ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ – ವಿಮಾನದಿಂದ ಕೆಳಗಿಳಿಸಿ ಕಾಂಗ್ರೆಸ್ ನಾಯಕನ ಬಂಧನ!

ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ – ವಿಮಾನದಿಂದ ಕೆಳಗಿಳಿಸಿ ಕಾಂಗ್ರೆಸ್ ನಾಯಕನ ಬಂಧನ!

ದೆಹಲಿ ಏರ್​​ಪೋರ್ಟ್​​ನಲ್ಲಿ ಇಂದು ದೊಡ್ಡ ಹೈಡ್ರಾಮವೇ ನಡೆದಿದೆ. ಪ್ರಧಾನಿ ಮೋದಿಯನ್ನ ನರೇಂದ್ರ ಗೌತಮ್​​ದಾಸ್ ಮೋದಿ ಅಂತಾ ಕರೆದಿದ್ದ ಕಾಂಗ್ರೆಸ್ ಹಿರಿಯ ನಾಯಕ ಪವನ್​ ಖೇರಾರನ್ನ ವಿಮಾನದಿಂದ ಕೆಳಗಿಳಿಸಿ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

ಎಐಸಿಸಿ ಸಭೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ದೆಹಲಿಯಿಂದ ಛತ್ತೀಸ್​ಗಢದ ರಾಯ್​​ಪುರ್​ಗೆ ಹೊರಟಿದ್ರು. ಇಂಡಿಗೋ ವಿಮಾನವನ್ನ ಕೂಡ ಏರಿದ್ರು. ಇನ್ನೇನು ಕೆಲ ಹೊತ್ತಲ್ಲೇ ವಿಮಾನ ಟೇಕ್​​ಆಫ್​ ಆಗಬೇಕಿತ್ತು. ಆದ್ರೆ ಅಷ್ಟೊತ್ತಿಗೆ ವಿಮಾನದೊಳಗೆ ನುಗ್ಗಿದ ಪೊಲೀಸರು ಸೀಟ್​ನಲ್ಲಿ ಕುಳಿತಿದ್ದ ಕುಳಿತಿದ್ದ ಪವನ್​ ಖೇರಾ ಅವರನ್ನ ಮೇಲಕ್ಕೆ ಎಬ್ಬಿಸಿದ್ದಾರೆ. ಈ ವೇಳೆ ಒಂದಷ್ಟು ವಾಗ್ವಾದ ಕೂಡ ನಡೀತು. ಬಳಿಕ ಪವನ್​ರನ್ನ ವಿಮಾನದಿಂದ ಕೆಳಕ್ಕಿಳಿಸಲಾಗಿದೆ. ಅದೇ ವಿಮಾನದಲ್ಲಿದ್ದ ರಣ್​ದೀಪ್ ಸುರ್ಜೇವಾಲಾ ಸೇರಿದಂತೆ ಇನ್ನಿತರೆ ಕಾಂಗ್ರೆಸ್​ ನಾಯಕರು ಕೂಡ ವಿಮಾನದಿಂದ ಕೆಳಕ್ಕಿಳಿದ್ರು. ಅಷ್ಟೇ ಅಲ್ಲ, ವಿಮಾನದ ಬುಡದಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ರು. ಬಳಿಕ ಅಸ್ಸಾಂ ಪೊಲೀಸರು ಪವನ್​ ಖೇರಾರನ್ನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಸಿಂ‘ಹಾಸನ’ ಗಟ್ಟಿ ಮಾಡಿಕೊಂಡರಾ ಭವಾನಿ ರೇವಣ್ಣ..?- ಟಿಕೆಟ್ ಫೈನಲ್ ಗೂ ಮುನ್ನವೇ ಅಬ್ಬರದ ಪ್ರಚಾರ!

ಪ್ರಧಾನಿ ಬಗ್ಗೆ ಪವನ್​ ಖೇರಾ ನೀಡಿದ್ದ ಹೇಳಿಕೆ ವಿರುದ್ಧ ಅಸ್ಸಾಂನಲ್ಲಿ ಕೇಸ್​ ದಾಖಲಾಗಿತ್ತು. ಹೀಗಾಗಿ ಅಸ್ಸಾಂ ಪೊಲೀಸರು ದೆಹಲಿಗೆ ಆಗಮಿಸಿ ಏರ್​ಪೋರ್ಟ್​​ನಲ್ಲೇ ಪವನ್​ರನ್ನ ಅರೆಸ್ಟ್ ಮಾಡಿದ್ದಾರೆ. ಇನ್ನು ತಮ್ಮ ಹೇಳಿಕೆಗೆ ಬಾಯಿ ತಪ್ಪಿ ಈ ಮಾತು ಬಂದಿದೆ ಅಂತಾ ಈಗಾಗ್ಲೇ ಪವನ್ ಖೇರಾ ಕ್ಷಮೆಯಾಚಿಸಿದ್ರು. ನನ್ನಿಂದ ತಪ್ಪಾಗಿದೆ ಅಂತಾನೂ ಒಪ್ಪಿಕೊಂಡಿದ್ರು. ಇನ್ನು ಪವನ್​ ಬಂಧನವಾಗುತ್ತಲೇ ಕಾಂಗ್ರೆಸ್ ಕೆಂಡಾಮಂಡಲವಾಗಿದ್ದು, ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದು ಸರ್ವಾಧಿಕಾರವಲ್ಲದೆ ಮತ್ತಿನ್ನೇನು ಅಂತಾ ಆರೋಪಿಸಿದೆ. ಅಷ್ಟೇ ಅಲ್ಲ, ತಮ್ಮ ಬಂಧನ ಪ್ರಶ್ನಿಸಿ ಪವನ್ ಖೇರಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ರು. ಪವನ್ ಬಾಯಿ ತಪ್ಪಿ ಇಂಥಾ ಹೇಳಿಕೆ ಕೊಟ್ಟಿದ್ದಾರೆ. ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೂಡ ಯಾಚಿಸಿದ್ದಾರೆ ಅಂತಾ ವಕೀಲ ಅಭಿಷೇಕ್ ಮನುಸಿಂಘ್ವಿ ಕೋರ್ಟ್​​ನಲ್ಲಿ ವಾದಿಸಿದ್ರು. ಆದ್ರೆ, ಇದು ಬಾಯಿ ತಪ್ಪಿ ಬಂದಿರೋದಲ್ಲ. ಉದ್ದೇಶಪೂರ್ವಕವಾಗಿಯೇ ಮೋದಿ ವಿರುದ್ಧ ಹೇಳಿಕೆ ನೀಡಿದ್ದಾರೆ ಅಂತಾ ಅಸ್ಸಾಂ ಸರ್ಕಾರದ ಪರ ವಕೀಲರು ಪ್ರತಿವಾದ ಮಂಡಿಸಿದ್ರು. ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳ ಮುಂದೆ ಮೋದಿ ಕುರಿತು ಪವನ್ ಖೇರಾ ಅವರ ವಿವಾದಾತ್ಮಕ ಹೇಳಿಕೆಯನ್ನ ಕೂಡ ಪ್ರಸಾರ ಮಾಡಲಾಯ್ತು. ಅಂತಿಮವಾಗಿ ಕೋರ್ಟ್ ಪವನ್​ ಖೇರಾಗೆ ಮಧ್ಯಂತರ ಜಾಮೀನು ನೀಡಿದ್ದು, ಕಾಂಗ್ರೆಸ್​ ನಾಯಕನಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಸೋಮವಾರ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

ಇನ್ನು ಪವನ್ ಖೇರಾ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಕೆಂಡ ಕಾರಿದ್ದಾರೆ. ಕಾಂಗ್ರೆಸ್ ಎಷ್ಟು ಕೆಳಮಟ್ಟಕ್ಕೆ ತಲುಪಿದೆ ಅನ್ನೋದಕ್ಕೆ ಇದೇ ಸಾಕ್ಷಿ. ಮೋದಿ ಬಗ್ಗೆ ಕಾಂಗ್ರೆಸ್ ನಾಯಕರ ಇಂಥಾ ಅವಮಾನಕಾರಿ ಹೇಳಿಕೆಗಳಿಗೆ ಜನರೇ ತಕ್ಕ ಉತ್ತರ ಕೊಡ್ತಾರೆ ಅಂತಾ ಅಮಿತ್ ಶಾ ಹೇಳಿದ್ರು. ಕಾಂಗ್ರೆಸ್​ನ ನಾಯಕನ ಈ ಹೇಳಿಕೆಯನ್ನ ಭಾರತೀಯರು ಯಾವುದೇ ಕಾರಣಕ್ಕೂ ಮರೆಯಲ್ಲ. ಕ್ಷಮಿಸೋದೂ ಇಲ್ಲ ಅಂತಾ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಹೇಳಿದ್ರು.

 

 

suddiyaana