಯಾರಿಸಿದ ಮೂಗನ್ನು ಮಹಿಳೆಯ ತೋಳಿಗೆ ಅಳವಡಿಸಲಾಯಿತು. ನಂತರ ಅದು ಮಹಿಳೆಯ ಚರ್ಮದಿಂದ ಸುತ್ತುವರಿಯುವಂತೆ ಮಾಡಲಾಯಿತು. ಶಸ್ತ್ರಚಿಕಿತ್ಸಕರು ಮಹಿಳೆಯ ತೋಳಿನಲ್ಲಿ ಮೂಗನ್ನು ಬೆಳೆಯಲು 2 ತಿಂಗಳು ನೀಡಿದರು. ಬಳಿಕ ಆ ಮೂಗನ್ನು ಮಹಿಳೆಯ ಮುಖಕ್ಕೆ ಕಸಿ ಮಾಡಿದ್ದಾರೆ.

ಈ ಹೊಸ ಪ್ರಯತ್ನದ ಬಗ್ಗೆ ಟೌಲೌಸ್ ಯೂನಿವರ್ಸಿಟಿ ಹಾಸ್ಪಿಟಲ್ (ಸಿಹೆಚ್‌ಯು) ಫೇಸ್‌ಬುಕ್‌ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದೆ. ಮಹಿಳೆಯ ತೋಳಿನಲ್ಲಿ ಮೂಗು ಬೆಳೆದಿರುವ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ಅದನ್ನು ಮಹಿಳೆಯ ಮುಖಕ್ಕೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ತಿಳಿಸಿದೆ.

suddiyaana